8:38 PM Sunday5 - April 2026
ಬ್ರೇಕಿಂಗ್ ನ್ಯೂಸ್
ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ… ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ: ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ’: ರಾಜ್ಯಪಾಲರಿಗೆ ಕರವೇ ನಾರಾಯಣ ಗೌಡ ಖಡಕ್… ದೇಶದಲ್ಲೇ ಅತಿ ಹೆಚ್ಚು | ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು Kodagu | ಕುಶಾಲನಗರ: ಹರದೂರು – ಕಾಜೂರು ಮಕಾಂ ಉರೂಸ್ ಗೆ ಚಾಲನೆ ತ.ನಾ. ಚುನಾವಣೆ | ಚಾಮರಾಜನಗರ ಸಮೀಪದ ಮೆಟ್ಟೂರು ಕ್ಷೇತ್ರದಿಂದ ವೀರಪ್ಪನ್‌ ಪುತ್ರಿ ವಿದ್ಯಾರಾಣಿ… ಅಡಿಕೆಯೊಳಗಿದ್ದ ಸ್ಫೋಟಕ ಸಿಡಿದು ಮಹಿಳೆಗೆ ಗಾಯ: ಅಡಿಕೆಯಲ್ಲಿ ಇದ್ದಿದ್ದಾದರೂ ಏನು..? ಪ್ರಕರಣದ ಸತ್ಯಾಂಶ… ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನಡೆದ ಪುರಾಣ ಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ…

ಇತ್ತೀಚಿನ ಸುದ್ದಿ

ವಿದ್ಯಾರ್ಥಿಗಳೇ, ಅಲ್ ದಿ ಬೆಸ್ಟ್: ಪರೀಕ್ಷೆಯೆಂಬ ಭಯ ಬೇಡ, ಹಬ್ಬದಂತೆ ಸಂಭ್ರಮಿಸಿ!!

23/03/2022, 09:57

ಮಾರ್ಚ್ ತಿಂಗಳು ಬರುತ್ತಿದ್ದಂತೆ ಭೂಮಿಯ ವಾತಾವರಣದಲ್ಲಿ ಬಿಸಿಯ ಕಾವು ಹೆಚ್ಚಲು ಆರಂಭವಾಗುತ್ತದೆ. ಅದೇ ರೀತಿ ಶಿಕ್ಷಣ ವ್ಯವಸ್ಥೆಯಲ್ಲಿ ಮಾರ್ಚ್ ತಿಂಗಳು ಪ್ರಾರಂಭವಾದರೆ ಪರೀಕ್ಷೆಗಳ ಪರ್ವ ಆರಂಭವಾಗುತ್ತವೆ.

ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳು ಅತಿ ಅನಿವಾರ್ಯವಾಗಿದೆ. ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರವಾದ ಘಟ್ಟವಾಗಿದೆ. ವಿದ್ಯಾರ್ಥಿಗಳು ಇಡೀ ಶೈಕ್ಷಣಿಕ ವರ್ಷದಲ್ಲಿ ಕಲಿತಂತಹ ವಿಷಯಗಳನ್ನು ಮೂರು ಗಂಟೆಯ ಸಮಯದಲ್ಲಿ ಒರೆ ಹಚ್ಚುವ ಸಂದರ್ಭವಾಗಿರುತ್ತದೆ.

ಪರೀಕ್ಷೆಯು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕಲಿಕಾ ಸಾಮರ್ಥ್ಯದ ವಿಶ್ಲೇಷಣೆಗೆ ಸಾಧನವಾಗಿದೆ ಹಾಗೂ ಮುಂದಿನ ಗುರಿಯನ್ನು ತಲುಪಲು ಬೇಕಾದ ದಾರಿಯಾಗಿರುತ್ತದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆಯ  ಸಮಯದಲ್ಲಿ ಒತ್ತಡಕ್ಕೆ ಒಳಗಾಗುವುದು ಸಹಜ. ಶಿಕ್ಷಕರ ಮತ್ತು ಪೋಷಕರ ಸರಿಯಾದ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗುವುದನ್ನು ತಪ್ಪಿಸಬಹುದಾಗಿದೆ.

ಎಲ್ಲಾ ಹೆತ್ತವರು ತಮ್ಮ ಮಕ್ಕಳು ಉತ್ತಮ ಅಂಕ ಗಳಿಸಿ  ಜೀವನದಲ್ಲಿ ಉನ್ನತ ಸ್ಥಾನವನ್ನು ಹೊಂದಬೇಕು ಎಂದು ಬಯಸುವುದು ಸಹಜ.

ಆದರೆ ಮಕ್ಕಳ ಮೇಲೆ ಒತ್ತಡವನ್ನು ಹೇರಿದರೆ ಅದರಿಂದ ಅಡ್ಡಪರಿಣಾಮ ಆಗುವುದಂತೂ ಖಂಡಿತ.

ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲು ಪ್ರಾರಂಭದಲ್ಲಿಯೇ ಸಿದ್ಧತೆಯನ್ನು ಮಾಡಿಕೊಳ್ಳಬೇಕು.”ಯುದ್ಧ ಕಾಲೇ ಶಸ್ತ್ರಾಭ್ಯಾಸ” ಎಂಬಂತೆ ಆಗಬಾರದು.

ಹೆತ್ತವರು ವಿದ್ಯಾರ್ಥಿಗಳಿಗೆ ಓದಲು ಅನುಕೂಲಕರವಾದ ಪರಿಸರವನ್ನು ನಿರ್ಮಿಸಬೇಕು.

ಪ್ರತಿನಿತ್ಯ ಉತ್ತಮವಾದ ಆಹಾರವನ್ನು ಮಕ್ಕಳು ಸೇವಿಸುವಂತೆ ಪೋಷಕರು ನೋಡಿಕೊಳ್ಳಬೇಕು. 

ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಮಾಡಿ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಪರೀಕ್ಷೆಯನ್ನು ಎದುರಿಸಲು ಕಷ್ಟವಾಗದು. ಸರಿಯಾದ ಸಮಯಕ್ಕೆ ನಿದ್ದೆ , ಊಟ ವಿಶ್ರಾಂತಿಯನ್ನು ಪಡೆಯಬೇಕು.ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. 

ಏಕಾಗ್ರತೆಗಾಗಿ ಸರಳ ಪ್ರಾಣಾಯಾಮ , ಧ್ಯಾನ ಯೋಗ ಮಾಡಿದರೆ ಉತ್ತಮ.

ವಿದ್ಯಾರ್ಥಿಗಳು, ಪೋಷಕರು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಮಕ್ಕಳನ್ನುಇತರ ಮಕ್ಕಳೊಂದಿಗೆ  ಹೋಲಿಸಿಕೊಳ್ಳದೇ, ಪ್ರತಿಯೊಂದು ಮಗುವು ಅನನ್ಯ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು.

ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನಾ ಪತ್ರಿಕೆ ಸಿಕ್ಕಿದ ತಕ್ಷಣ ಬರೆಯಬಾರದು. ಪ್ರಶ್ನಾ ಪತ್ರಿಕೆಯನ್ನು ಸಾವಕಾಶವಾಗಿ ಓದಿ, ಎಲ್ಲಾ ಪ್ರಶ್ನೆಗಳಿಗೆ ನಿಗದಿತ ಸಮಯದೊಳಗೆ ಅಂದವಾಗಿ ಸರಿಯಾಗಿ ಬರೆಯಲು ಪ್ರಯತ್ನಿಸಬೇಕು.

ಈ ಎಲ್ಲಾ ವಿಷಯಗಳನ್ನು ವಿದ್ಯಾರ್ಥಿಗಳು ಮನಸ್ಸಿನಲ್ಲಿಟ್ಟುಕೊಂಡು ಪರೀಕ್ಷೆಯನ್ನು ಎದುರಿಸಿದರೆ ಯಶಸ್ಸು ಮತ್ತು ಉತ್ತಮ ಅಂಕಗಳನ್ನು ಗಳಿಸುವುದರಲ್ಲಿ ಸಂಶಯವಿಲ್ಲ.

ವಿದ್ಯಾರ್ಥಿಗಳು  ಪರೀಕ್ಷೆಯನ್ನು ಶಿಕ್ಷೆ, ಮಾನಸಿಕ ಒತ್ತಡ  ಎಂದು ಭಾವಿಸದೆ ವರ್ಷಕ್ಕೊಮ್ಮೆ ಬರುವ ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಎದುರಿಸಿದರೆ ಪರೀಕ್ಷಾ ಭಯ ಹೋಗಿ   ಸಂತಸದ ವಾತಾವರಣ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ…

✍️

ಇತ್ತೀಚಿನ ಸುದ್ದಿ

ಜಾಹೀರಾತು