1:11 PM Friday20 - September 2024
ಬ್ರೇಕಿಂಗ್ ನ್ಯೂಸ್
ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ

ಇತ್ತೀಚಿನ ಸುದ್ದಿ

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ: ಜ್ಞಾನಬಲದೊಂದಿಗೆ ಮನೋಬಲವೂ ವೃದ್ಧಿ

22/11/2021, 16:04

ಶಿಕ್ಷಣವೆನ್ನುವುದು ನಾಲ್ಕು ಗೋಡೆಗಳ ಮಧ್ಯೆ ಕಲಿಯುವ  ಪ್ರಕ್ರಿಯೆಯಲ್ಲ. ಇಂದಿನ ಶಿಕ್ಷಣವು ವಿದ್ಯಾರ್ಥಿ ಕೇಂದ್ರಿತ ಪದ್ಧತಿಯಾಗಿದೆ. ಇದರಂತೆ ಪಠ್ಯಪುಸ್ತಕದಿಂದ ಹೊರತಾದ, ಅದಕ್ಕೆ ಪೂರಕವಾದ ಚಟುವಟಿಕೆಗಳ ಮೂಲಕ ವಿದ್ಯಾರ್ಥಿ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯಕ. ವಿದ್ಯಾರ್ಥಿ ಕೇಂದ್ರಿತ  ಶಿಕ್ಷಣದ ಗುರಿ ಸಾಧಿಸಲು ನಾವು ಶಾಲೆಗಳಲ್ಲಿ ಅನೇಕ ಚಟುವಟಿಕೆ ಕೈಗೊಳ್ಳಬಹುದು. ಇವುಗಳಲ್ಲಿ ಕ್ಷೇತ್ರ ಪ್ರವಾಸವೂ ಒಂದು.


ಕ್ಷೇತ್ರ ಪ್ರವಾಸ ಎನ್ನುವುದು ನಾವು  ವಾಸಿಸುವ ಅಥವಾ ಕೆಲಸ ಮಾಡುವ ಪರಿಸರದಿಂದ ದೂರವಿರುವ ಪರಿಚಯವಿಲ್ಲದ ಪ್ರದೇಶದ ಭೇಟಿ ಮಾಡಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವುದು. ಶಾಲೆಗಳಲ್ಲಿ ಕ್ಷೇತ್ರ ಪ್ರವಾಸ ಮಾಡುವುದರಿಂದ ನಾವು ಶಿಕ್ಷಣದ ಕೆಲವೊಂದು ಉದ್ದೇಶಗಳನ್ನು ಸಾಧಿಸಬಹುದು. ಜ್ಞಾನ ವರ್ಧನೆ, ಕೌಶಲ್ಯಾಭಿವೃದ್ಧಿ, ಶಾಲೆಗಳಲ್ಲಿ ಪೂರೈಸಲಾಗದಂತಹ ಪ್ರಾಯೋಗಿಕ ಅನುಭವಗಳನ್ನು ಒದಗಿಸುವುದು ಇತ್ಯಾದಿ. ವಿಜ್ಞಾನದ ಗುರಿ ಸಾಧನೆಗಾಗಿ ಪರಿಸರದ ತಿಳುವಳಿಕೆ, ರಕ್ಷಣೆಗಾಗಿ ಮಾಡುವುದು ಅತೀ ಅಗತ್ಯ.


ಈ ರೀತಿ ಬೊಟಾನಿಕಲ್ ಗಾರ್ಡನ್, ,ವಸ್ತುಸಂಗ್ರಹಾಲಯ,ಅಭಯಾರಣ್ಯಗಳು, ಸಮುದ್ರ ತೀರ ಪ್ರದೇಶಗಳು,ಚಿಪ್ಪುಗಳ ಸಂಗ್ರಹ ಗಿರಿಧಾಮಗಳು, ಸಸ್ಯ ವರ್ಗಗಳ ಬಗ್ಗೆ ಭೌಗೋಳಿಕ ವಿಶ್ಲೇಷಣೆ ನಡೆಸುವುದು,ವೈಜ್ಞಾನಿಕ ಸಂಸ್ಥೆಗಳು ಹೀಗೆ ಇನ್ನೂ ಅನೇಕ ಪ್ರದೇಶಗಳ ಹೆಚ್ಚಿನ ಅನುಭವ,ಮಾಹಿತಿ ಸಿಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ  ತಮ್ಮ ದೈನಂದಿನ ಚಟುವಟಿಕೆಗಳಿಗೆ ಭಿನ್ನವಾದ ಅನುಭವ ಹಾಗೂ, ಜೀವಿಗಳ ಬಗ್ಗೆ  ಅವುಗಳ ನೈಸರ್ಗಿಕ ಆವಾಸಗಳಲ್ಲೇ ವೀಕ್ಷಿಸಿ, ಹೆಚ್ಚಿನ ವಿಷಯ ಸಂಗ್ರಹ ಮಾಡುವುದು. ಮಾದರಿಗಳನ್ನು ಸಂಗ್ರಹಿಸಿ ಕಲಿಕೆಗೆ ಪೂರಕಗೊಳಿಸವುದು.

ಉದ್ಯಾವನಕ್ಕೆ ಸಂದರ್ಶಿಸಿ ವಿವಿಧ ರೀತಿಯ ಸಸ್ಯಗಳು,  ವಿದೇಶಿ, ಭಾರತೀಯ  ಸಸ್ಯಗಳ ಬಗ್ಗೆ ತಿಳಿದುಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಣೆ, ಸಂಶೋಧನೆ ಮಾಡುವಂತಹ ಪ್ರವೃತ್ತಿ ಬೆಳೆಯುತ್ತದೆ. ಸಸ್ಯ, ಪ್ರಾಣಿಹಾಗೂ ಇತರ ಪ್ರಭೇದಗಳ ಜೀವನ ಚಕ್ರ,ಆಹಾರ ಪದ್ಧತಿಯ ಬಗ್ಗೆ ಜ್ಞಾನಾರ್ಜನೆ, ಜೊತೆಗೆ ಮಕ್ಕಳಿಗೆ ಮನೋರಂಜನೆಯೂ ದೊರೆಯುತ್ತದೆ. ಅನೇಕ ಪೋಷಕರಿಗೆ ಆರ್ಥಿಕ ಸಮಸ್ಯೆಯಿಂದಗಿ ಪ್ರಕೃತಿ ಮಡಿಲ ಸೌಂದರ್ಯವನ್ನು ಸವಿಯಲು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಉತ್ಸಾಹವಿದ್ದರೂ ಅಸಾಧ್ಯ ವಾದವರಿಗೆ, ಇದೊಂದು ಮಾನಸಿಕ ನೆಮ್ಮದಿ ಹಾಗೂ ಮಕ್ಕಳ ಸಂತೋಷವನ್ನು ನೋಡಿ ಆನಂದಿಸುತ್ತಾರೆ.
ವಿದ್ಯಾರ್ಥಿಗಳಲ್ಲಿ ಇಂತಹ ಪ್ರವಾಸ ಕೈಗೊಂಡಾಗ ಅವರ
ಮನೋಭಾವ ಬದಲಾಗಿರುವುದು ಕಂಡಿದ್ದೇನೆ. ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕೃಷಿ ಮಾಡುವ ಆಸಕ್ತಿ ಪ್ರಾಣಿ ಸಾಕಾಣಿಕೆಯ ಒಲವು, ಸಂಗ್ರಹಣಾ ಕೌಶಲ್ಯ, ಸಂಶೋಧನಾ  ಪ್ರವೃತ್ತಿಯನ್ನು ಬೆಳೆಸಿಕೊಂಡಿರುವುದನ್ನು ಗಮನಿಸಿದ್ದೇನೆ. ನಾನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವುದರಿಂದ ಖಂಡಿತ ಅವರು ತಮ್ಮ ಕನಸನ್ನು ನನಸು ಮಾಡುವ ಅವಕಾಶಗಳು ತುಂಬಾ ಇದೆ.

ಪರಿಸರ ಮತ್ತು ಮಾನವರ ಅನ್ಯೋನ್ಯ ಸಂಬಂಧದ ಅರಿವು ಮಕ್ಕಳಲ್ಲಿ ಮೂಡಿ ಪರಿಸರ ರಕ್ಷಿಸುವ ಮನೋಭಾವ ಕೂಡ ಇಂತಹ ಕಲಿಕೆಯಿಂದ ಉಂಟಾಗುತ್ತದೆ.



ಒಟ್ಟಿನಲ್ಲಿ ಕ್ಷೇತ್ರ ಪ್ರವಾಸದ ಮೂಲಕ ನಾವು ತರಗತಿಯಲ್ಲಿ ಈಡೇರಿಸಲಾಗದಂತಹ ಗುರಿ,ಉದ್ದೇಶಗಳನ್ನುಪೂರೈಸಬಹುದು.ಎಂದು ನಾನು ಹೇಳಲು ಸಂತೋಷ ಪಡುತ್ತೇನೆ.

✍️

ಇತ್ತೀಚಿನ ಸುದ್ದಿ

ಜಾಹೀರಾತು