ಇತ್ತೀಚಿನ ಸುದ್ದಿ
ವಿದ್ಯಾರ್ಥಿನಿ ನಿಲಯದಿಂದ ಮೊಬೈಲ್ ಕಳ್ಳತನ: ಆರೋಪಿಗೆ 3 ವರ್ಷ ಸಜೆ,5 ಸಾವಿರ ರೂ. ದಂಡ
29/02/2024, 23:53

ಮಂಗಳೂರು(reporterkarnataka.com): ನಗರದ ಉರ್ವ ಬಳಿಯ ಬಾಲಕಿಯ ವಸತಿ ನಿಲಯದೊಳಗೆ ಪ್ರವೇಶಿಸಿ ಮೊಬೈಲ್ ಕಳ್ಳತನದ ಮಾಡಿದ ಆರೋಪಿ ಮಹೇಶ್ ಪೈ ಎಂಬಾತನಿಗೆ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸಿಜಿಎಂ ನ್ಯಾಯಾಲಯ 3 ವರ್ಷ ಸಜೆ ಮತ್ತು
5000 ರೂ. ದಂಡ ವಿಧಿಸಿದೆ.
ಉರ್ವಾದ ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ಒಳಗೆ ಪ್ರವೇಶಿಸಿ ಮಹೇಶ್ ಪೈ ಎಂಬಾತ 2023, ಜೂನ್ 18ರಂದು ವಿದ್ಯಾರ್ಥಿನಿಯರ 3 ಮೊಬೈಲ್ ಫೋನ್ ಗಳನ್ನು ಕಳವು ಮಾಡಿದ್ದನು. ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿತ್ತು. ನಂತರ ನ್ಯಾಯಾಲಯಕ್ಕೆ ಹಾಜಪಡಿಸಿ, ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸಿಜಿಎಂ ನ್ಯಾಯಾಲಯವು ಆರೋಪಿಗೆ 3 ವರ್ಷ ಶಿಕ್ಷೆ ಮತ್ತು 5000 ದಂಡ ವಿಧಿಸಿ ಆದೇಶ ಹೊರಡಿಸಿದೆ.