8:34 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಸಾರ್ವಜನಿಕರ ಆಗ್ರಹ

03/10/2024, 22:14

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com
ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಂಗಳೂರಿಗೆ ಸಾಗುವ ಮಾರ್ಗ ಮಧ್ಯೆ ಬಣಕಲ್, ಕೊಟ್ಟಿಗೆಹಾರದಲ್ಲಿ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರೊಂದಿಗೆ ಭೇಟಿಯಾಗಿ ಮಾತನಾಡಿದರು.ಬಣಕಲ್ ಸರ್ಕಾರಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಬೇಕು. ಜನರು ರಾತ್ರಿ ಹೊತ್ತಲ್ಲಿ ಅನಾರೋಗ್ಯರಾದಾಗ ದೂರದ ಮಂಗಳೂರು, ಚಿಕ್ಕಮಗಳೂರು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲಿಯೇ 24*7 ಸೌಲಭ್ಯ ದೊರೆತರೆ ಬಡವರು ಉತ್ತಮ ಚಿಕಿತ್ಸೆ ಪಡೆಯಬಹುದು ಎಂದು ಮುಖಂಡರಾದ ಹರ್ಷ ಮೆಲ್ವಿನ್ ಲಸ್ರಾದೊ, ಅಬ್ದುಲ್ ರೆಹಮಾನ್ ಮತ್ತಿತರರು ಸಭಾಪತಿಗಳ ಗಮನಕ್ಕೆ ತಂದರು.
ಅಹವಾಲು ಸ್ವೀಕರಿಸಿ ಯು.ಟಿ.ಖಾದರ್ ಮಾತನಾಡಿ, ಬಣಕಲ್ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. ಕಾಂಗ್ರೆಸ್ ಸರ್ಕಾರ ಬಡವರ ಪರ ಇದ್ದು ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ಕೊಟ್ಟಿಗೆಹಾರದಲ್ಲಿ ಸಭಾಪತಿ ಯು.ಟಿ.ಖಾದರ್ ಅವರಿಗೆ ಪ.ಪಂ.ಸದಸ್ಯ ಜಿ.ಬಿ.ಧರ್ಮಪಾಲ್, ಟಿ.ಎ.ಖಾದರ್, ರಾಮಚಂದ್ರೇಗೌಡ, ಬಿ.ಎಂ.ಸತೀಶ್, ಮೊಯಿದ್ದೀನ್,ಮುನೀರ್, ಪಿಶ್ ಮೋಣು, ಖಾಲೀದ್, ತನು ಕೊಟ್ಟಿಗೆಹಾರ ಮತ್ತಿತರ ಮುಖಂಡರು ಹಾರಾರ್ಪಣೆ ಮಾಡಿ ಸ್ವಾಗತಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು