ಇತ್ತೀಚಿನ ಸುದ್ದಿ
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸಹೋದರ ಪುತ್ರಿಯ ವಿವಾಹ: ರಾಜ್ಯಪಾಲ, ಸಿಎಂ, ಡಿಸಿಎಂ, ಗೃಹ ಸಚಿವರು ಹಾಜರ್
26/05/2024, 13:09
ಮಂಗಳೂರು(reporterkarnataka.com): ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಸಹೋದರ ಡಾ. ಯು.ಟಿ. ಇಮ್ತಿಯಾಜ್ ಅಲಿ ಅವರ ಪುತ್ರಿ ಹವ್ವಾ ಥಾಬಾ ಹಾಗೂ ನಶ್ವಾನ್ ಹಮೀದ್ ಅವರ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲಾಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್,ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಭಾಗವಹಿಸಿ ನವ ಜೋಡಿಗೆ ಶುಭ ಹಾರೈಸಿದರು.
ಮಂಗಳೂರಿನ ಎಂ.ಜಿ.ರೋಡ್ ನಲ್ಲಿರುವ ಟಿಎಂಎ ಪೈ ಕನ್ವೆನ್ಶನ್ ಹಾಲ್ ನಲ್ಲಿ ಶನಿವಾರ ಮದುವೆ ರಿಸೆಪ್ಶನ್ ನಡೆಯಿತು.