ಇತ್ತೀಚಿನ ಸುದ್ದಿ
ವಿಧಾನಸಭೆ ಚುನಾವಣೆ: ದ.ಕ., ಉಡುಪಿಯಲ್ಲಿ ತಲಾ 3 ಸೀಟು ನೀಡಲು ಮಂಗಳೂರು ತಾಲೂಕು ಬಿಲ್ಲವ ಸಂಘ ಆಗ್ರಹ
24/03/2023, 23:13
ಮಂಗಳೂರು(reporterkarnataka.com): ರಾಜ್ಯ ಸರಕಾರ ನಾರಾಯಣಗುರು ಅಭಿವೃದ್ಧಿ ನಿಗಮ ಮತ್ತು ಇತರ ಬೇಡಿಕೆಗಳನ್ನು ಈಡೇರಿಸಿದ ಬಗ್ಗೆ ಮಂಗಳೂರು ತಾಲೂಕು ಬಿಲ್ಲವ ಸಂಘದ ಮಾಸಿಕ ಸಭೆಯಲ್ಲಿ ಸ್ವಾಗತಿಸಲಾಗಿದ್ದು, ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 3 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಲ್ಲವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರದ ಬಗ್ಗೆ, ಸಮುದಾಯಕ್ಕೆ ತಿಳುವಳಿಕೆ ನೀಡುವ ಬಗ್ಗೆ ನಿರ್ಣಯಿಸಲಾಯಿತು ಎಂದು ಸಂಘದ ಪತ್ರಿಕಾ ಪ್ರಕಟಮೆ ತಿಳಿಸಿದೆ.
ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜೀತೇಂದ್ರ ಜಿ.ಸುವರ್ಣ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.














