ಇತ್ತೀಚಿನ ಸುದ್ದಿ
ವೀರ ಯೋಧ ಮುರಳೀಧರ ರೈ ಪಾರ್ಥಿವ ಶರೀರ ಕುಟುಂಬಕ್ಕೆ ಹಸ್ತಾಂತರ: ಸಕಲ ಸರಕಾರಿ ಗೌರವ ಸಲ್ಲಿಕೆ: ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತಿ
25/01/2023, 17:09

ಮಂಗಳೂರು(reporterkarnataka.com): ಭಾರತೀಯ ಸೇನೆಯಲ್ಲಿ ಶಸಸ್ತ್ರ ಸೀಮಾ ಬಲ್ ಯೋಧರಾಗಿ ಮಧ್ಯಪ್ರದೇಶದ ಭೋಪಾಲದಲ್ಲಿ ಸೇವಾ ನಿರತರಾಗಿದ್ದಾಗಲೇ ಹೃದಯಾಘಾತದಿಂದ ನಿಧನರಾದ ಶಕ್ತಿನಗರದ ವೀರ ಯೋಧ ಹವಲ್ದಾರ್ ಮುರಳೀಧರ ರೈ ಅವರ ಪಾರ್ಥಿವ ಶರೀರವನ್ನು ಸಕಲ ಸರಕಾರಿ ಗೌರವ ಸಲ್ಲಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಶಾಸಕ ವೇದವ್ಯಾಸ್ ಕಾಮತ್ ಅವರು ವೀರ ಯೋಧ ಮುರಳೀಧರ ರೈ ಅವರಿಗೆ ಗೌರವ ಸಲ್ಲಿಸಿದರು.