ಇತ್ತೀಚಿನ ಸುದ್ದಿ
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯಿಂದ ಮಹಿಳಾ ದಿನಾಚರಣೆ
17/03/2023, 12:08

ಬಂಟ್ವಾಳ(reporterkarnataka.com):
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಬಾಳ್ತೀಲ ಶ್ರೀಶೈಲ ಇಲ್ಲಿ ಬಹಳ ವಿಶಿಷ್ಟತೆಯನ್ನು ತೋರಿಸುವಂತಹ ಮಹಿಳಾ ದಿನಾಚರಣೆ ನಡೆಸಲಾಯಿತು.
ಸಂಸ್ಥೆಯ ಸಹಭಾಗಿತ್ವದಲ್ಲಿ,ಶ್ರೀಶೈಲ ಕಲಾನೃತ್ಯ ತರಬೇತಿ ,ಭಜನೆ ತರಬೇತಿ ಕಾರ್ಯಕ್ರಮದ ಉದ್ಘಾಟ ನೆಯನ್ನು ಮಾಡಲಾಯಿತು.ಯೋಗ ತರಬೇತಿ ಮಾತು ಅದರ ಉಪಯೋಗ ದ ಮಾಹಿತಿಯನ್ನು ತುಳಸಿ ಅವರು ನಡೆಸಿಕೊಟ್ಟರು. ಮಹಿಳಾ ಆರೋಗ್ಯ ಮಾಹಿತಿ ಕಾರ್ಯಗಾರ ಅಲ್ಲದೆ , ಗ್ರಾಮೀಣ ಮಹಿಳಾ ಸಾಧಕಿ ಶ್ರೀಮತಿ ತುಳಸಿ,
ನೀಲಮ್ಮ, ಹೊನ್ನಮ್ಮ ಅವರನ್ನು ಗೌರವಿಸಲಾಯಿತು. ನೀಲಮ್ಮ ಕಾರ್ಯಕ್ರಮ ದ ಉದ್ಘಾಟನೆ ಮಾಡಿದರು. ನ್ಯಾಯವಾದಿ, ಕರ್ನಾಟಕ ಸರಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು,ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಇದರ ಸಂಸ್ಥಾಪಕರು ಇವರು ಅಧ್ಯಕ್ಷತೆಯನ್ನು ವಹಿಸಿಕೊಂಡರು. ಶಾರದಾ ಜಿ ಬಂಗೇರ ಇವರು ಮಹಿಳೆಯರಿಗೆ ಪಾರ್ದಾನ , ಕಬಿತೆ ಯನ್ನು ಹೇಳಿದರು, ಡಾ. ರಾಜೇಶ್ ಪೂಜಾರಿ,ಭಾಸ್ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶೌರ್ಯ ನಡೆಸಿಕೊಟ್ಟರು. ವಿವಿಧ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.