5:58 AM Sunday14 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

ವರಂಗ ಜೈನ ಮಠದ ಕೆರೆಯಲ್ಲಿ ಈಜಲಾಗದೆ ಒದ್ದಾಡಿದ ಯುವಕರು; ಲೈಫ್ ಜಾಕೆಟ್ ನೀಡಿ ರಕ್ಷಿಸಿದ ಪ್ರವಾಸಿಗರು

11/06/2024, 11:11

ಕಾರ್ಕಳ(reporterkarnataka.com): ಈಜಲು ಹೋದ ಯುವಕರು ನೀರಿನ ಮಧ್ಯದಲ್ಲಿ ಈಜಲು ಸಾಧ್ಯವಾಗದೆ ಒದ್ದಾಡುತ್ತಿದ್ದಾಗ ಲೈಫ್ ಜಾಕೆಟ್ ನೀಡಿ ಜೀವ ಉಳಿಸಿದ ಘಟನೆ ಹೆಬ್ರಿಯ ತಾಲೂಕಿನ ವರಂಗ ಜೈನ ಮಠದ ಕೆರೆಯಲ್ಲಿ ನಡೆದಿದೆ.

ಹೊರಜಿಲ್ಲೆಯಿಂದ ಆಗಮಿಸಿದ ಇಬ್ಬರು ಯುವಕರು ಕೆರೆಯಲ್ಲಿ ಒಂದು ದಡದಿಂದ ಕೆರೆ ಮಧ್ಯೆ ಇರುವ ಜೈನ ಮಠಕ್ಕೆ  ಈಜಿಕೊಂಡು ಸಾಗಿದ್ದಾರೆ. ಆದರೆ ನೀರಿನ ಮದ್ಯದಲ್ಲಿ ಯುವಕರು ಈಜಲು ಸಾಧ್ಯವಾಗದೇ ಒದ್ದಾಡಿದ್ದಾರೆ . ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಪ್ರವಾಸಕ್ಕೆ  ಅಗಮಿಸಿದ್ದರು ಲೈಫ್ ಜಾಕೆಟ್ ಬಿಸಾಡಿ ಯುವಕರನ್ನು ರಕ್ಷಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ದೇವಾಲಯ ಪುರೋಹಿತರು ಯುವಕರನ್ನು ತರಾಟೆಗೆ ತೆಗೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
*ಸೆಕ್ಯುರಿಟಿ ಇಲ್ಲ:* ದಿನನಿತ್ಯ ಒಂದುವರೆ ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ವರಂಗ ಕೆರೆಬಸದಿಗೆ ಅಗಮಿಸಿ ನಿಸರ್ಗದ ನಡುವೆ ಖುಷಿ ಯನ್ನು ಕಳೆಯುತ್ತಾರೆ. ಆದರೆ ಅದರಲ್ಲೂ ವಿಕೆಂಡ್ ನಲ್ಳಿ ರಜಾದಿನಗಳಲ್ಲಿ ನಿತ್ಯ 2000 ಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸುತ್ತಾರೆ ಆದರೆ ಮಠದ ಆಡಳಿತ ಮಂಡಳಿಯ ನಿರ್ಲಕ್ಷ್ಯ ವೆ ಘಟನೆ ಗೆ ಸಾಕ್ಷಿ ಯಾಗಿದೆ. ಮಧ್ಯಾಹ್ನ ಹೊತ್ತಿಗೆ ಒಂದು ಘಂಟೆಗೆ ಗಳ ಸಮಯದಲ್ಲಿ ಅಂಬಿಗ ಊಟಕ್ಕೆ ತೆರಳುವ ವೇಳೆಯಲ್ಲಿ ಸೆಕ್ಯುರಿಟಿ ಯನ್ನು ನೇಮಿಸಲು ಸಾಧ್ಯವಾಗಿಲ್ಲ. ಅಕಸ್ಮಾತ್ತಾಗಿ ಪ್ರಾಣ ಹಾನಿ ಸಂಭವಿಸಿದರೆ ದುರಂತ ನಡೆದುಹೋಗುತಿತ್ತು.. ಬಸದಿಯ ಆಡಳಿತ ಮಂಡಳಿಯ ತೀರಾ ನಿರ್ಲಕ್ಷ್ಯ ವೆ ಘಟಕನೆಗೆ ಹೊಣೆಯಾಗಿದೆ.
ಘಟನೆ ಬಗ್ಗೆ ಮಠದ ಆಡಳಿತ ಮಂಡಳಿಯನ್ನು  ವಿಚಾರಿಸಿದಾಗ ಘಟನೆಯು  ದೋಣಿಯ ಅಂಬಿಗ ಹಾಗೂ ಜೈನ‌ಮಠದ ಪೂಜಾರಿ  ಊಟಕ್ಕೆ ತೆರಳಿದ ವೇಳೆ ಈ ಯುವಕರು ನೀರಿಗಿಳಿದು  ಹುಚ್ಚಾಟ ನಡೆಸಿದ್ದಾರೆ‌ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು