ಇತ್ತೀಚಿನ ಸುದ್ದಿ
ವಾಮಂಜೂರು ಚರ್ಚ್ ಹಾಲ್: 19ರಂದು ‘ವೊಜೆಂ ಉತ್ಸವ್ 2024’
17/05/2024, 21:20
ಮಂಗಳೂರು(reporterkarnataka.com): ಮಂಗಳೂರಿನ ಸಾಮಾಜಿಕ ಸೇವಾ ಸಂಸ್ಥೆ ಸಾಂಗಾತಿ ಮಂಗ್ಳೂರು ಸಹಯೋಗದಲ್ಲಿ ನಗರದ ಬೊಂದೇಲ್ ಸಂತ ಲಾರೆನ್ಸ್ ಚರ್ಚು ಹಾಗೂ ಪುಣ್ಯಕ್ಷೇತ್ರದ ಸಹಾಯಾರ್ಥ ಏರ್ಪಡಿಸಿದ ವೊಜೆಂ ಉತ್ಸವ್ 2024 ಮೇ 19ರಂದು ಬೆಳಗ್ಗೆ 11 ಗಂಟೆಗೆ ವಾಮಂಜೂರು ಚರ್ಚ್ ಹಾಲ್ ನಲ್ಲಿ ಆರಂಭಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಾಮಂಜೂರು ಚರ್ಚ್ ನ ಧರ್ಮಗುರುಗಳಾದ ವಂ| ಫಾ| ಜೇಮ್ಸ್ ಡಿಸೋಜ, ಬೊಂದೇಲ್ ಚರ್ಚ್ ನ ಧರ್ಮಗುರುಗಳಾದ ವಂ| ಫಾ| ಆ್ಯಂಡೂ ಲಿಯೊ ಡಿಸೋಜ, ಬೊಂದೇಲ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ವಂ| ಫಾ| ವಿಲಿಯಂ ಡಿಸೋಜ, ಬೊಂದೇಲ್ ಸಂತ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲರಾದ ವಂ| ಫಾ| ಪೀಟರ್ ಗೊನ್ಸಾಲ್ವಿಸ್, ಅನಿವಾಸಿ ಉದ್ಯಮಿ ಜೇಮ್ಸ್ ಮೆಂಡೊನ್ಸಾ, ಯುವ ಉದ್ಯಮಿ ಎಲೊನ್ ರೊಡ್ರಿಗಸ್, ಯುವ ನಟಿ ವೆನ್ಸಿಟಾ ಡಯಾಸ್, ಸಂತ ಲಾರೆನ್ಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿಸಿಲ್ವಾ, ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಮಿತೇಶ್ ಡಿಸೋಜ ಭಾಗವಹಿಸಲಿದ್ದಾರೆ.
ಈ ಉತ್ಸವದಲ್ಲಿ ನಗರ ಹಾಗೂ ಹೊರವಲಯದ 25 ಸದಸ್ಯರನ್ನೊಳಗೊಂಡ ಹಲವಾರು ತಂಡಗಳು ಭಾಗವಹಿಸಲಿದ್ದು, ಪ್ರೇಕ್ಷಕರಿಗೆ ಫುಡ್ ಕೋರ್ಟ್ ಗಳು ಕೂಡ ಲಭ್ಯವಿದೆ ಎಂದು ಸಂಸ್ಥೆಯ ಅಧ್ಯಕ್ಷೆ ವಿಶಾಲಿನ್ ಶಾಂತಿ ಸಲ್ದಾನ್ಹಾ ತಿಳಿಸಿದ್ದಾರೆ.