ಇತ್ತೀಚಿನ ಸುದ್ದಿ
ಕೂಡ್ಲಿಗಿ: ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಮಲ್ಲಾಪುರ ಸೊಲ್ಲಪ್ಪ ನಿಧನ
02/09/2021, 19:41
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರು, ಕೂಡ್ಲಿಗಿ ಪ್ರಾ.ಕೃ.ಪ.ಸ.ಸಂ. ನಿರ್ದೇಶಕರು ಹಾಗೂ ಎಪಿಎಂಸಿ ಮಾಜಿ ಸದಸ್ಯ ಮಲ್ಲಾಪುರ ಸೊಲ್ಲಪ್ಪ(65)
ಸೆ1ರಂದು ನಿಧನರಾದರು.
ಅವರು ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ,
ಸಂತಾಪ: ಮೃತ ಮಲ್ಲಾಪುರದ ಸೊಲ್ಲಪ್ಪರ ಅಗಲಿಕೆಗೆ ಪಟ್ಟಣ ಸೇರಿದಂತೆ ತಾಲೂಕು,ಜಿಲ್ಲೆಯ ವಾಲ್ಮೀಕಿ ಸಮುದಾಯದವರು ಹಾಗೂ ವಿವಿದ ಸಮುದಾಯಗಳ ಮುಖಂಡರು.ವಿವಿದ ಸಂಘ ಸಂಸ್ಥೆಗಳ ಮುಖಂಡರು ಮತ್ತು ಜನಪ್ರತಿನಿಧಿಗಳು,ವಿವಿದ ಪಕ್ಷಗಳ ಮುಖಂಡರು ಮೃತರ ಅಗಲಿಕೆಗೆ ಸಂತಾಪ ವ್ಯೆಕ್ತಪಡಿಸಿದ್ದಾರೆ