2:06 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

Valmiki Community | ವಾಲ್ಮೀಕಿ ಹೆಸರಲ್ಲಿ ಮೆಡಿಕಲ್ ಕಾಲೇಜು: ಮಾಜಿ ಸಂಸದ ಉಗ್ರಪ್ಪ ಆಗ್ರಹ

01/03/2025, 22:23

ಬೆಂಗಳೂರು(reporter Karnataka.com): ವಾಲ್ಮೀಕಿ ಸಮುದಾಯದ ಅಭಿವೃದ್ಧಿ ಹಾಗೂ ಸಮುದಾಯದ ಮಕ್ಕಳ ಹಿತದೃಷ್ಟಿಯಿಂದ ವಾಲ್ಮೀಕಿ ನಾಯಕ ಸಮುದಾಯಕ್ಕೆ ಒಂದು ಮೆಡಿಕಲ್ ಕಾಲೇಜು ಅಗತ್ಯ. ಹೀಗಾಗಿ ವಾಲ್ಮೀಕಿ ಹೆಸರಿನಲ್ಲೇ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳನ್ನು ಒಳಗೊಂಡ ಕಾಲೇಜನ್ನು ಪಿಪಿಪಿ ಸಹಯೋಗದಲ್ಲಿ ನಿರ್ಮಾಣ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.

ಬೆಂಗಳೂರಿನ ಹೊರ ವಲಯದಲ್ಲಿರುವ ನಂದಿಬೆಟ್ಟ್ ಗಾಂಧಿ ಭವನದಲ್ಲಿ ವಾಲ್ಮೀಕಿ ಸಮುದಾಯದ ಅಭಿವೃದ್ಧಿ ಹಿನ್ನೆಲೆಯಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಸಮುದಾಯದ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಬುದ್ದಿಜೀವಿಗಳು, ಸಾಹಿತಿಗಳು, ವಿವಿಧ ಸಂಘಟನೆಗಳ ಪ್ರಮುಖ ಮುಖಂಡರ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ರಾಮಾಯಣದ ಕತೃ ಮಹರ್ಷಿ ಆದಿ ಕವಿ ವಾಲ್ಮೀಕಿ, ವಾಲ್ಮೀಕಿ ಸಮುದಾಯದಲ್ಲಿ 24 ಜನ ಹಾಲಿ ಅಧಿಕಾರದಲ್ಲಿರುವ ಜನಪ್ರತಿನಿಧಿಗಳಿದ್ದಾರೆ. ಆದರೆ ನಾಯಕ ಸಮಾಜದ ಇಷ್ಟು ಜನಪ್ರತಿನಿಧಿಗಳು ನಾವೆಲ್ಲ ಇದ್ದರೂ ಮುಖ್ಯವಾಹಿನಿಯಲ್ಲಿರುವ ಜನರಿಗೇ ಸರಿಯಾದ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ನ್ಯಾಯ ಸಿಕ್ಕಿಲ್ಲ. 1974ರ ಸಮಾಜ ಕಲ್ಯಾಣ ಸಚಿವರ ಸಭೆಯಲ್ಲಿ SCP TSP ಅಡಿ ಎಸ್ಟಿಗೆ 11 ಸಾವಿರ ಕೋಟಿ ಇಡಬೇಕು ಎಂದು ನಿರ್ಧರಿಸಲಾಯಿತು. ಈ ಬಾರಿ ಕೇಂದ್ರ ಸರ್ಕಾರ 52 ಲಕ್ಷ ಕೋಟಿ ಬಜೆಟ್ ಮಂಡಿಸಿದೆ. ಆದರೆ ಪರಿಶಿಷ್ಟ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನೀಡಿಲ್ಲ. ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳಿಂದಲೂ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಇದರಲ್ಲಿ ನಾನು ರಾಜಕೀಯೇತರವಾಗಿ ಸಮುದಾಯದ ಪರವಾದ ಸತ್ಯ ಹೇಳುತ್ತಿದ್ದೇನೆ ಎಂದು ಹೇಳಿದರು.
ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಹಿಂದೆ ಒಮ್ಮೆ ಶಾಸಕರ ಭವನದಲ್ಲೇ ಸಮುದಾತದ ಸಮಾನ ಮನಸ್ಕರು, ಬುದ್ದಿ ಜೀವಿಗಳು, ಸಾಹಿತಿಗಳು ಸೇರಿ 6 ನಿರ್ಣಯ ತಡಗೆದುಕೊಂಡಿದ್ದೇವೆ. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೇನೆ. ಸಮುದಾಯದಲ್ಲಿ ಸುಧಾರಣೆ ತರಬೇಕಿದೆ. ವಾಲ್ಮೀಕಿ ಸಮುದಾಯ ಮೂಲತಃ ಲೇಖನಿ ಸಂಸ್ಕೃತಿಯ ಸಮುದಾಯ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಕೆಲವು ಸ್ವಹಿತಾಸಕ್ತಿಗಳ ಕಯಮ್ಮಕ್ಕಿನ ಕಾರಣಕ್ಕೆ ಕೆಲವು ಕಡೆ ಹೊಡಿ ಬಡಿ ಸಂಸ್ಕೃತಿ ಬೆಳೆದಿತ್ತು. ಅದನ್ನ ತಪ್ಪಿಸಿ ಇಡೀ ಸಮುದಾಯವನ್ನು ಲೇಖನಿ ಸಂಸ್ಕೃತಿಗೆ ತರಬೇಕಿದೆ. ಆಶ್ರಮ ಶಿಕ್ಷಣ ಶುರುವಾಗಿದ್ದೇ ಲವಕುಶರಿಗೆ ವಾಲ್ಮೀಕಿ ಗುರುಕುಲದಲ್ಲಿ ಶಿಕ್ಷಣ ನೀಡಿದ್ದರ ಮೂಲಕ. ಹೀಗಾಗಿ ಮಹರ್ಷಿ ವಾಲ್ಮೀಕಿ ಜಗತ್ತಿನ ಮೊದಲ ಗುರು. ಆದ್ದರಿಂದ ಈ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕು. ಅದಕ್ಕಾಗಿ ಇಂದು ನಂದಿಬೆಟ್ಟದಲ್ಲಿ ಸಭೆ ನಡೆಸಲಾಗಿದೆ. ಇದಕ್ಕೆ ಸಮಾಜದ ಎಲ್ಲ ಶಾಸಕರು, ಮಾಜಿ ಶಾಸಕರು, ಹಾಲಿ ಮಾಜಿ ಸಂಸದರು ಉದ್ಯಮಿಗಳು, ಸಾಹಿತಿಗಳು, ಸರ್ಕಾರಿ ನೌಕರರು, ನಿವೃತ್ತ ನೌಕರರು ಕೈಜೋಡಿಸಬೇಕು ಎಂದರು
*ಮೀಸಲಾತಿ ಭಿಕ್ಷೆಯಲ್ಲ:*
ಸಂಘಟಿತರಾಗುವ ಆಲೋಚನೆ. ಹಕ್ಕುಗಳನ್ನು ಪಡೆಯುವುದು ಈಗಿನ ನಮ್ಮ ಆದ್ಯ ಕರ್ತವ್ಯ. ಮೀಸಲಾತಿ ಹಾಗೂ ಅನುದಾನ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಕನಿಷ್ಠ 1000 ಕೋಟಿಯನ್ನು ನಮ್ಮ ಸಮುದಾಯದ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಇಡಬೇಕು. ಉತ್ತರ ಪ್ರದೇಶದ ಮಾದರಿಯಲ್ಲಿ ಬುಡಕಟ್ಟು ವಾಲ್ಮೀಕಿ ಹೆಸರಿನಲ್ಲಿ ವಿಶ್ವವಿದ್ಯಾಲಯ ಕಟ್ಟಬೇಕು. ಸರ್ಕಾರ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಅದನ್ನು ನಡೆಸಲು ಸರರ್ಕಾರ ಮುಂದಾಗಬೇಕು. ಅದಕ್ಕೆ ಸಮುದಾಯದ ನಾವೆಲ್ಲರೂ ಕೈ ಜೋಡಿಸುತ್ತೇವೆ ಎಂದು ಹೇಳಿದರು.
ಈಗಾಗಲೇ ಹಿಂದಿನ ಬಜೆಟ್ ಸಮಯದಲ್ಲಿ ಕೂಡ ಮುಖ್ಯಮಂತ್ರಿಗೆ ನಾಯಕ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಬಗ್ಗೆ ಹಾಗೂ ಸೌಲಭ್ಯಗಳ ಬಗ್ಗೆ ಒತ್ತಾಯ ಮಾಡಿದ್ವಿ. ವಾಲ್ಮೀಕಿ ಹೆಸರಿನಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಕಾನೂನು, ನರ್ಸಿಂಗ್ ಕೋರ್ಸ್ ಗಳನ್ನು ಮಾಡಬೇಕು. ಶೇ.50ರಷ್ಟು ಸೀಟ್ ಗಳನ್ನು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಉಚಿತವಾಗಿ ನೀಡಬೇಕು. ಉಳಿದ ಶೇ.50ರಷ್ಟು ಸೀಟ್ ಗಳನ್ನು ಉಳಿದ ಎಲ್ಲ ವರ್ಗಗಗಳಿಗೆ ಸಿಇಟಿ ಅಥವಾ‌ ನೀಟ್ ಮೂಲಕ ಆಯ್ಕೆ ಮಾಡಿ ಕೊಡಬೇಕುವೆಂದು ಮುಖ್ಯಮಂತ್ರಿಗೆ ಹೇಳಿದ್ದೇವೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.
ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ TSP ಯೋಜನೆಯಡಿ ನೀಡಿದ ಹಣವನ್ನು ಬೇರೆ ಕಡೆ ವರ್ಗಾಯಿಸಬೇಡಿ. ಅದೇ ವರ್ಷ ಅದನ್ನು ವೆಚ್ಚ ಮಾಡಬೇಕು. ಜೊತೆಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.
ಮಹರ್ಷಿ ಆದಿ ಕವಿ ವಾಲ್ಮೀಕಿ ವಿಚಾರಗಳನ್ನು‌ ತಿಳಿಸುವ ಕೆಲಸವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಗಬೇಕು. ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒತ್ತು ನೀಡಬೇಕು. ಕಾರಣ ಎಲ್ಲದಕ್ಕೂ ಆದಿ ಮಹರ್ಷಿ ವಾಲ್ಮೀಕಿ. ರಾಮಾಯಣದ ಮೂಲಕ ಮಹಾತ್ಮಾ ಗಾಂಧಿಯವರಿಗೆ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ರಾಮ ರಾಜ್ಯದ ಅಥವಾ ಸಮ ಸಮಾಜದ ಪರಿಕಲ್ಪನೆಯನ್ನು ನೀಡಿದ್ದು ಮಹರ್ಷಿ ವಾಲ್ಮೀಕಿ. ಅದನ್ನು ಮರೆಯದೆ ಎಲ್ಲ ವರ್ಗದ ಜನರೂ ಮಹರ್ಷಿ ವಾಲ್ಮೀಕಿಯನ್ನು ನೆನೆಯಬೇಕು.
ನಾಗೇಂದ್ರಗೆ ಸಚಿವ ಸ್ಥಾನ:
ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪ, ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತಾಡಿದ್ರೆ ಕಾನೂನು ಉಲ್ಲಂಘನೆಯಾಗುತ್ತೆ. ಯಾರೇ ಅಧಿಕಾರ ದುರುಪಯೋಗ ಮಾಡಿಕೊಂಡ್ರೂ ಅಪರಾಧ, ಆದರೆ ಯಾರು ತಪ್ಪಿತಸ್ಥರು ಎಂಬುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. SCP TSP ನಲ್ಲೇ ಶಿಕ್ಷೆಗೆ ಅವಕಾಶ ಇದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
*ಗ್ಯಾರಂಟಿಗೆ ದಲಿತರ ಹಣ ಬಳಕೆ ಬೇಡ:*
SCP/TSP ಬಗ್ಗೆ ನಾವೇ ಕಾನೂನು ಮಾಡಿಕೊಂಡಿದ್ದೇವೆ. ಆದರೂ ಈ ಹಣವನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರ ಯಾವುದೇ ಇರಲಿ, SCP TSP ಹಣ ದುರುಪಯೋಗವಾಗುವುದು ಬೇಡ. ಬೇರೆ ವರ್ಗಕ್ಕೂ ಇಟ್ಟ ಹಣ ತೆಗೆಯಿರಿ ನೋಡೋಣ, 1974 ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾದಾಗ ಈ ಬಗ್ಗೆ ಪ್ರಸ್ತಾಪ ಮಾಡಿ, ಪರಿಶಿಷ್ಟರ ಹಣ ಸದ್ವಿನಿಯೋಗ ಆಗಬೇಕು ಎಂದು ಕಾಯ್ದೆ ಜಾರಿಗೆ ತರಲಾಗಿದೆ. ನಮ್ಮ SCP/TSP ಹಣ ಮಾತ್ರ ಯಾಕೆ ಕಟ್ ಮಾಡಬೇಕು? ನಾವು ಇನ್ನೂ ತೆವಳುತ್ತಿದ್ದೇವೆ. ಈ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ದಯಮಾಡಿ ನಮ್ಮ ಹಣ ನಮಗೆ ಬಳಸಿ ಎಂದು ಉಗ್ರಪ್ಪ ಆಗ್ರಹಿಸಿದರು.
ಸುದ್ದಿ ಗೋಷ್ಠಿಯಲ್ಲಿ ಸಮಾಜದ ಹಿರಿಯರಾದ ಡಾ. ರಂಗಯ್ಯ, ಚಿಂತಕರು, ನಿವೃತ್ತ ಅಧಿಕಾರಿ ಭಕ್ತರಾಮೇಗೌಡ, ವಾಲ್ಮೀಕಿ ನಾಯಕ ಮಹಾಸಭಾ ಮಾಜಿ ಅಧ್ಯಕ್ಷರಾದ ಎಂ. ನರಸಿಂಹಯ್ಯ, ಪ್ರೊ. ಅರ್ಜುನ್ ಪಂಗಣ್ಣವರ್, ರಾಜಪ್ಪ, ರಮೇಶ್ ಹಿರೇಜಂಬೂರು, ಸಿಂಗಾಪುರ ವೆಂಕಟೇಶ್, ತುಳಸಿರಾಮ್, ಭೀಮಪುತ್ರಿ ರೇವತಿ, ಗಾಣದವಹುಣಸೆ ನಾಗರಾಜ್, ಉದ್ಯಮಿ ಸೂರನಾಯಕ್, ನಿವೃತ್ತ IPS ಅಧಿಕಾರಿ ಶಿವ ಪ್ರಸಾದ್, ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಸೇರಿದಂತೆ ವಿವಿಧ ನಿವೃತ್ತ ಕುಲಪತಿಗಳು, ನಿವೃತ್ತ ಅಧಿಕಾರಿಗಳು, ಸಾಹಿತಿಗಾಲು, ಚಿಂತಕರು ಉಪಸ್ಥಿತರಿದ್ದರು.
ಇಡೀ ದಿನ ನಂದಿ ಬೆಟ್ಟದ ಗಾಂಧೀ ಭವನದಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು