ಇತ್ತೀಚಿನ ಸುದ್ದಿ
ಕೊಡಗಿನ ಜಿ.ಕೆ ಮುತ್ತಮ್ಮಗೆ ವಾಲ್ಮೀಕಿ ಪ್ರಶಸ್ತಿ: ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಪ್ರದಾನ
07/10/2025, 12:42
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ರಾಜ್ಯ ಸರ್ಕಾರ ನೀಡಲಾಗುವ ವಾಲ್ಮೀಕಿ ಪ್ರಶಸ್ತಿ ಈ ಬಾರಿ ಸಂಘಟನಾ ಕ್ಷೇತ್ರಕ್ಕೆ ಕೊಡಗಿನ ಜಿ.ಕೆ ಮುತ್ತಮ್ಮ ರವರಿಗೆ ನೀಡಲಾಗಿದೆ.
ಸೂರಿಲ್ಲದವರಿಗೆ ಸೂರು ಕೊಡಿಸುವ ಬಗ್ಗೆ ಈ ಹಿಂದೆ ದಿಡ್ಡಳ್ಳಿ ಜನರ ಪುನರ್ವಸತಿ ಕೇಂದ್ರಕ್ಕಾಗಿ ತೀವ್ರ ಸ್ವರೂಪದ ಹೋರಾಟವನ್ನು ಮಾಡಿದ್ದರು.
ಅಂದಿನ ಸರ್ಕಾರ ಇವರ ನಡೆಗೆ ಮಣಿದು ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಪುನರ್ವಸತಿ ಕೇಂದ್ರವನ್ನು ಆರಂಭಿಸಿ ನಿರಾಶ್ರಿತರಿಗೆ ಸಂಪೂರ್ಣ ಸವಲತ್ತು ಇರುವ ನಿವೇಶನ ಹಾಗೂ ಮನೆಯನ್ನು ನಿರ್ಮಿಸಿ ಕೊಟ್ಟಿದೆ. ಜಿ ಕೆ ಮುತ್ತಮ್ಮ ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು, ದುರ್ಬಲ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ.
ಇವರ ಸಂಘಟನಾ ಚಾತುರ್ಯಕ್ಕಾಗಿ ಈ ಬಾರಿ ಇವರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.














