ಇತ್ತೀಚಿನ ಸುದ್ದಿ
ವಕೀಲರ ಮೇಲೆ ಹಲ್ಲೆ ಪ್ರಕರಣದಲ್ಲಿ 6 ಮಂದಿ ಪೊಲೀಸರ ಅಮಾನತು: ಎಸ್ಪಿ ಕ್ರಮ ವಿರೋಧಿಸಿ ಕೆಲಸ ನಿಲ್ಲಿಸಿದ ಚಿಕ್ಕಮಗಳೂರು ನಗರದ 6 ಠಾಣೆಗಳ ಪೊಲೀಸರು
02/12/2023, 21:54
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವಕೀಲರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತಿಗೊಳಗಾದ 6 ಮಂದಿ ಪೊಲೀಸರ ಪರವಾಗಿ ಚಿಕ್ಕಮಗಳೂರು ನಗರದ ಎಲ್ಲ 6 ಪೊಲೀಸ್ ಠಾಣೆಗಳ ಸಿಬ್ಬಂದಿಗಳು ಕೆಲಸ ನಿಲ್ಲಿಸಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಾವು ಕಾನೂನು ಗೌರವಿಸುತ್ತೇವೆ… ಅವರು ನಿಮಗೇನು ಗೌರವ ಕೊಟ್ಟರು ಸರ್? ಮಾತಾಡೋದಾದ್ರೆ ಇಲ್ಲೇ ಮಾತಾಡಿ ಸರ್…. ಒಳಗೆ ಬರಲ್ಲ ಎಂದು ಪ್ರತಿಭಟನಾಕಾರರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆಗೆ ಖಡಕ್ ಆಗಿ ಹೇಳಿದರು. ಇದರೊಂದಿಗೆ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಪೊಲೀಸ್ ಹಾಗೂ ವಕೀಲರ ನಡುವಿನ ಘರ್ಷಣೆಗೆ ಹೊಸ ರೂಪ ಬಂದಿದೆ.
ಪೊಲೀಸ್ ಕುಟುಂಬಗಳಿಗೆ ಅನ್ಯಾಯ ಆಗಿದೆ ಸರ್. ನಮಗೆ ಏನಾದ್ರು ಆದ್ರೆ… ನಮ್ಮ ಕುಟುಂಬಗಳಿಗೆ ಯಾರು ಜವಾಬ್ದಾರಿ…? ಎಂದು ಪ್ರತಿಭಟನಾಕಾರರು ಎಸ್ಪಿ ಮುಂದೆ ತಮ್ಮ ನೋವು ಹೇಳಿಕೊಂಡರು.
ಕಾನೂನು ಗೊತ್ತಿದ್ದವರೇ ಕಾನೂನು ಮುರಿದ್ರು… ನೀವು ಏನ್ ಮಾಡಿದ್ರು ಸರ್ ಎಂದು ಪ್ರಶ್ನಿಸಿದರು. ನಾವ್ಯಾರು ಕೆಲಸ ಮಾಡಲ್ಲ ಅಂತ ಎಸ್ಪಿ ಕಚೇರಿ ಬಳಿ ಪೊಲೀಸರು ಜಮಾಯಿಸಿದ್ದರು.
ಕೆಲಸ ಬಿಟ್ಟು 100ಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆಗೆ ಆಗಮಿಸಿದ್ದರು. ವಾಟ್ಸಾಪ್ ಗ್ರೂಪ್ ಮೂಲಕ ಜಿಲ್ಲೆಯ 800 ಪೊಲೀಸರು ಒಂದಾಗಿದ್ದಾರೆ.