8:19 AM Sunday8 - March 2026
ಬ್ರೇಕಿಂಗ್ ನ್ಯೂಸ್
ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ

ಇತ್ತೀಚಿನ ಸುದ್ದಿ

ವಾಸ ಮತ್ತು ಹೂಡಿಕೆಗೆ ಸೂಕ್ತ ಆಯ್ಕೆ: ಸನ್ಶೈನ್ ಸ್ಯಾಪ್ಲಿಂಗ್; ಸೀಮಿತ ಅವಧಿಗೆ 10% ವಿಶೇಷ ರಿಯಾಯತಿ

13/10/2023, 13:33

ಮಂಗಳೂರು(reporterkarnataka.com): ಉತ್ಕೃಷ್ಟ ಗುಣಮಟ್ಟದ ಕಾಮಗಾರಿ, ವಿಶಾಲ ಹಸಿರು ವಲಯ, ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆಯ ಜೊತೆಗೆ ಸುಸಜ್ಜಿತ ಸೌಕರ್ಯಗಳ ಸನ್ಶೈನ್ ಸ್ಯಾಪ್ಲಿಂಗ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್ 15 ರಿಂದ 24ರ ಸೀಮಿತ ಅವಧಿಗೆ ಆದ್ಯತೆಯ ಮೇರೆಗೆ ಅಪಾರ್ಟ್ಮೆಂಟ್ ಖರೀದಿಯ ಮೇಲೆ 10% ವಿಶೇಷ ಹಬ್ಬದ ರಿಯಾಯತಿಯನ್ನು ಘೋಷಿಸಲಾಗಿದೆ ಎಂದು ಸನ್ಶೈನ್ ಮಲ್ಟಿವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ಮಾಹಿತಿ ನೀಡಿದೆ.

ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 6 ಕಿಮೀ ಅಂತರದಲ್ಲಿ, ಬಜ್ಪೆ – ಕೈಕಂಬ ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ನೆಲ, ತಳ ಮತ್ತು ನಾಲ್ಕು ಮಜಲುಗಳ ಸನ್ಶೈನ್ ಸ್ಯಾಪ್ಲಿಂಗ್ ಸಂಕೀರ್ಣದಲ್ಲಿ 770 ಚದರ ಅಡಿ ವಿಸ್ತಾರದ ಒಂದು ಬೆಡ್ರೂಮ್ನ ನಾಲ್ಕು , 1350 ಹಾಗೂ 1450 ಚದರ ಅಡಿ ವಿಸ್ತಾರದ ಎರಡು ಬೆಡ್ರೂಮ್ನ ಹನ್ನೆರಡು ಮತ್ತು 1970 ಚದರ ಅಡಿ ವಿಸ್ತಾರದ ಮೂರು ಬೆಡ್ರೂಮ್ನ ನಾಲ್ಕು ಅಪಾರ್ಟ್ಮೆಂಟ್ಗಳು ಲಭ್ಯವಿದ್ದು, ಬೆಲೆ ಚದರ ಅಡಿಗೆ ರೂ. 4,100/- ರಿಂದ ಆರಂಭವಾಗುತ್ತದೆ. ಕಾವೂರು – ಕಿನ್ನಿಗೋಳಿ ಮತ್ತು ವಾಮಂಜೂರು – ಮೂಡಬಿದ್ರೆ ಹೆದ್ದಾರಿಗಳು ಚತುಷ್ಪಥ ರಸ್ತೆಗಳಾಗಿ ಅಭಿವೃದ್ದಿಗೊಳ್ಳುತ್ತಿದ್ದು, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಕೇಂದ್ರ ಮತ್ತು ದಿನಸಿ ಮತ್ತು ವ್ಯಾಪಾರಿ ಮಳಿಗೆಗಳು ಸಂಕೀರ್ಣದಿಂದ ಕೂಗಳತೆಯ ದೂರದಲ್ಲಿವೆ. ಹೂಡಿಕೆಯ ದೃಷ್ಟಿಯಿಂದ ಖರೀದಿ ಮಾಡುವವರಿಗೂ ಅತ್ಯಲ್ಪ ಅವಧಿಯಲ್ಲಿ ದ್ವಿಗುಣ ಪ್ರತಿಫಲ ಸಿಗುವ ನಿರೀಕ್ಷೆಯಿದೆ ಎಂದು ಪ್ರವರ್ತಕರು ತಿಳಿಸಿದ್ದಾರೆ.
ನವೆಂಬರ್ 2024 ಕ್ಕೆ ಅಪಾರ್ಟ್ಮೆಂಟ್ಗಳು ವಾಸಕ್ಕೆ ಲಭ್ಯವಿದ್ದು, ಎಲ್ಲಾ ಬ್ಯಾಂಕ್ ಹಾಗೂ ಗೃಹ ಸಾಲ ಸಂಸ್ಥೆಗಳಿಂದ ಸಾಲ ಸೌಲಭ್ಯ ದೊರೆಯಲಿದೆ.
ಹೆಚ್ಚಿನ ಮಾಹಿತಿಗಾಗಿ +91 7483037734 ದೂರವಾಣಿ ಅಥವಾ ಜಾಲತಾಣ www.saplingmvpl.com ಕ್ಕೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು