ಇತ್ತೀಚಿನ ಸುದ್ದಿ
ಉರ್ವಾಸ್ಟೋರ್ ಮೈದಾನ ಬಳಿ ಮಟ್ಕಾ ದಂಧೆ: ಇಬ್ಬರ ಬಂಧನ; 4.24 ಲಕ್ಷ ರೂ. ನಗದು, ಸೊತ್ತು ವಶ
19/08/2023, 17:32
ಮಂಗಳೂರು(reporterkarnataka.com): ನಗರದ ಉರ್ವಾ ಸ್ಟೋರ್ ಮೈದಾನ ಬದಿಯಲ್ಲಿರುವ ಕಾಪೋರೇಶನ್ ಕಟ್ಟಡದ ದಿನಸಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಚಿಲಿಂಬಿಯ ಗೋಕುಲದಾಸ್ ಶೆಣೈ(55) ಹಾಗೂ ಕೋಡಿಕಲ್ ನ ದೀಪಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಗಳ ವಶದಲ್ಲಿದ್ದ ಮಟ್ಕಾ ಚೀಟಿ ಗೆ ಸಂಬಂಧಿಸಿದ 424490 ರೂ.ನಗದು, ಮೊಬೈಲ್ ಹಾಗೂ ಮಟ್ಕಾ ಬರೆದಿದ್ದ ಚೀಟಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಉರ್ವಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಆಯುಕ್ತರಾದ ಕುಲದೀಪ್ ಜೈನ್ ಅವರ ಆದೇಶದಂತೆ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಯವರ ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣಾ ಪಿಐ ಭಾರತಿ ಅವರ ತಂಡ ಹರೀಶ್ ಹೆಚ್.ಎ., ಸಫೀನಾ, ವೆಂಕಟೇಶ್, ರಾಮಚಂದ್ರ, ಸುನೀತ, ಭರಣಿ ದೀಕ್ಷಿತ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.