10:44 PM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಊರೆಲ್ಲ ಕೊಳ್ಳೆ ಹೊಡೆದ ಬಳಿಕ ಕೋಟೆ ಬಾಗಿಲು ಮುಚ್ಚಿದ್ರು!: ಮಟ್ಕಾ ಸೋಡಾ ಸ್ಟಾಲ್ ಗೆ ಪಾಲಿಕೆ ಆರೋಗ್ಯ ಸಿಬ್ಬಂದಿಗಳ ಕಣ್ಕಟ್ಟಿನ ರೈಡ್!!

24/10/2023, 21:05

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಊರೆಲ್ಲ ಕೊಳ್ಳೆ ಹೊಡೆದ ಬಳಿಕ ಕೋಟೆ ಬಾಗಿಲು ಮುಚ್ಚಿದ್ರು ಎನ್ನುವಂತಾಗಿದೆ ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯ ವಿಭಾಗದ ಕಥೆ. ದಸರಾ ಮಹೋತ್ಸವ ಸಂದರ್ಭದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುವ ಫುಡ್ ಸ್ಟಾಲ್, ಜ್ಯೂಸ್ ಸ್ಟಾಲ್, ಮಟ್ಕಾ ಸೋಡಾ ಸ್ಟಾಲ್ ಗಳ ಮೇಲೆ ಪಾಲಿಕೆಗೆ ನಿಯಂತ್ರಣವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.


ನವರಾತ್ರಿ ಮಹೋತ್ಸವ ಕೊನೆಯ ಹಂತದಲ್ಲಿದೆ. ವಿಶ್ವ ಪ್ರಸಿದ್ಧ ಕುದ್ರೋಳಿ ದೇಗುಲದ ಅನತಿ ದೂರದಲ್ಲಿ ಹಾಕಿದ ಮಟ್ಕಾ ಸೋಡಾ ಸ್ಟಾಲ್ ನ ಕೊಳೆತ ಸೋಡಾದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗಳು ಸ್ಟಾಲ್ ಗೆ ಭೇಟಿ ಕೊಟ್ಟಿದ್ದಾರೆ. ಆರೋಗ್ಯ ನಿರೀಕ್ಷಕ ಭಾಸ್ಕರ್ ಅವರು ಮಟ್ಕಾ ಸೋಡಾದ ಸ್ಟಾಲ್ ಗೆ ಭೇಟಿ ನೀಡಿದ್ದಾರೆ. ಕಷ್ಟ ಸುಖ ಮಾತನಾಡಿಕೊಂಡು ಬಂದಿದ್ದಾರೆ. ರೈಡ್ ಎಂಬ ಕಣ್ಕಟ್ಟಿನ ನಾಟಕವನ್ನು ಮಾಡಿ ಮುಗಿಸಿದ್ದಾರೆ ಎಂದು ಮಟ್ಕಾ ಸೋಡಾ ಕುಡಿದು ವಾಕರಿಕೆ ಮಾಡಲು ಆಗದೆ, ಜೀರ್ಣಿಸಿಕೊಳ್ಳಲೂ ಆಗದೆ ಸಂತ್ರಸ್ತರಾದವರು ದೂರುತ್ತಿದ್ದಾರೆ. ಪಾಲಿಕೆಯಿಂದ ಏನು ಕ್ರಮ ಕೈಗೊಂಡಿದ್ದೀರಿ ಎಂದು ಆರೋಗ್ಯ ನಿರೀಕ್ಷಕ ಭಾಸ್ಕರ್ ಅವರಲ್ಲಿ ಪ್ರಶ್ನಿಸಿದರೆ, ಅವರಿಂದ ಯಾವುದೇ ಉತ್ತರವಿಲ್ಲ.
ಸಾಮಾನ್ಯವಾಗಿ ನವರಾತ್ರಿ, ದಸರಾ, ಮಾರಿಗುಡಿ ಜಾತ್ರೆ, ಮಂಗಳಾದೇವಿ ಜಾತ್ರೆ ಮುಂತಾದ ಸಂದರ್ಭದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಫುಡ್ ಹಾಗೂ ಜ್ಯೂಸ್ ಸ್ಟಾಲ್ ಗಳು ತಲೆ ಎತ್ತುತ್ತವೆ. ಆದರೆ ಪಾಲಿಕೆ
ವ್ಯಾಪ್ತಿಯಲ್ಲಿ ಇಂತಹ ಫುಡ್ ಸ್ಟಾಲ್ ಗಳು ತಲೆ ಎತ್ತಿದರೆ ಪಾಲಿಕೆಯ ಆರೋಗ್ಯವಿಭಾಗಕ್ಕೆ ಯಾವುದೇ ಕಂಟ್ರೋಲ್ ಇರುವುದಿಲ್ಲ ಎನ್ನುವುದು ಮಟ್ಕಾ ಸೋಡಾದ ಕಥೆ ಮಂಗಳೂರಿನ ನಾಗರಿಕರಿಗೆ ಸಾರಿ ಸಾರಿ ಹೇಳುತ್ತಿದೆ. ವಾಸ್ತವದಲ್ಲಿ ಸ್ಟಾಲ್ ಗಳಿಗೆ ಪಾಲಿಕೆ ಪರ್ಮಿಷನ್ ಕೊಡುವಾಗ ಶುಲ್ಕ ಪಾವತಿಸಲು ಇರುತ್ತದೆ. ಹಾಗೆ ಪಾಲಿಕೆಯಿಂದ ಷರತ್ತು ವಿಧಿಸಲಾಗುತ್ತದೆ. ಹಾಗೆ, ಈ ಷರತ್ತನ್ನು ಸ್ಟಾಲ್ ಪಡೆದವರು ಪಾಲಿಸಿದ್ದಾರೆಯೇ ಎನ್ನುವುದರ ಬಗ್ಗೆ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗಳು ನಿಗಾ ಇಡಬೇಕಾಗುತ್ತದೆ. ಆದರೆ ಪಾಲಿಕೆ ಎಡವಿದ್ದೇ ಇಲ್ಲಿ. ಹಣ ಕಟ್ಟಿ ಪರ್ಮಿಷನ್ ತೆಗೆದುಕೊಂಡ ಸ್ಟಾಲ್ ಗಳು ಯಾವ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿ ಕೊಟ್ಟರೂ ಪಾಲಿಕೆಯ ಆರೋಗ್ಯ ಸಿಬ್ಬಂದಿಗಳು ಕಣ್ಣೆತ್ತಿಯೂ ನೋಡುವುದಿಲ್ಲ. ಇದಕ್ಕೆ ಕಾರಣವೂ ಇದೆ ಎಂದು ಮಂಗಳೂರಿನ ನಾಗರಿಕರು ದೂರುತ್ತಾರೆ. ಆ ಕಾರಣ ಏನೆಂದರೆ ಸ್ಟಾಲ್ ಗಳಿಂದ ಮಾಮೂಲಿ ಪಡೆಯುವುದು ಆಗಿದೆ. ಮಟ್ಕಾ ಸೋಡಾ ವಿಷಯದಲ್ಲಿಯೂ ನಡೆದದ್ದು ಇದುವೇ ಎಂದು ಕುದ್ರೋಳಿ ಆಸುಪಾಸಿನ ನಿವಾಸಿಯಾದ ಪುಷ್ಪಾ ಹಾಗೂ ಉರ್ವದ ಹಿರಿಯ ನಾಗರಿಕರಾದ ರಮೇಶ್ ಕುಮಾರ್ ಅವರು ಹೇಳುತ್ತಾರೆ.
ಇದೀಗ ನವರಾತ್ರಿ ಸಂದರ್ಭದಲ್ಲಿ ತಲೆ ಎತ್ತಿದ ಫುಡ್, ಜ್ಯೂಸ್, ಮಟ್ಕಾ ಸೋಡಾ ಸ್ಟಾಲ್ ಗಳ ಕತೆಯೂ ಇದೇ ಆಗಿದೆ. ಕುದ್ರೋಳಿ ಬಳಿಯ ಮಟ್ಕಾ ಸೋಡಾ ಸ್ಟಾಲ್ ನವರು ಕೊಳೆತು ಕಪ್ಪಗಾದ ನೀರಿನಲ್ಲಿ ಮಟ್ಕಾ ಸೋಡಾದ ಪಾತ್ರೆ ತೊಳೆದರೂ, ಜರ್ದ ತಿಂದು ಅಲ್ಲೇ ಉಗುಳಿದರೂ ಆರೋಗ್ಯ ಸಿಬ್ಬಂದಿಗಳಿಗೆ ಗೊತ್ತಾಗುವುದಿಲ್ಲ. ವೀಡಿಯೋ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕವೇ ಇವರು ಎಚ್ಚರವಾಗುವುದು. ಅದೇ ರೀತಿ
ಇಲ್ಲಿಯೂ ವೀಡಿಯೊ ವೈರಲ್ ಆದ ಬಳಿಕವೇ ಮಟ್ಕಾ ಸ್ಟಾಲ್ ಗೆ ಆರೋಗ್ಯ ನಿರೀಕ್ಷಕರು ಭೇಟಿ ನೀಡಿದ್ದಾರೆ. ಅಲ್ಲಿಗೆ ಎಲ್ಲ ತೇಪೆ ಹಚ್ಚುವ ಕಾರ್ಯ ಮುಗಿದೆ. ಸ್ಟಾಲ್ ಗಳ ಶುಚಿತ್ವ ಬಗ್ಗೆ ಪಾಲಿಕೆಯ ಆರೋಗ್ಯ ಸಿಬ್ಬಂದಿಗಳು ಮೊದಲೇ ಎಚ್ಚೆತ್ತು ನಿಗಾ ವಹಿಸುತ್ತಿದ್ದರೆ, ಜನರ ಆರೋಗ್ಯದ ಜತೆ ಚೆಲ್ಲಾಟ ನಡೆಯುತ್ತಿರಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು