ಇತ್ತೀಚಿನ ಸುದ್ದಿ
ಉಪ್ಪಿನಂಗಡಿ: ಬೀಡಿ ಕಂಪನಿ ಮಾಲೀಕರ ಮನೆಗೆ ಐಟಿ ದಾಳಿ; ಕಡತಗಳ ಪರಿಶೀಲನೆ
10/10/2023, 16:49

ಉಪ್ಪಿನಂಗಡಿ(reporterkarnataka.com): ಇಲ್ಲಿಗೆ ಸಮೀಪದ ಪೆರ್ನೆಯ ಬೀಡಿ ಕಂಪನಿ ಮಾಲೀಕರೊಬ್ಬರ ಮನೆಗೆ ಆದಾಯ ತೆರಿಗೆ ದಾಳಿ ನಡೆಸಿದೆ.
ಅನಿತಾ ಬೀಡಿ ವರ್ಕ್ ಕಂಪೆನಿ ಮಾಲೀಕರ ಮನೆಗೆ ಈ ದಾಳಿ ನಡೆಸಲಾಗಿದೆ.
ಅನಿತಾ ಬೀಡಿ ವರ್ಕ್ಸ್ ಮಾಲೀಕರ ಮಹಮ್ಮದ್ ಆಲಿ ಯಾನೆ ಮಮ್ಮು ಅವರ ಮನೆಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಹಲವು ಅಧಿಕಾರಿಗಳಿಂದ ಮನೆ ಮತ್ತು ವರ್ಕ್ ಶಾಪ್ ಗೆ ಏಕ ಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.