ಇತ್ತೀಚಿನ ಸುದ್ದಿ
ಅನ್ ಲಾಕ್: ಮಕ್ಕಳ ಜತೆ ಮಂಗಳೂರು ಸುತ್ತಿದ ಹೆತ್ತವರು: ಮಧ್ಯಾಹ್ನ 2.45 ಕಳೆದರೂ ತೆರವಾಗದ ಜನರು!!
23/06/2021, 16:35
ಚಿತ್ರ :ಅನುಷ್ ಪಂಡಿತ್ ಮಂಗಳೂರು
strong>ಮಂಗಳೂರು(reporterkarnataka news): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆ ವರೆಗೆ ಅನ್ ಲಾಕ್ ಜಾರಿಯಲ್ಲಿರುವುದರಿಂದ ಮಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಳಗೊಂಡಿದ್ದು, ನಗರಕ್ಕೆ ಆಗಮಿಸಿದವರಲ್ಲಿ ಹೆಚ್ಚಿನವರು ಜತೆಗೆ ಮಕ್ಕಳನ್ನು ಕೂಡ ಕರೆದು ತಂದಿರುವುದು ಹಲವೆಡೆ ಕಂಡು ಬಂತು. ಈ ನಡುವೆ ಮಂಗಳೂರು ನಗರದಲ್ಲಿ ಪೊಲೀಸ್ ತಪಾಸಣೆ ತೀವ್ರಗೊಂಡಿದೆ.
ಕೊರೊನಾ 3ನೇ ಅಲೆಯ ಭೀತಿಯಿದ್ದರೂ, ಮಕ್ಕಳನ್ನು ಸುರಕ್ಷಿತವಾಗಿ ಮನೆಯಲ್ಲಿ ಇರಿಸಿಕೊಳ್ಳುವ ಬಗ್ಗೆ ಜಿಲ್ಲಾಡಳಿತ ಪದೇ ಪದೇ ವಿನಂತಿ ಮಾಡಿದರೂ ನಗರಕ್ಕೆ ಆಗಮಿಸಿದ ಹೆಚ್ಚಿನ ಪೋಷಕರ ಜತೆ 18 ವರ್ಷ ಕೆಳಗಿನ ಮಕ್ಕಳಿದ್ದರು.
ಮಧ್ಯಾಹ್ನ 2 ಗಂಟೆ ವರೆಗೆ ಅಂಗಡಿ ಮುಂಗಟ್ಟು ತೆರೆಯಲು ಹಾಗೂ ಸಾರ್ವಜನಿಕರಿಗೆ ಖರೀದಿಗೆ ಅವಕಾಶ ನೀಡಲಾಗಿತ್ತು.
ಆದರೆ ಮಧ್ಯಾಹ್ನ 2.45ರ ವರೆಗೆ ಕೂಡ ಕೆಲವು ಕಡೆಗಳಲ್ಲಿ ಜನರು ರಸ್ತೆಯಿಂದ, ಅಂಗಡಿ ಬಾಗಿಲಿನಿಂದ ತೆರವುಗೊಂಡಿರಲಿಲ್ಲ.
ಮಾಸ್ಕ್ ಧರಿಸದೆ ಓಡಾಡುವವರಿಗೆ ಮತ್ತು ಅನಗತ್ಯ ಸತ್ತಾಟಕ್ಕೆ ಬಂದವರಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು. ಸಂಶಯಾಸ್ಪದ ವಾಹನಗಳನ್ನು ನಿಲ್ಲಿಸಿ ಆರ್ ಸಿ, ಡಿಎಲ್, ಇನ್ಸೂರೆನ್ಸ್ ತಪಾಸಣೆ ಮಾಡಿದರು.