ಇತ್ತೀಚಿನ ಸುದ್ದಿ
ಉಕ್ರೇನ್ ನಲ್ಲಿ ಸಿಲುಕಿದ್ದ ಅಥಣಿ ವಿದ್ಯಾರ್ಥಿಗಳಾದ ರಕ್ಷಿತಾ ಗಣಿ, ಆಫ್ರಿನ್ ನಿಡೋಣಿ ಮರಳಿ ತಾಯ್ನಾಡಿಗೆ
11/03/2022, 09:26
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿದ್ದ ಅಥಣಿಯ ವಿದ್ಯಾರ್ಥಿಗಳಾದ ರಕ್ಷಿತಾ ಗಣಿ, ಆಫ್ರಿನ್ ನಿಡೋಣಿ ಮರಳಿ ತಾಯ್ನಾಡಿಗೆ ಬಂದಿದ್ದಾರೆ.
ಮರಳಿ ಬಂದ ಮಕ್ಕಳಿಗೆ ಕುಟುಂಬಸ್ಥರು ಆರತಿ ಎತ್ತಿ ಸ್ವಾಗತ ಕೋರಿದರು.
ಮಕ್ಕಳ ತಬ್ಬಿಕೊಂಡು ತಾಯಿ ತಂದೆ ಬಾವುಕರಾದರು.
ನಾವು ಮರಳಿ ತಾಯ್ನಾಡಿಗೆ ಬರುತ್ತೇವೆ ಎಂಬ ನಂಬಿಕೆ ನಮಗೆ ಇರಲಿಲ್ಲ ಎಂದು ಉಕ್ರೇನಿನ ರಣ ಭೀಕರ ಕಹಾನಿಯನ್ನು ವಿದ್ಯಾರ್ಥಿಗಳು ಬಿಚ್ಚಿಟ್ಟರು.
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ದೇಶಕ್ಕೆ ಹೋದ ಅದೆಷ್ಟೋ ವಿದ್ಯಾರ್ಥಿಗಳಿಗೆ ಭಾರತದ ತ್ರಿರಂಗ ಧ್ವಜ ರಕ್ಷಾ ಕವಚ ವಾಗಿತ್ತು. ನಾವು ನಮ್ಮ ದೇಶದ ಬಾವುಟ ತೋರಿಸಿ ಸುರಕ್ಷಿತವಾಗಿ ನಮ್ಮ
ತಾಯ್ನಾಡಿಗೆ ಬಂದಿದ್ದೇವೆ. ಅದು ಅಲ್ಲಿ ನಮ್ಮ ದೇಶಕ್ಕಿರೋ ಗೌರವ.ಬೇರೆ ದೇಶದವರು ನಮ್ಮ ದೇಶದ ಭಾವುಟ ಹಿಡಿದು ರಕ್ಷಣೆ
ಪಡೆದಿದ್ದಾರೆ. ಇದು ನಮ್ಮ್ ದೇಶದ ತಾಕತ್ತು ಎಂದು ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳಾದ ರಕ್ಷಿತಾ ಗಣಿ ಹಾಗೂ ಆಫ್ರಿನ್ ನಿಡೋಣಿ ಹೇಳಿದರು.
ಮರಳಿ ಬರಲು ಸಹಾಯ ಮಾಡಿದ ಇಂಡಿಯನ್ ಎಂಬೆಸಿ, ಭಾರತ ಸರಕಾರ, ರಾಜ್ಯ ಸರ್ಕಾರಕ್ಕೆ ಮತ್ತು ಅಥಣಿ ಸ್ಥಳೀಯ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ವಿಶೇಷ ಅಭಿನಂದನೆ ಹೇಳಿದರು.