ಇತ್ತೀಚಿನ ಸುದ್ದಿ
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳ ವಿರುದ್ಧ ಸೇನಾ ಕಾರ್ಯಾಚರಣೆ: ಇಬ್ಬರು ಉಗ್ರರ ಹತ್ಯೆ: ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಶ
23/04/2025, 11:38

ಶ್ರೀನಗರ(reporterkarnataka.com): ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ 25ಕ್ಕೂ ಅಧಿಕ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ವಿರುದ್ಧ ಸೇನಾ ಕಾರ್ಯಾಚರಣೆ ಈಗಾಗಲೇ ಆರಂಭವಾಗಿದ್ದು, ಇಬ್ಬರು ಉಗ್ರಗಾಮಿಗಳನ್ನು ಸದೆಬಡಿಯಲಾಗಿದೆ. ಉಗ್ರರಿಂದ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ವಶಪಡಿಸಲಾಗಿದೆ.
ಇನ್ನಷ್ಟು ಉಗ್ರಗಾಮಿಗಳು ಭಾರತದ
ಗಡಿಯೊಳಗೆ ನುಸುಳುವ ಸಂಚನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಉಗ್ರಗಾಮಿಗಳು ನಿನ್ನೆ ನಡೆಸಿದ ದಾಳಿಗೆ ಶಿವಮೊಗ್ಗದ ಉದ್ಯಮಿ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಉಗ್ರರ ದಾಳಿಗೆ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್ ರಾವ್ ಎಂಬವರು ಸಾವನ್ನಪ್ಪಿದ್ದರು. ಮಂಜುನಾಥ್ ಅವರು ಕುಟುಂಬ ಸಮೇತರಾಗಿ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಕಾಶ್ಮೀರದ
ಪಹಲ್ಗಾಮ್‌ನಲ್ಲಿ ನಿನ್ನೆ ಮಧ್ಯಾಹ್ನ ಉಗ್ರರ ದಾಳಿ ನಡೆಸಿದ್ದರು.
ಪಹಲ್ಗಾಮ್‌ನ ಬೈಸರನ್ ಕಾಡು ಪ್ರದೇಶದಲ್ಲಿ ಟ್ರಕ್ಕಿಂಗ್ ಹೋಗುತ್ತಿದ್ದ ಮಹಿಳಾ ಪ್ರವಾಸಿಗರೊಬ್ಬರು ಪೊಲೀಸರಿಗೆ ಕರೆ ಮಾಡಿ ಭಯೋತ್ಪಾದಕರಿಂದ ದಾಳಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.