2:48 AM Wednesday28 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

ಉದ್ಯಮಿ ಪುತ್ರ, ಮಾಜಿ ಮಂತ್ರಿಯ ಪುತ್ರಿ ಮದುವೆಯಲ್ಲಿ ಸಾಮಾಜಿಕ ಕೈಂಕರ್ಯ : ಹಳ್ಳಿಜನರಿಗೆ ‘ದೃಷ್ಟಿ ಭಾಗ್ಯ’ 

21/12/2021, 08:08

ಬೀದರ್(reporterkarnataka.com):

ಉದ್ಯಮಿ ತಾಳಂಪಳ್ಳಿ ಸಹೋದರರ ಮಕ್ಕಳ ಅದ್ದೂರಿ ಹಾಗೂ ವೈಶಿಷ್ಟಪೂರ್ಣ ವಿವಾಹ ಬೆಂಗಳೂರಿನ ಖ್ಯಾತ ಉದ್ಯಮಿ ಶ್ರೀ ಧನರಾಜ್ ತಾಳಂಪಳ್ಳಿ ಹಾಗೂ ಶೈಲಾಶ್ರೀ ಪುತ್ರ ಆಕಾಶ್ ಅವರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ರಾಜಶೇಖರ್ ಬಿ ಪಾಟೀಲ್ ಹಾಗೂ ಪ್ರೇಮ ದಂಪತಿಯ ಪುತ್ರಿ ಡಾ. ಶಕುಂತಲಾ ಅವರನ್ನು ವಿವಾಹವಾದರು.

ಉದ್ಯಮಿ ಧನರಾಜ್ ತಾಳಂಪಳ್ಳಿ ಇವರ ಸಹೋದರ ಮಲ್ಲಿಕಾರ್ಜುನ ತಾಳಂಪಳ್ಳಿ ಇವರ ಪುತ್ರ ಶಿವಕುಮಾರ ಅವರು ಹಾಗೂ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತ ಅವರನ್ನು ವಿವಾಹವಾದರು.

ನವೆಂಬರ್ 21, 2021ರಂದು ಸಂಜೆ ಬೀದರ್ ನ ರಾಜರಾಜೇಶ್ವರಿ ದೇವಸ್ಥಾನ, ಶಕುಂತಲಾ ಪಾಟೀಲ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದಲ್ಲಿ ಈ ಜೋಡಿ ವಿವಾಹ ಜರುಗಿತು. ಇದು ನಾಡಿನ ಗಣ್ಯಾತಿಗಣ್ಯರ ಪಾಲ್ಗೊಳ್ಳುವಿಕೆಯಿಂದ ಅತಿ ವಿಶೇಷ ಕಾರ್ಯಕ್ರಮವಾಗಿ ಸಡಗರ ಆಚರಣೆಗಳಿಂದ ನಡೆಯಿತು. 

ಅದ್ಧೂರಿ ವೈಭವದ ವಿವಾಹ ಮಹೋತ್ಸವದಲ್ಲೂ ಸಾವಿರಾರು ಮಂದಿ ಗಣ್ಯರು ಭಾಗಿಯಾದರು. ಬೆಂಗಳೂರಿನ ಉದ್ಯಮ ಲೋಕದ ದಿಗ್ಗಜರ ಸಮಾಗಮಕ್ಕೂ ಈ ವಿವಾಹ ಸಮಾರಂಭ ವೇದಿಕೆಯೆನಿಸಿತು. ಸಂಪ್ರದಾಯ, ವೈದಿಕ ಕೈಂಕರ್ಯ ಸಹಿತ ವಿಧಿವಿಧಾನಗಳು ವಿವಿಧ ಮಠಾಧಿಪತಿಗಳು ಹಾಗೂ ಪುರೋಹಿತರ ಮಾರ್ಗದರ್ಶನದಲ್ಲಿ ನೆರವೇರಿತು

ಬೆಂಗಳೂರಿನ ಗಣ್ಯರಿಗಾಗಿ ವಿಶೇಷ ವೈಭವೋಪೇತ ವಿವಾಹ ಸತ್ಕಾರಕೂಟ; ಡಿಸೆಂಬರ್ 18, 2021 ರಂದು ಗ್ರ್ಯಾಂಡ್ ಕ್ಯಾಸಲ್, ಗೇಟ್ #6, ಅರಮನೆ ಮೈದಾನ, ಬೆಂಗಳೂರು ಇಲ್ಲಿ ಸಂಜೆ 6.00 ಗಂಟೆಗೆ ಬೆಂಗಳೂರಿನ ಗಣ್ಯರಿಗಾಗಿ ಏರ್ಪಡಿಸಲಾದ ವಿಶೇಷ ವೈಭವೋಪೇತ ವಿವಾಹ ಸತ್ಕಾರಕೂಟ (ಮದುವೆಯ ಆರತಕ್ಷತೆ ) ದಲ್ಲಿ ನಾಡಿನ ಗಣ್ಯಾತಿಗಣ್ಯರು ಭಾಗವಹಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾದ ಸಿ. ಎನ್. ಅಶ್ವಥ್ ನಾರಾಯಣ, ಬೈರತಿ ಬಸವರಾಜ, ಎಸ್. ವಿ. ಸೋಮಣ್ಣ, ಮಾಜಿ ಸಚಿವ, ಶಾಸಕ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ  ಡಿ.ಕೆ ಶಿವಕುಮಾರ್ ಹಾಗೂ ಇತರ ಅನೇಕ ಗಣ್ಯರು ವಿವಾಹ ಸತ್ಕಾರಕೂಟ (ಮದುವೆಯ ಆರತಕ್ಷತೆ) ಕಾರ್ಯಕ್ರಮದಲ್ಲಿ ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದರು. 

ಹಳ್ಳಿಜನರಿಗೆ ‘ದೃಷ್ಟಿ ಭಾಗ್ಯ’; ಮದುವೆ ಸಮಾರಂಭವೆಂದರೆ ಗತ್ತು-ಗಮ್ಮತ್ತಿನ ಅದ್ಧೂರಿ ಸಮಾರಂಭ. ಆಡಂಬರಕ್ಕೇ ಹೆಚ್ಚು ಮಹತ್ವ. ಆದರೆ ಇಲ್ಲಿ ಪ್ರತಿಷ್ಠಿತ ಕುಟುಂಬಗಳ ನಡುವಿನ ಬಾಂಧವ್ಯ ಬೆಸೆಯುವ ವಿವಾಹ ಸಮಾರಂಭ ಬೇರೆಡೆಯ ಸನ್ನಿವೇಶಗಳಂತಲ್ಲ. ಮಾನವೀಯತೆಯ ಮಜಲಿನತ್ತ ಹೆಜ್ಜೆ ಇಡುವ ಪರ್ವಕ್ಕಾಗಿ ನಡೆದಿರುವ ಅನನ್ಯ ಕಣ್ಣು ತಪಾಸಣಾ ಶಿಬಿರ ಎಲ್ಲರ ಗಮನಸೆಳೆದಿದೆ.  ಈ ವಿವಾಹ ಅಂಗವಾಗಿ ಮಾನವೀಯತೆಯ ಕೈಂಕರ್ಯ ನಡೆಸಲು ಈ ವಧೂ-ವರರು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಪವರ್ ಸ್ಟಾರ್ ಪುನೀತ್  (Puneeth Rajkumar) ಅವರ ಕಣ್ಣುದಾನದ ಮಾರ್ಗ ಹಾಗೂ ಆದರ್ಶ.

ಸಾರ್ವಜನಿಕರಿಗಾಗಿ ಕಣ್ಣು ತಪಾಸಣಾ ಶಿಬಿರ
ದಿವಂಗತ ಪುನೀತ್ ರಾಜಕುಮಾರ್ ನೇತ್ರದಾನದ (Eye Donation) ಪ್ರೇರಣೆಯಿಂದಾಗಿ ತಾಳಂಪಳ್ಳಿ ಮಕ್ಕಳ ಮದುವೆಗೆ ಮೊದಲು ಸಾರ್ವಜನಿಕರಿಗಾಗಿ ನೇತ್ರ ಚಿಕಿತ್ಸೆಯ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಜ್ ಕುಟುಂಬದಿಂದ ಪ್ರೇರೇಪಿತ ಬೆಂಗಳೂರಿನ ಈ ಪ್ರತಿಷ್ಠಿತ ಉದ್ಯಮಿಯಿಂದ ತನ್ನೂರು ಬೀದರ್ ಜಿಲ್ಲೆ ಹುಮನಾಬಾದ್ ಸಮೀಪದ ಹಳ್ಳಿಖೇಡದಲ್ಲಿ ಮಗನ ಮದುವೆಗೆ ಮೊದಲು ಸಾರ್ವಜನಿಕರಿಗಾಗಿ ಕಣ್ಣು ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದರು.

ಸಾಮಾಜಿಕ ಕಳಕಳಿ ತೋರಿಸುವ ರೀತಿಯಲ್ಲಿ ಕೆಲಸ ಸಾಗಬೇಕು. ಹಾಗಾಗಿ ಮಗನ ಮದುವೆಯನ್ನು ತಮ್ಮ ನೆಚ್ಚಿನ ನಟ ದಿ. ಪುನೀತ್ ರಾಜ್ ಕುಮಾರ್ ಅದರ್ಶದಂತೆ ಜನರಿಗೆ ದೃಷ್ಟಿ ಬೆಳಕು ನೀಡುವ ಪುಣ್ಯಕಾರ್ಯದ ಮೂಲಕ ನಡೆಸಬೇಕೆಂದು ಉದ್ಯಮಿ ಧನರಾಜ್ ತಾಳಂಪಳ್ಳಿ ಹಾಗೂ ಶೈಲಾಶ್ರೀ ದಂಪತಿ ನಿರ್ಧರಿಸಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿ ಕಣ್ಣು ತಪಾಸಣಾ ಶಿಬಿರ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜನ ಮೆಚ್ಚುಗೆ ಪಡೆದರು. ಸಾರ್ವಜನಿಕರಿಗಾಗಿ ನೇತ್ರ ಚಿಕಿತ್ಸೆಯ ಅರ್ಥಪೂರ್ಣ ಕಾರ್ಯಕ್ರಮ ಮೂಲಕ ಹಳ್ಳಿಜನರಿಗೆ ‘ದೃಷ್ಟಿ ಭಾಗ್ಯ’ಶಿಬಿರ ಮತ್ತು ವೈಭವದ ವಿವಾಹದತ್ತ ಎಲ್ಲರ ಚಿತ್ತ ಕೇಂದ್ರೀಕೃತವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು