12:58 AM Wednesday27 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಉಡುಪಿಯಲ್ಲಿ ಜಗತ್ ಪ್ರಸ್ಸಿದ್ಧ ಅಶ್ವಿನಿ ಗುರೂಜಿ ಅವರಿಂದ ಧ್ವನಿ ಮತ್ತು ದಿವ್ಯ ಚಿಕಿತ್ಸಾ ಮಂತ್ರ ಶಿಬಿರ

25/03/2023, 23:31

ಉಡುಪಿ(reporterkarnataka.com):
ಶಕ್ತಿಯ ರೂಪವಾಗಿ ಶಬ್ದ ಅಥವಾ ಧ್ವನಿಗೆ ಆಧುನಿಕ ಜಗತ್ತಿನಲ್ಲಿ ತಕ್ಕ ಮಾನ್ಯತೆ ದೊರೆತಿಲ್ಲ. ಬದಲಾಗಿ ನಮ್ಮ ಪೂರ್ವಜರು, ಈ ವಿಷಯವನ್ನು ಆಳವಾಗಿ ಪರಿಶೋಧಿಸಿ, ಜೀವನದ ವಿವಿಧ ಅಂಶಗಳಲ್ಲಿನ ಬದಲಾವಣೆಗಳ ಮೇಲೆ ಪರಿಣಾಮ ಬೀರಲು ಮಂತ್ರಗಳ ವಿಜ್ಞಾನವನ್ನು ನಮಗೆ ನೀಡಿದ್ದಾರೆ. ದೇಹವನ್ನು ಗುಣಪಡಿಸುವುದು, ವಯಸ್ಸಾಗುವುದನ್ನು ತಡೆಯುವುದು, ಸತ್ತವರನ್ನು ಪುನರುಜ್ಜೀವನಗೊಳಿಸುವುದು, ಭಾರವಾದ ವಸ್ತುಗಳನ್ನು ಎತ್ತುವುದು, ದೀಪಗಳನ್ನು ಬೆಳಗಿಸುವುದು, ಮಳೆ ಬರಿಸುವುದು, ಭೂಮಿಯಾಚೆಗಿನ ಶಕ್ತಿಗಳು ಮತ್ತು ಘಟಕಗಳೊಂದಿಗೆ ಸಂಪರ್ಕ ಸ್ಥಾಪಿಸುವುದು ಮೊದಲಾದ ವಿಚಾರಗಳನ್ನು ನಮ್ಮ ಪ್ರಾಚೀನರು ನಮಗೆ ಮಂತ್ರಗಳ ಮೂಲಕ ನೀಡಿದರು.

ಕ್ರಮೇಣ ಆಧುನಿಕ ವಿಜ್ಞಾನಿಗಳು ಧ್ವನಿಯ ಶಕ್ತಿಗೆ ಜಾಗೃತರಾಗುತ್ತಿದ್ದಾರೆ – ಅಕೌಸ್ಟಿಕ್ ಬೆಂಕಿ ನಂದಿಸುವ ಸಾಧನ (acoustic fire extinguishers) ಅಭಿವೃದ್ಧಿಪಡಿಸಲಾಗುತ್ತಿದೆ. ಧ್ವನಿ ತಂತ್ರಜ್ಞಾನ ಬಳಸಿ ವಸ್ತುಗಳನ್ನು ಎತ್ತವುದು, ವಿದ್ಯುತ್ ಉತ್ಪಾದಿಸಲು, ಬೆಳಕಿನ ಉತ್ಪಾದನೆ, ಕ್ಯಾನ್ಸರ್ ಗುಣಪಡಿಸಲು ಬಳಸಲಾಗುತ್ತಿದೆ. ಆದರೆ ನಮ್ಮ ವೈದಿಕ ಗುರುಗಳು ಇವೆಲ್ಲವನ್ನೂ ಸಾಕಷ್ಟು ಮೊದಲೇ ಪರಿಪೂರ್ಣವಾಗಿ ಕಂಡು ಹಿಡಿದಿದ್ದರು.
ಕಳೆದ ೩ ದಶಕಗಳಿಗೂ ಹೆಚ್ಚು ಕಾಲ ಮಂತ್ರಗಳ ವಿಜ್ಞಾನವನ್ನು ಪ್ರಯೋಗಿಸುತ್ತಿರುವ ಧ್ಯಾನ ಆಶ್ರಮದ ಅಶ್ವಿನಿ ಗುರೂಜಿ ಹೇಳುವ ಪ್ರಕಾರ, “ನಿಮಗೆ ತಿಳಿದಿದೆಯೇ, ಒಂದು ಶಬ್ದವನ್ನು ಸೃಷ್ಟಿಗೆ ಒಮ್ಮೆ ಬಿಡುಗಡೆ ಮಾಡಿದರೆ ಅದು ಶಾಶ್ವತವಾಗಿ ಉಳಿಯುತ್ತದೆ ಎನ್ನುವುದು…? ಹಲವು ಹಿಂದಿನ ವರ್ಷದ ದೇವರು ಹಾಗೂ ಋಷಿಗಳ ಧ್ವನಿಯನ್ನು ಪಡೆದುಕೊಳ್ಳಲು ಅವಕಾಶವಿದೆ ಮತ್ತು ಧ್ಯಾನದ ಅವಸ್ಥೆಗಳಲ್ಲಿ ವಿವಿಧ ರಿಚಸ್ ಮತ್ತು ಸ್ತೋತ್ರಗಳನ್ನು ಕೇಳಿದ ಸಾಕಷ್ಟು ಧ್ಯಾನ ಆಶ್ರಮ ಸಾಧಕರು ಈ ನಾಡಿನಲ್ಲಿದ್ದಾರೆ’’
ಅಶ್ವಿನಿ ಗುರೂಜಿಯವರ ಮಾರ್ಗದರ್ಶನದಲ್ಲಿ, ಈವರೆಗೂ ಸಾವಿರಾರು ಜನರು ಮಂತ್ರಗಳ ಶಕ್ತಿಯಿಂದ ಪ್ರಯೋಜನ ಪಡೆದಿದ್ದಾರೆ. ಜನರು ತಮ್ಮ ದೃಷ್ಟಿಕೋನದಲ್ಲಿ ಬದಲಾವಣೆ, ರೋಗದಿಂದ ಚೇತರಿಸಿಕೊಳ್ಳುವುದು ಇತ್ಯಾದಿಗಳ ವರದಿಗಳಿವೆ. ಈ ಕುರಿತು ಮಾತನಾಡಿರುವ ಅವರು, ದಿವ್ಯ ಚಿಕಿತ್ಸಾ ಮಂತ್ರವು ಏಳು ಆವರ್ತನಗಳ ಪ್ರಬಲ ಸಂಯೋಜನೆಯಾಗಿದ್ದು, ನಿಗದಿತ ರೀತಿಯಲ್ಲಿ ಅಭ್ಯಾಸ ಮಾಡಿದಾಗ, ದೇಹದ ವಿವಿಧ ಜೀವಕೋಶಗಳನ್ನು ಶುದ್ಧೀಕರಿಸುವ ಮತ್ತು ಗುಣಪಡಿಸುವ ಪರಿಣಾಮವನ್ನು ಹೊಂದಿರುತ್ತದೆ” ಎನ್ನುತ್ತಾರೆ.
“ಧ್ಯಾನ ಆಶ್ರಮದಲ್ಲಿ ನಾವು ಮಂತ್ರಗಳ ವಿಜ್ಞಾನವನ್ನು ಕಲಬೆರಕೆ ಅಥವಾ ಮಾರ್ಪಾಡು ಮಾಡದೆ ಮತ್ತು ಮುಖ್ಯವಾಗಿ ಅದನ್ನು ವಾಣಿಜ್ಯಕ್ಕೆ ಜೋಡಿಸದೆ ಅಭ್ಯಾಸ ಮಾಡಲು ಒತ್ತು ನೀಡುತ್ತೇವೆ. ಅಭ್ಯಾಸದ ಪರಿಣಾಮಕಾರಿತ್ವವು ಇಲ್ಲಿಂದ ಬರುತ್ತದೆ” ಎನ್ನುವುದು ಅವರ ಅಭಿಮತ.
ಧ್ಯಾನ್ ಫೌಂಡೇಶನ್ ಎರಡು ದಶಕಗಳಿಂದ ವಿಶ್ವದಾದ್ಯಂತ ಯಾಗಗಳನ್ನು ನಡೆಸುತ್ತಿದೆ ಮತ್ತು ಮಂತ್ರಗಳ ಶುದ್ಧತೆಯು ಯಜ್ಞ ಅಗ್ನಿಯಲ್ಲಿ ದೈವಿಕ ರೂಪಗಳ ಅಭಿವ್ಯಕ್ತಿಗೆ ಕಾರಣವಾಗಿದೆ. ಧ್ಯಾನ್ ಫೌಂಡೇಶನ್‌ನಲ್ಲಿ ಅಭ್ಯಾಸಕಾರರಿಂದ ಮಾಡುವ ಮಂತ್ರ ಪಠಣದ ರೀತಿಯನ್ನು ಮಾಜಿ ಆಯುಷ್ ಸಚಿವರಾಗಿದ್ದ ಶ್ರೀಪಾದ ನಾಯಕ್‌ರವರು ಹಿಂದೆoದೂ ಕೇಳಿರಲಿಲ್ಲ ಎಂದಿದ್ದಾರೆ.
ಜನವರಿ ೨೦೨೦ರಲ್ಲಿ, ಜಗತ್ತನ್ನು ಅಪ್ಪಳಿಸಲಿರುವ ವಿಪತ್ತನ್ನು ಮುಂಗಾಣುವ ಮೂಲಕ, ಅಶ್ವಿನಿ ಗುರುಜಿ ಅವರು ವಿವಿಧ ಪರಿಸರ ಅಪಾಯಗಳಿಂದ ಕವಚವನ್ನು ನಿರ್ಮಿಸಲು ಸಾಧಕರಿಗೆ ಸಹಾಯ ಮಾಡಲು ದಿವ್ಯ ಚಿಕಿತ್ಸಾ ಮಂತ್ರಗಳ ಪ್ರಾಥಮಿಕ ಅಭ್ಯಾಸವನ್ನು ಅನಾವರಣಗೊಳಿಸಿದ್ದರು.
ಅವರು ಈಗ ಏಪ್ರಿಲ್ ೧ರಿಂದ ೪ರವರೆಗೆ ಕರ್ನಾಟಕದ ಐತಿಹಾಸಿಕ ಪಟ್ಟಣವಾದ ಉಡುಪಿಯಲ್ಲಿ ೪ ದಿನಗಳ ವಿಶೇಷ ಕರ‍್ಯಕ್ರಮದಲ್ಲಿ ದಿವ್ಯ ಚಿಕಿತ್ಸಾದ ಸೂಕ್ಷ್ಮ ಅಂಶಗಳನ್ನು ಬಹಿರಂಗಪಡಿಸಲಿದ್ದಾರೆ. ಜತೆಯಲ್ಲಿ ಪ್ರಜ್ಞೆ ಮತ್ತು ಹಿಂದಿನ-ಜೀವನದ ಭೇಟಿಯನ್ನು ಹೆಚ್ಚಿಸುವ ಕೆಲವು ತಂತ್ರಗಳನ್ನು ಸಹ ಪರಿಚಯಿಸುವ ಉದ್ದೇಶ ಹೊಂದಿದ್ದಾರೆ.ಈ ಶಿಬಿರವು ಬೀಜಾಡಿ ತ್ರಿಮೂರ್ತಿ ಸರ್ಕಲ್ ಬಳಿಯ ಓಷನ್ ನೆಸ್ಟ್ ಬೀಚ್ ಹೋಂ ನಲ್ಲಿ ನಡಿಯಲಿದೆ
ಹೆಚ್ಚಿನ ಮಾಹಿತಿಗೆ ಧ್ಯಾನ ಫೌಂಡೇಷನ್ (www.dhyanfoundation.com ಅಥವ 9995868903 /೯೯೯೫೮೬೮೯೦೩)ನ್ನು ಸಂಪರ್ಕಿಸಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು