11:29 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಉಡುಪಿ ಪ್ರವಾಹ: ಜೀವದ ಹಂಗು ತೊರೆದು 75ಕ್ಕೂ ಹೆಚ್ಚು ಮಂದಿಯ ರಕ್ಷಿಸಿದ ಇನ್ತಿಯಾಜ್ ಕೆಮ್ಮಣ್ಣು

07/07/2023, 17:04

ಉಡುಪಿ(reporterkarnataka.com):ಇದು ಅಂತಿಂಥ ಸಾಹಸವಲ್ಲ, ಜೀವವನ್ನೇ ಪಣಕ್ಕಿಟ್ಟು ಇತರರ ಜೀವ ಉಳಿಸುವ ಸಾಹಸ. ಇದು ನಡೆದಿದ್ದು ಉಡುಪಿ ಜಿಲ್ಲೆಯಲ್ಲಿ. ಸಾಹಸಿ ಅಪದ್ಭಾಂಧವ ಬೇರೆ ಯಾರೂ ಅಲ್ಲ, ನಮ್ಮಕನ್ನಡಿಗರೇ ಆದ ಇನ್ತಿಯಾಜ್ ಕೆಮ್ಮಣ್ಣು ಅವರು.
ಕರಾವಳಿಯಲ್ಲಿ ಕಳೆದ 5 ದಿನಗಳಿಂದ ಅವ್ಯಾಹತವಾಗಿ ಸುರಿದ ಭಾರಿ ಮಳೆಗೆ ಉಡುಪಿ ಜಿಲ್ಲೆ ಭಾಗಶಃ ತತ್ತರಿಸಿ ಹೋಗಿತ್ತು. ನೂರಾರು ಮಂದಿ ಪ್ರವಾಹಕ್ಕೆ ಸಿಲುಕಿ ಬದುಕಿಗಾಗಿ ಹೋರಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಆಸರೆಯಾದ ಅಪದ್ಭಾಂಧವ ಇನ್ತಿಯಾಜ್. ಇವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು.
ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು ಉಡುಪಿಯ ಇಂದ್ರಾಣಿ ನದಿಯ ಪ್ರವಾಹವು ಉಡುಪಿಯ ನಗರವನ್ನು ಅವರಿಸಿತ್ತು. ಉಡುಪಿ ಕೊಡಂಕೂರಿನ 7ನೇ ವಾರ್ಡ್ ಕೌನ್ಸಿಲರ್ ಸಂಪಾವತಿಯ ಕರೆಯ ಮೇರೆಗೆ
ಇನ್ತಿಯಾಜ್ ಕೋಡಂಕೂರು ಬಳಿ ಪ್ರವಾಹದಲ್ಲಿ ಸಿಲುಕಿದ್ದ ಅನಾರೋಗ್ಯಪೀಡಿತ ಕೊಡಂಕೂರಿನ ತೋಮ ಪೂಜಾರಿ ಅವರನ್ನು ಕಯಾಕ್ ಬೋಟ್ ನಲ್ಲಿ ರಕ್ಷಿಸಿ ಜನಮನ್ನಣೆ ಗೆ ಪಾತ್ರರಾಗಿದ್ದಾರೆ. ಈ ನಡುವೆ ಪ್ರವಾಹಕ್ಕೆ ಸುಮಾರು 75 ಕ್ಕೂ ಹೆಚ್ಚು ಜನರನ್ನು ಸುರಕ್ಷತಾ ಸ್ಥಳಕ್ಕೆ ಕರೆದು ತಂದು ರಕ್ಷಿಸಿದ್ದಾರೆ.

ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಬಳಿಕ ಕರಾವಳಿ ಭಾಗದಲ್ಲಿ ಆರಂಭವಾದ ಮಳೆ ವಿರಾಮ ನೀಡದೆ ಏಕಾಏಕಿ ಸುರಿಯುತಿತ್ತು. ಬೆಳಗ್ಗೆ ಯಿಂದ ಕಯಾಕ್ ಮೂಲಕ ರಕ್ಷಣೆಗೆ ಸಾಹಸಕ್ಕೆ ಇಳಿದ ಇನ್ತಿಯಾಜ್ ಕೆಮ್ಮಣ್ಣು , ನಿಟ್ಟೂರು, ಕೊಡಂಕೂರು, ತಾರಕಟ್ಟೆ , ಕೊಡವೂರು,
ನಿಟ್ಟೂರು, ಕಾಂಚನ ಹೂಂಡಾಯಿ ಶೋ ರೂಂ ಹಿಂಭಾಗದಲ್ಲಿನ 75ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ.
2020ರಲ್ಲಿ ಉಡುಪಿ ಜಿಲ್ಲೆಯಲ್ಲಿ ಘಟಿಸಿದ ಸ್ವರ್ಣ ನದಿ, ಇಂದ್ರಾಣಿ ನದಿಗಳ ಪ್ರವಾಹದಲ್ಲಿ ಸುಮಾರು 250 ಕ್ಕೂ ಹೆಚ್ಚು ಜನರನ್ನು ಇನ್ತಿಯಾಜ್ ಕೆಮ್ಮಣ್ಣು, ಇಲ್ಯಾಸ್ , ಅಣ್ಣತಮ್ಮಂದಿರು ರಕ್ಷಿಸಿದ್ದರು. ಇವರ ಸಾಹಸವನ್ನು ಮನಗಂಡು ಅಂದಿನ ಜಿಲ್ಲಾಧಿಕಾರಿ ಜಿ ಜಗದೀಶ್ ಇನ್ತಿಯಾಜ್ ಕೆಮ್ಮಣ್ಣು ಅವರನ್ನು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನು ನೀಡಿ ಗೌರವಿಸಿದ್ದರು. ಇವರು ಕೆಮ್ಮಣ್ಣು ತೂಗು ಸೇತುವೆ ಬಳಿ ವಾಟರ್ ಅಡ್ವೆಂಚರ್‌ ಕೆಮ್ಮಣ್ಣು ಕಯಾಕಿಂಗ್ ಸಂಸ್ಥೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು