10:18 AM Wednesday15 - October 2025
ಬ್ರೇಕಿಂಗ್ ನ್ಯೂಸ್
Shivamogga | ತೀರ್ಥಹಳ್ಳಿ ಬಾಳೆಬೈಲು ಬಳಿ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು ಮಡಿಕೇರಿಯ ಚೇರಂಬಾಣೆಯಲ್ಲಿ ಅಸ್ಸಾಂ ಕಾರ್ಮಿಕರಿಗೆ ಸ್ಥಳೀಯನಿಂದ ಗೋವು ಮಾಂಸ ಮಾರಾಟ: ಆರೋಪಿ ಅರೆಸ್ಟ್ ವಿಜ್ಞಾನ ಓದಿಯೂ ಮೌಡ್ಯ ನಂಬುತ್ತೀರಿ ಅಂದರೆ ನೀವು ಓದಿದ್ದೇ ದಂಡ: ಸಿಎಂ ಸಿದ್ದರಾಮಯ್ಯ Chikkamagaluru | ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸ: ಬೆಟ್ಟವೇರಲಿರುವ ಭಕ್ತ ಸಾಗರ; ಜಿಲ್ಲಾಡಳಿತದಿಂದ… ಅಕ್ರಮ ಗೋವು ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿ: ಗಾಯಗೊಂಡ ಗೋವುಗಳನ್ನು ಬಿಟ್ಟು ಆರೋಪಿಗಳು… ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ನಡೆ ನಿಗೂಢ: ಸಚಿವ ಎಚ್. ಸಿ. ಮಹದೇವಪ್ಪ ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ

ಇತ್ತೀಚಿನ ಸುದ್ದಿ

Udupi | ಒಣ ಮೀನು ಮಾರಿ ಮನೆ ಕಟ್ಟಲು ಕೂಡಿಟ್ಟ ಹಣದಿಂದ ಫುಡ್ ಕಿಟ್ ವಿತರಣೆ: ಲಕ್ಷ್ಮೀ ಹೃದಯ ಶ್ರೀಮಂತಿಕೆಗೆ ಡಿಕೆಶಿ ಫಿದಾ

07/07/2021, 10:38

ಉಡುಪಿ(reporterkarnataka news):

ಮಲ್ಪೆಯ ತೀರಾ ಬಡ ಕುಟುಂಬದಿಂದ ಬಂದಿರುವ ಲಕ್ಷ್ಮೀ ಅವರು ಹಸಿ ಮೀನು ಖರೀದಿಸಿ, ಅದನ್ನು ಒಣಮೀನಾಗಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವವರು. ಜೀವನ ಸಂಜೆಯಲ್ಲಾದರೂ ಒಂದು ಸ್ವಂತ ಸೂರು ಹೊಂದಬೇಕೆಂದು ಒಣ ಮೀನು ಮಾರಾಟದಲ್ಲಿ 40 ಸಾವಿರ ರುಪಾಯಿ, ಉಳಿತಾಯ ಮಾಡಿಟ್ಟುಕೊಂಡಿದ್ದರು.

ಮೊದಲಿಂದಲೂ ಕಂಡವರ ಸಮಸ್ಯೆಗೆ ಕರಗುವ, ಮಮ್ಮುಲ ಮರುಗುವ ಗುಣ ರೂಢಿಸಿಕೊಂಡಿದ್ದ ಮಾತೃ ಹೃದಯದ ಲಕ್ಷ್ಮೀ ಅವರಿಗೆ ಕೊರೊನಾ ಸಂದರ್ಭದಲ್ಲಿ ತಮಗಿಂತಲೂ ಬಡವರು ಅನ್ನ, ಆಹಾರಕ್ಕಾಗಿ ಪರಿತಪಿಸುತ್ತಿರುವುದನ್ನು ನೋಡಿ, ಸಹಿಸಿಕೊಳ್ಳಲು ಆಗಲಿಲ್ಲ.

ತಡಮಾಡದೇ, ಮನೆ ಕಟ್ಟಲೆಂದು ತಾವು ಕೂಡಿಟ್ಟಿದ್ದ 40 ಸಾವಿರ ರುಪಾಯಿಯಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಖರೀದಿಸಿ ಅದನ್ನು ಬಡವರಿಗೆ ಉಚಿತವಾಗಿ ಹಂಚಿಬಿಟ್ಟರು. ಆ ಮೂಲಕ ಹೃದಯ ಶ್ರೀಮಂತಿಕೆ ಮೆರೆದರು. ಮತ್ತೊಬ್ಬರ ಕಷ್ಟಕ್ಕೆ ನೆರವಾಗಲು ಹಣವಂತಿಕೆಗೂ ಮಿಗಿಲಾಗಿ ಗುಣವಂತಿಕೆ ಬೇಕೆಂಬುದನ್ನು ಸಾರಿದರು.

ತದನಂತರ ಈ ವಿಷಯ ಮಾಧ್ಯಮಗಳ ಮೂಲಕ ತಿಳಿದು ಸ್ಥಳೀಯ ಕಾಂಗ್ರೆಸ್ ಮುಖಂಡರು, ಆಕೆ ಆಹಾರ ಕಿಟ್ ಗಳ ವಿತರಣೆಗೆ ವಿನಿಯೋಗಿಸಿದ್ದ 40 ಸಾವಿರ ರೂಪಾಯಿಯನ್ನು ಮರಳಿಸಿದರು.

ಮಲ್ಪೆ ಬಂದರಿಗೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ವಿಷಯ ತಿಳಿದ ಡಿ.ಕೆ. ಶಿವಕುಮಾರ್ ಅವರು ಲಕ್ಷ್ಮೀ ಅವರನ್ನು ಭೇಟಿ ಮಾಡಿ, ಆಕೆಯ ಮಾತೃ ವಾತ್ಸಲ್ಯವನ್ನು ಮನತುಂಬಿ ಕೊಂಡಾಡಿದರು. ನಿಮ್ಮಂತಹ ತಾಯಿ ಮಮತೆಯ ಸಂತತಿ ನೂರ್ಮಡಿಯಾಗಲಿ, ಮನುಕುಲಕ್ಕೆ ಮಾದರಿಯಾಗಲಿ ಎಂದು ಬಯಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು