11:58 AM Wednesday3 - December 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ

ಇತ್ತೀಚಿನ ಸುದ್ದಿ

ಉಡುಪಿ: ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಅವರ ‘ನಮ್ಮ ಉಡುಪಿ’ ಕೃತಿ ನಾಳೆ ಬಿಡುಗಡೆ

18/03/2023, 11:46

ಮಂಗಳೂರು(reporterkarnataka.com) : ವಿಜಯ ಕರ್ನಾಟಕ ಸ್ಥಾನೀಯ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಅವರ ‘ನಮ್ಮ ಉಡುಪಿ’ ಕೃತಿ ಮಾರ್ಚ್ 19ರಂದು ಬಿಡುಗಡೆಗೊಳ್ಳಲಿದೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ
ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕೃತಿಯಲ್ಲಿ ಉಡುಪಿ ಜಿಲ್ಲೆಯ ಭೌಗೋಳಿಕ ವಿವರಗಳು,ಭಾಷೆ, ಧಾರ್ಮಿಕ ಆಚರಣೆ, ಬ್ಯಾಂಕಿಂಗ್, ಉಡುಪಿ ಲೋಕಸಭೆ, ವಿಧಾನ ಸಭೆ ಸದಸ್ಯರ ವಿವರಗಳು, ಸ್ಥಳೀಯಾಡಳಿತ ಸಂಸ್ಥೆಗಳ ಮಾಹಿತಿ,ಪ್ರವಾಸೋದ್ಯಮ, ಪ್ರಮುಖ ತಾಣಗಳ ಚಿತ್ರಣ, ಪ್ರಾಥಮಿಕ, ಪ್ರೌಢ, ಕಾಲೇಜು, ವೃತ್ತಿಪರ ಕಾಲೇಜುಗಳು, ಪೊಲೀಸ್ ಠಾಣೆ, ಮಾಧ್ಯಮ ಸಂಸ್ಥೆಗಳು, ತುಳು ಸಿನಿಮಾಗಳ ಮಾಹಿತಿ, ರಾಜಕೀಯ ವಿವರಗಳು, ಆಡಳಿತ ಮಾಹಿತಿ, ಪ್ರವಾಸೋದ್ಯಮ, ಶಿಕ್ಷಣ ಸಂಸ್ಥೆಗಳು, ವೃತ್ತಿಪರ ಕಾಲೇಜುಗಳು, ಗ್ರಂಥಾಲಯಗಳು, ಪ್ರಮುಖ ದೇವಸ್ಥಾನ, ಚರ್ಚ್, ಮಸೀದಿಗಳು, ಹೊಟೇಲ್, ಲಾಡ್ಜ್ ಗಳು, ರೆಸಾರ್ಟ ಗಳು, ಕಲ್ಯಾಣ ಮಂಟಪಗಳು, ಪ್ರಮುಖ ಕೆರೆ, ಮದಗಗಳು, ಸಾರಿಗೆ ಸೌಲಭ್ಯ,ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಬ್ಲಾಡ್ ಬ್ಯಾಂಕ್‌ಗಳು ಹೀಗೆ ಸಮಗ್ರ ಮಾಹಿತಿಗಳನ್ನು ಈ ಕೃತಿ ಒಳಗೊಂಡಿದೆ. ಕೃತಿಗೆ ಮಂಗಳೂರು ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಮುನ್ನುಡಿ ಬರೆದಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಬೆನ್ನುಡಿ ಬರೆದಿದ್ದಾರೆ. ಕೃತಿಗೆ ಡಿಜಿಟಲ್ ಸ್ಪರ್ಶ ಕೂಡ ನೀಡಲಾಗಿದ್ದು, ಉಡುಪಿ ಜಿಲ್ಲೆಯ ಸಮಗ್ರ ಚಿತ್ರಣದ ದ್ರಶ್ಯವನ್ನು ಕೂಡ ಪುಸ್ತಕದಲ್ಲಿರುವ ಕ್ಯೂ ಆರ್ ಕೋಡ್ ಬಳಸಿಕೊಂಡು ವೀಕ್ಷಿಸಬಹುದಾಗಿದೆ.
ಆಕೃತಿ ಆಶಯ ಪಬ್ಲಿಕೇಶನ್‌ ಕೃತಿ ಪ್ರಕಟಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು