ಇತ್ತೀಚಿನ ಸುದ್ದಿ
ಉಡುಪಿಯ ಬಟ್ಟೆ ಮಳಿಗೆಯಲ್ಲಿ ಮಿಸ್ ಫೈಯರಿಂಗ್: ಗುಂಡೇಟು ತಗುಲಿ ಸಿಬ್ಬಂದಿ ಆಸ್ಪತ್ರೆಗೆ ದಾಖಲು
30/12/2023, 16:07
ಉಡುಪಿ(reporterkarnataka.com): ನಗರದ ಜಯಲಕ್ಷ್ಮೀ ಬಟ್ಟೆಮಳಿಗೆಯಲ್ಲಿ ಶನಿವಾರ ಪಿಸ್ತೂಲ್ ನಿಂದ ಅಚಾನಕ್ ಗುಂಡು ಹಾರಿ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ಶನಿವಾರ ಬಟ್ಟೆ ಮಳಿಗೆಯಲ್ಲಿ ಅನಾಥ ಗನ್ ಪತ್ತೆಯಾಗಿದ್ದು, ಮಳಿಗೆ ಸಿಬ್ಬಂದಿಗಳು ಕುತೂಹಲದಿಂದ ಗನ್ ಪರಿಶೀಲಿಸುವಾಗ ಮಿಸ್ ಫೈರ್ ಆಗಿದೆ. ಈ ಸಂದರ್ಭಗಳಲ್ಲಿ ಮಳಿಗೆ ಸಿಬ್ಬಂದಿಯೋರ್ವನಿಗೆ ಗುಂಡು ತಗಲಿ ಗಾಯಗೊಂಡಿದ್ದಾರೆ.
ಗಾಯಗೊಂಡ ಸಿಬ್ಬಂದಿಯನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿದ್ದು,
ಗನ್ ವಶಪಡಿಸಿಕೊಂಡಿದ್ದಾರೆ.ತನಿಖೆ ನಡೆಸುತ್ತಿದ್ದಾರೆ.