ಇತ್ತೀಚಿನ ಸುದ್ದಿ
ಉಡುಪಿ ಜಿಲ್ಲೆಯ ವಿವಿಧ ದೇವಸ್ಥಾನಗಳ ಪ್ರವಾಸ ಪ್ಯಾಕೇಜ್ ಆರಂಭ: ವಿವರಗಳಿಗಾಗಿ ಮುಂದಕ್ಕೆ ಓದಿ
02/10/2022, 11:34
ಮಂಗಳೂರು(reporterkarnataka.com): ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರಿನಿಂದ ಉಡುಪಿ ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಒಂದು ದಿನದ ಪ್ಯಾಕೇಜ್ ಪ್ರವಾಸ ದಸರಾ ದರ್ಶನ ಅ.1ರಂದು ಆರಂಭಗೊಂಡಿದ್ದು, 4ರವರೆಗೆ ನಡೆಯಲಿದೆ.
ಪ್ರವಾಸವು ಮಂಗಳೂರು ಬಸ್ಸು ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಹೊರಟು ಉಡುಪಿ-ಕುಂದಾಪುರ ಮಾರ್ಗವಾಗಿ ಮಾರಣಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ದರ್ಶನವನ್ನು ಮುಗಿಸಿ ಮಂಗಳೂರು ಬಸ್ಸು ನಿಲ್ದಾಣಕ್ಕೆ 6.30ಕ್ಕೆ ತಲುಪಲಿದೆ.
ಪ್ರತಿ ಪ್ರಯಾಣಿಕರಿಗೆ ಪ್ರಯಾಣ ದರ (ಊಟ, ಉಪಹಾರ ಹೊರತು ಪಡಿಸಿ) ವಯಸ್ಕರಿಗೆ 450ರೂ. ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ 400ರೂ. ನಿಗದಿಪಡಿಸಲಾಗಿದೆ ಎಂದು ಕ.ರಾ.ರ.ಸಾ.ಸಂ ನ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.