4:47 PM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಕಪಿಲೆಯಲ್ಲಿ ಮುಳುಗಿದ ಇಬ್ಬರು ವ್ಯಕ್ತಿಗಳು: ಎಲ್ಲರಲ್ಲೂ ಭಯ, ಆತಂಕ; ದೌಡಾಯಿಸಿದ ಎನ್ ಡಿಆರ್ ಎಫ್; ಮತ್ತೆ ಗೊತ್ತಾಯ್ತು ಇದು ಅಣಕು ಪ್ರದರ್ಶನ!

28/02/2025, 15:04

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿಯಲ್ಲಿ ಭಾರೀ ಅನಾಹುತವೊಂದು ಜರುಗಿ ನೋಡ ನೋಡುತ್ತಿದ್ದಂತೆ ನದಿ ನೀರಿನಲ್ಲಿ ಮುಳುಗಿ ವ್ಯಕ್ತಿಗಳಿಬ್ಬರು ಸಾವಿನ ದವಡೆಗೆ ಸಿಲುಕಿದ್ದರು. ಅಯ್ಯೋ ಏನಾಯ್ತು ಏನು ? ಯಾರಾದ್ರೂ ಕಾಪಾಡಿ ಅಂತ ಸ್ಥಳದಲ್ಲಿದ್ದ ಕುಟುಂಬಸ್ಥರು ಮತ್ತು ನಾಗರೀಕರು ದಿಕ್ಕು ತೋಚದಂತಾಗಿ ದಿಕ್ರಾಂತರಾಗಿ ನೋಡುತ್ತಾ ನಿಂತಿದ್ದರು
ಆಮೇಲೆ ಏನಾಯ್ತು ? ಆ ವ್ಯಕ್ತಿಗಳು ಸತ್ತರಾ ಅಥವ ಬದುಕಿದರಾ ? ಮುಂದೆ ಆಗಿದ್ದೇನು ಈ ಸ್ಟೋರಿ ನೋಡಿ ….
ಯೆಸ್..‌ನಂಜನಗೂಡಿನ ಕಪಿಲಾ ನದಿ ತೀರದ ಸ್ನಾನ ಘಟ್ಟದ ಬಳಿ ನಡೆದ ಈ ಘಟನೆ ಹಲವು ನಿಮಿಷಗಳ ಕಾಲ ನೋಡುಗರನ್ನು ದಿಗ್ಬ್ರಾಂತಗೊಳಿಸಿತು. ವ್ಯಕ್ತಿಗಳಿಬ್ಬರು ಈಜು ಬಾರದೆ ನದಿಯಲ್ಲಿ ಮುಳುಗುತ್ತಿದ್ದರು.
ನೀರಿನಲ್ಲಿ ಮುಳುಗಿದ ಈ ಇಬ್ಬರು ವ್ಯಕ್ತಿಗಳು ಬದುಕೋದು ಡೌಟ್ ಎನ್ನುತ್ತಿದ್ದಂತೆ ಆಪತ್ಬಾಂಧವರಂತೆ ಬಂದವರು ಎನ್ ಡಿ ಆರ್ ಎಫ್ ತಂಡ ಹಾಗು ನಂಜನಗೂಡು ಅಗ್ನಿ ಶಾಮಕ ದಳ ಈ ಎರಡು ತಂಡದ ಸಿಬ್ಬಂದಿಗಳು ಕಪಿಲಾ ನದಿ ನೀರಿಗಿಳಿದು
ಕಾರ್ಯಾಚರಣೆ ನಡೆಸಿ ಹರಸಾಹಸ ಪಟ್ಟು ಮುಳುಗುತ್ತಿದ್ದವರ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ.
ಆದರೆ ಕೊನೆ ಕ್ಷಣದವರೆಗೂ ಈ ಎಲ್ಲವೂ ರಿಯಲ್ ಅಂತಾನೆ ಬಹುತೇಕ ಜನ ಭಾವಿಸಿದ್ದರು. ಆದರೆ ಆಮೇಲೆ ಗೊತ್ತಾಗಿದ್ದೇ ಬೇರೆ ಇದೊಂದು ಅಣುಕು ಪ್ರದರ್ಶನ ಅಂತ.
ನಂಜನಗೂಡು ತಾಲೂಕು ಆಡಳಿತ ಹಾಗೂ ಮೈಸೂರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಈ ರೀತಿಯ ಅಣುಕು ಪ್ರದರ್ಶನ ಆಯೋಜಿಸಿ ನದಿ ತೀರದಲ್ಲಿ ಜನ ಜಾಗೃತಿ ಮೂಡಿಸಲಾಯ್ತು.
ಎನ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿಗಳು ಸಾವನ್ನು ಲೆಕ್ಕಿಸದೆ ನೀರಿನಲ್ಲಿ ಮುಳುಗಿ ಪ್ರಾಣ ರಕ್ಷಿಸುವ ಸಾಹಸಮಯ ಪ್ರದರ್ಶನ ನೀಡಿ ನೋಡುಗರ ಮೆಚ್ಚುಗೆಗೆ ಪಾತ್ರರಾದರು.
ಮುಳುಗುತ್ತಿದ್ದವರನ್ನು ಹೇಗೆ ರಕ್ಷಣೆ ಮಾಡಬೇಕು ? ಅವರನ್ನು ನೀರಿನಿಂದ ಮೇಲೆ ತಂದ ನಂತರ ಯಾವ ರೀತಿ ಪ್ರಾಣ ಉಳಿಸಬೇಕು ಅನ್ನೋದುನ್ನ ಪ್ರಾತ್ಯಕ್ಷತೆ ಮೂಲಕ ತೋರಿಸಿ, ನೆರೆದಿದ್ದ ಜನರಿಗೆ ಅರಿವು ಮೂಡಿಸಿದರು.
ಇಷ್ಟೇ ಅಲ್ಲದೆ ನೀರಿನಲ್ಲಿ ಮುಳುಗದಂತೆ ತಡೆಯಲು ಯಾವ ಮುಂಜಾಗ್ರತಾ ಕ್ರಮ ಕೈ ಗೊಳ್ಳಬೇಕು ? ಯಾವ ಯಾವ ವಸ್ತುಗಳಿಂದ ಪಾರಾಗಬಹುದು ಅನ್ನೋದುನ್ನ ಖುದ್ದು ತಾವೇ ನೀರಿಗಿಳಿದು ಕೆಲವು ಸಾಹಸಮಯ ಪ್ರದರ್ಶನ ನೀಡಿ ತೋರಿಸಿಕೊಟ್ಟರು.
ತಹಸೀಲ್ದಾರ್ ಶಿವಕುಮಾರ್ ಕಾಸನೂರ್ ಸೇರಿದಂತೆ ತಾಲೂಕು ಆಡಳಿತದ ಇತರೇ ಸಿಬ್ಬಂದಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ. ಎನ್ ಡಿ ಆರ್ ಎಫ್ ರಕ್ಷಣಾ ಪಡೆಯ ಕಾರ್ಯಾಚರಣೆಯನ್ನು ನೋಡಿ ಪ್ರಸಂಶೆ ವ್ಯಕ್ತಪಡಿಸಿದರು.
ಕಾರ್ಯಾಚರಣೆ ಮುಗಿದ ಬಳಿಕ ತಹಸೀಲ್ದಾರ್ ಶಿವಕುಮಾರ್, ಎನ್ ಡಿ ಆರ್ ಎಫ್ ಮುಖ್ಯಸ್ಥ ಅಖಿಲೇಶ್ , ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿ ಚೆಲುವರಾಜ್ ಮಾತನಾಡಿ, ಅಣುಕು ಕಾರ್ಯಾಚರಣೆ ಉದ್ದೇಶ ಮತ್ತು ಉಪಯೋಗಗಳ ಬಗ್ಗೆ ವಿವರಿಸಿದರು.


ಒಟ್ಟಾರೆ, ಕಪಿಲಾ ನದಿಯಲ್ಲಿ ನಡೆದ ಈ ಅಣುಕು ಪ್ರದರ್ಶನ ನೋಡುಗರನ್ನು ಕೆಲ ಕಾಲ ದಿಗ್ಬ್ರಾಂತಗೊಳಿಸಿದರೂ, ಹ್ಯಾಪಿ ಎಂಡಿಂಗ್ ಮೂಲಕ ಜನ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯ್ತು.
ಕಾರ್ಯಕ್ರಮದಲ್ಲಿ ಎನ್ ಡಿ ಆರ್ ಎಫ್ ನ ಇನ್ಸ್ಪೆಕ್ಟರ್ ಶಿವಕುಮಾರ್ ,ಎಎಸ್ಐ ಸುಭಾಷ್ ಶಿಂದೆ ,ದೇವರಾಜು, ರಾಘವೇಂದ್ರ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಸುಧೀರ್ ,ಅಗ್ನಿಶಾಮಕ ದಳದ ಥಾಮಸ್ ,ಮಹದೇವ್ ಸೇರಿದಂತೆ 30ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು