ಇತ್ತೀಚಿನ ಸುದ್ದಿ
ಕುಖ್ಯಾತ ಚಡ್ಡಿ ಗ್ಯಾಂಗಿನ ಇಬ್ಬರು ಸದಸ್ಯರ ಬಂಧನ: ಚಿನ್ನಾಭರಣ, ನಗದು ಸಹಿತ 32 ಲಕ್ಷ ಮೌಲ್ಯದ ಸೊತ್ತು ವಶ
25/10/2025, 22:07
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕುಖ್ಯಾತ ಚಡ್ಡಿ ಗ್ಯಾಂಗಿನ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಕದ್ದ 32 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರ ಮೂಲದ ಪಪ್ಪು ಟಿಪ್ಪು ಪವಾರ್ ಹಾಗೂ ಮಂಗೇಶ್ ಅಂಕುಶ್ ಶಿಂಧೆ ಬಂಧಿತ ಆರೋಪಿಗಳು.




ಚಿಕ್ಕಮಗಳೂರು ನಗರ ಪೊಲೀಸರು ಈ ಕಾರ್ಯಚರಣೆ ನಡೆಸಿ ಚಡ್ಡಿ ಗ್ಯಾಂಗಿನ 17 ಪ್ರಕರಣಗಳನ್ನ ಭೇದಿಸಿದ್ದಾರೆ.
ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ಚಡ್ಡಿ ಗ್ಯಾಂಗ್ ತಂಡ ಕಳ್ಳತನ ಮಾಡಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಡ್ಡಿ ಗ್ಯಾಂಗ್ ಕಳ್ಳತನ ಮಾಡುತ್ತಿತ್ತು.
ಆರೋಪಿಗಳಿಂದ 495 ಗ್ರಾಂ ಚಿನ್ನ, 1010 ಗ್ರಾಂ ಬೆಳ್ಳಿ, 75 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
ನಗರದ ಪೊಲೀಸ್ ಕ್ವಾಟ್ರಸ್ಸ್ ಕಳ್ಳತನ ಪ್ರಕರಣದ ತನಿಖೆಗಾಗಿ
ಎಸ್ಪಿ ವಿಕ್ರಂ ಅವರು ವಿಶೇಷ ತಂಡ ರಚಿಸಿದ್ದರು. ಎಎಸ್ಪಿ ಜಯಕುಮಾರ್, ಡಿವೈಎಸ್ಪಿ ಶೈಲೇಂದ್ರ, ನಗರ ರಾಣೆ ಪಿಐ ಅಭಯ್ ಪ್ರಕಾಶ್ ನೇತೃತ್ವದ ತಂಡ ಕಾರ್ಯನಿರ್ವಹಿಸಿತ್ತು.
ಎರಡೂವರೆ ತಿಂಗಳಲ್ಲಿ 400ಕ್ಕೂ ಹೆಚ್ಚು ಸಿಸಿಟಿವಿ ಫುಟೇಜ್ ಪೊಲೀಸರು ಕಲೆಕ್ಟ್ ಮಾಡಿದ್ದರು.












