ಇತ್ತೀಚಿನ ಸುದ್ದಿ
Tumakuru | ಲೋಕಸಭೆ, ವಿಧಾನಸಭೆ ಚುನಾವಣೆ: ಒಬಿಸಿಗೂ ಮೀಸಲಾತಿ ಜಾರಿಗೆ ಹಕ್ಕೊತ್ತಾಯ
26/10/2025, 20:10
ತುಮಕೂರು(reporterkarnataka.com): ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲೂ ಒಬಿಸಿಗೂ ಮೀಸಲಾತಿ ಜಾರಿಯಾಗಲಿ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ.
ತುಮಕೂರಿನ ಮಧುಗಿರಿಯಲ್ಲಿ ರಾಜಣ್ಣ ಹೊಸ ದಾಳ ಉರುಳಿಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಷಾ ಕ್ಷೇತ್ರ ಮರು ವಿಂಗಡಣೆ ವೇಳೆ ಮಹಿಳೆಯರಿಗೆ ಮೀಸಲಾತಿ ನೀಡಬೇಕು. ಈ ಬಾರಿ ಮಹಿಳಾ ಮೀಸಲಾತಿ ಜೊತೆಗೆ ಒಬಿಸಿಯವರಿಗೂ ಮೀಸಲಾತಿ ತರಬೇಕು. ತಳ ಸಮುದಾಯಗಳಿಗೆ ಸಮರ್ಪಕವಾಗಿ ರಾಜಕೀಯ ಅಧಿಕಾರ ಹಂಚಿಕೆಯಾಗುತ್ತಿಲ್ಲ.
ಸರ್ವರಿಗೂ ಸಮಪಾಲು ಸಮಬಾಳು ಎನ್ನುವ ರಾಜಕೀಯ ಪಕ್ಷಗಳು ಯಾರಿಗೆ ನೀಡಿದೆ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಕಡೆ ಗಮನಹರಿಸಲು ತಳ ಸಮುದಾಯಗಳಿಗೆ ರಾಜಕೀಯ ಅಧಿಕಾರ ದೊರೆಯುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಒಬಿಸಿಗಳಿಗೆ ಮೀಸಲಾತಿ ಜಾರಿಯಿಂದ ಸಮುದಾಯಕ್ಕೆ ಒಳಿತಾಗುತ್ತದೆ.
ಅಮೇರಿಕಾದಲ್ಲಿ ಅಧ್ಯಕ್ಷ ಸ್ಥಾನವನ್ನು ಎರಡು ಅವಧಿಗೆ ಮಾತ್ರ ಮೀಸಲಿರಿಸಿದೆ. ಭಾರತದಲ್ಲೂ ರೀತಿ ಜಾರಿ ಮಾಡಿದ್ರೆ ಯುವಜನತೆಗೆ ರಾಜಕೀಯ ಅಧಿಕಾರ ಸಿಗಲಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ರಾಜಕೀಯೇತರ ಗಣ್ಯರ ಜೊತೆ ಸಂವಾದ ನಡೆಸಲಾಗುವುದು ಎಂದರು.












