7:30 AM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ತುಳುವಿಗಾಗಿ ಮತ್ತೊಮ್ಮೆ ಕೈ ಎತ್ತುವ ಸರದಿ: ಸೆ. 5ರಂದು ‘ಟ್ವೀಟ್ ತುಳುನಾಡು’; ಕವಿ ಮಂದಾರ ಕೇಶವ ಭಟ್ ಮತ್ತೆ ನೆನಪಿಗೆ

04/09/2021, 19:18

ಮಂಗಳೂರು(reporterkarnataka.com): 

ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಕುರಿತು ತುಳುವರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಾ ಹೋರಾಟ ಮಾಡಿಕೊಂಡು ಬಂದರೂ ಇನ್ನೂ ಅದು ಕಾರ್ಯಗತಗೊಂಡಿಲ್ಲ. ಹಲವು ಸರಕಾರಗಳು ಬದಲಾದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮನೋಭಾವ ಬದಲಾಗಿಲ್ಲ. ಈ ನಿಟ್ಟಿನಲ್ಲಿ ನಮ್ಮನ್ನಾಳುವವರನ್ನು ಬಡಿದೆಬ್ಬಿಸಲು ಮತ್ತೆ ತುಳುವಿಗಾಗಿ ಟ್ವೀಟ್ ಅಭಿಯಾನ ನಡೆಯಲಿದೆ. ಸೆಪ್ಟೆಂಬರ್ 5 ರಂದು ಟ್ವೀಟ್ ಅಭಿಯಾನ ಸಾಕಾರಗೊಳ್ಳಲಿದೆ.

ತುಳುವರ ಸ್ವಾಭಿಮಾನದ ದೃಷ್ಟಿಯಿಂದ ಸೆ.5ರಂದು 

ನಡೆಯುವ#TuluOfficialinKA_KL ಟ್ವೀಟ್ ಅಭಿಯಾನವು ಬಹಳಷ್ಟು ಮಹತ್ವ ಪಡೆದಿದೆ. ಈ ಹಿಂದೆ ಜೂನ್ 14ರಂದು ನಡೆದ

ಟ್ವೀಟ್ ಅಭಿಯಾನದಲ್ಲಿ 4 ಲಕ್ಷ ಮಂದಿ ಪಾಲ್ಗೊಂಡು ರಾಷ್ಟ ಮಟ್ಟದಲ್ಲಿ ಹೊಸ ದಾಖಲೆಯ ಬರೆದಿದ್ದರು. ಇಷ್ಟೇ ಅಲ್ಲದೆ ಇದು ದೇಶವ್ಯಾಪ್ತಿಯಲ್ಲಿ ಚರ್ಚೆಗೆ ಗ್ರಾಸವಾಯಿತು. ರಾಜಕೀಯ ವಲಯದಲ್ಲಿಯೂ ಬಿರುಗಾಳಿ ಎನ್ನಿಸಿತು.

ತುಳುವಿಗೆ 60 ವರ್ಷಗಳ ಕಾಲ ಯಾವುದೇ ಸ್ಥಾನಮಾನ ಕೊಡದೇ ಇರುವ ವಿರುದ್ಧ ಜನಾಕ್ರೋಶ ಟ್ವೀಟ್ ಮೂಲಕ ಹೊರಹೊಮ್ಮಿತ್ತು. ವಿಶೇಷವೆಂದರೆ ಬಹಳಷ್ಟು ರಾಜಕೀಯ ಪಕ್ಷಗಳ ನಾಯಕರು ಅಭಿಯಾನದಲ್ಲಿ ಕೈಜೋಡಿಸಿ ತುಳುವಿಗಾಗಿ ಕೈ ಎತ್ತಿದ್ದರು. ಆದರೆ ಅಷ್ಟಕ್ಕೆ ತುಳುವರ ಬೇಡಿಕೆ ಈಡೇರುವುದಿಲ್ಲ.

ಕಾಸರಗೋಡಿನ ನೀಲೇಶ್ವರದಿಂದ ಆರಂಭವಾಗಿ ಬಾರಕೂರು ವರೆಗೆ ಹಬ್ಬಿರುವ ಈ ವಿಶಾಲವಾದ ತುಳುನಾಡಿನಲ್ಲಿ ತುಳುವರಿಗೆ ಇದೊಂದು ಬರೇ ಭಾಷೆಯಲ್ಲ. ಬದಲಿಗೆ ಇದೊಂದು ಜೀವನ ವಿಧಾನ, ಸಂಸ್ಕೃತಿ ಆಗಿದೆ. ತುಳುವಿನಲ್ಲಿ ಸಾಕಷ್ಟು ಸಾಹಿತ್ಯ ರಚನೆಯಾಗಿದೆ. ಕವಿತೆ, ಕಥೆ, ಮಹಾಕಾವ್ಯ, ಕಾದಂಬರಿ, ನಾಟಕ, ರೂಪಕ, ಯಕ್ಷಗಾನ ರಚನೆಯಾಗಿದೆ. ತುಳು ಸಿನಿಮಾಗಳು ಬಂದಿವೆ. ತುಳುವಿನ ವಾಲ್ಮೀಕಿ ಎಂದೇ ಪ್ರಸಿದ್ಧರಾದ ಮಂದಾರ ಕೇಶವ ಭಟ್ ಅವರು ತುಳುವಿನಲ್ಲಿ ಮಹಾಕಾವ್ಯವನ್ನೇ ಸೃಷ್ಟಿಸಿದ್ದಾರೆ. ಮಂದಾರ ರಾಮಾಯಣ ಬರೆದಿದ್ದಾರೆ. ಇದರ ಜತೆಗೆ ತುಳು ಭಾಷೆಗಾಗಿ ಕೇಶವ ಭಟ್ ಅವರು ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ತುಳು ಭಾಷೆಯ ನಡೆದಾಡುವ ವಿಶ್ವವಿದ್ಯಾನಿಲಯವೇ ಅವರಾಗಿದ್ದರು. ಆದರೆ ಅವರು ಹುಟ್ಟಿದ ಮನೆ ಮಂಗಳೂರಿನ ಪಚ್ಚನಾಡಿ ಸಮೀಪದ ಮಂದಾರದಲ್ಲಿ ತ್ಯಾಜ್ಯ ಸುನಾಮಿಗೆ ಸಿಲುಕಿ ಶಿಥಿಲಗೊಂಡಿದೆ. ಅದನ್ನು ಉಳಿಸುವ ಪ್ರಯತ್ನ ನಡೆಯಬೇಕಾಗಿದೆ.ಅವರು ಬದುಕಿರುತ್ತಿದ್ದರೆ ಈ ಕಾಲಘಟ್ಟದಲ್ಲಿ ತುಳುಭಾಷೆಯ ಉಳಿವಿನ ಹೋರಾಟದಲ್ಲಿ ಮುಂಚೋಣಿಯಲ್ಲಿರುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಇದೀಗ ಸೆ.  5ರಂದು ಟ್ವೀಟ್ ಅಭಿಯಾನ ನಡೆಯಲಿದೆ. ಸೆಪ್ಟೆಂಬರ್ 13 ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಇದರಿಂದ ಸೆ. 5ರ ಟ್ವೀಟ್ ಅಭಿಯಾನ ಬಹಳಷ್ಟು ಮಹತ್ವ ಪಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು