ಇತ್ತೀಚಿನ ಸುದ್ದಿ
ನಾಳೆ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬ
19/03/2026, 21:01
ಮಂಗಳೂರು(reporterkarnata.com): ಮುಸ್ಲಿಮರ ಪವಿತ್ರ ರಂಜಾನ್ ಹಬ್ಬ ನಾಳೆ ಶುಕ್ರವಾರ ಆಚರಿಸುವಂತೆ ಕೇರಳದ ಕ್ಯಾಲಿಕಟ್ಟಿನ ಸೈಯದ್ ಮೊಹಮ್ಮದ್ ಜೆಫ್ರಿ ಮುತ್ತುಕೊಯ ತಂಗಳ್ ಇಂದು ಸಂಜೆ ಘೋಷಣೆ ಮಾಡಿದ್ದಾರೆ.
ಇಂದು ಸಂಜೆ ಕೇರಳದ ಕ್ಯಾಲಿಕಟ್ ಜಿಲ್ಲೆಯ ಪರ್ಪನಾ ಅಂಗಡಿಯಲ್ಲಿ ಚಂದ್ರದರ್ಶನ ಆಗಿರುವುದರಿಂದ ನಾಳೆ ಈದುಲ್ ಫಿತರ್ ಆಚರಿಸಲಾಗುವುದು. ರಂಜಾನ್ ಮಾಸದ ಉಪವಾಸ ಇಂದಿಗೆ ಅಂತ್ಯವಾಗಿದ್ದು ನಾಳೆ ಹಬ್ಬ ಆಚರಣೆ ನಡೆಯಲಿದೆ. ಕೇರಳ, ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿರುವ ಮುಸ್ಲಿಂ ಬಾಂಧವರು ನಾಳೆ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಲಿದ್ದಾರೆ.













