10:15 PM Saturday25 - October 2025
ಬ್ರೇಕಿಂಗ್ ನ್ಯೂಸ್
ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ Bangaluru | ಪಿಡಿಪಿಎಸ್‌ಯಡಿ ಈರುಳ್ಳಿ ಖರೀದಿ ಪ್ರಯತ್ನ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ… Bangaluru | ರಾಜ್ಯ ಸರಕಾರಕ್ಕೆ ಕೆಎಸ್ ಡಿಎಲ್ ರಿಂದ 135 ಕೋಟಿ ಡಿವಿಡೆಂಡ್… ಬೆಂಗಳೂರು ಲಾಡ್ಜ್‌ನಲ್ಲಿ ಯುವತಿ ಜತೆ ತಂಗಿದ್ದ ಯುವಕನ ಸಾವಿಗೆ ಕಿಡ್ನಿ ವೈಫಲ್ಯ ಕಾರಣ:… ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಕಡೂರು ಸಮೀಪದ ಹಡಗಲು ಗ್ರಾಮ ಅಕ್ಷರಶಃ ಜಲಾವೃತ ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರಿಂದ ಆಟೋ ಚಾಲಕನ ಮೇಲೆ ಹಲ್ಲೆ: ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ… ಕೊಡ್ಲಿಪೇಟೆಯಲ್ಲಿ ಉದ್ಯಮಿ ಮೇಲೆ ಲಾರಿ ಹರಿಸಿ ಕೊಲೆ ಯತ್ನ: ವಾಹನ ಬಿಟ್ಟು ಚಾಲಕ… ಪುತ್ತೂರು: ಅಕ್ರಮ ಜಾನುವಾರು ಸಾಗಾಟ; ಆರೋಪಿ ಕಾಲಿಗೆ ಪೊಲೀಸರು ಗುಂಡೇಟು; ಓರ್ವನ ಸೆರೆ,… ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 95 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ… ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ

ಇತ್ತೀಚಿನ ಸುದ್ದಿ

ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ

25/10/2025, 21:53

ಬೆಂಗಳೂರು(reporterkarnataka.com): ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಹಿರಿಯ ಪತ್ರಕರ್ತ ಟಿ.ಜೆ.ಎಸ್.‌ ಜಾರ್ಜ್‌ ಅವರ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮ ಸಂಸ್ಥೆಗಳ ಸಂಪಾದಕರಿಗೆ ದತ್ತಿ ಪ್ರಶಸ್ತಿ ಸ್ಥಾಪಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಶಿವಕುಮಾರ್‌ ಅವರು ಘೋಷಿಸಿದರು.
ಅವರು ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ತಾವು ಈಗಾಗಲೇ ಸಾಮಾಜಿಕ ನ್ಯಾಯದ ಕುರಿತು ಬರೆಯುವ ಅಂಕಣಕಾರರಿಗೆ “ಮೂಕನಾಯಕ ಡಾ. ಬಿ.ಆರ್.‌ ಅಂಬೇಡ್ಕರ್‌ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಟಿ.ಜೆ.ಎಸ್.‌ ಜಾರ್ಜ್‌ ಅವರು ನಿಷ್ಪಕ್ಷಪಾತಿ ಪತ್ರಕರ್ತರಾಗಿದ್ದರು. ಅವರು ಸ್ವತಃ ಪತ್ರಕರ್ತರ ವರದಿಗಳನ್ನು ತಿದ್ದಿ , ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು. ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಗುರುತಿಸುವ ಸಲುವಾಗಿ 1.5 ಲಕ್ಷ ರೂ.ಗಳ ದತ್ತಿನಿಧಿ ಸ್ಥಾಪಿಸುವುದಾಗಿ ತಿಳಿಸಿದರು.
ತಾವು ಇನ್ನೂ ಪತ್ರಿಕೋದ್ಯಮದಿಂದ ಹೊರ ಬಂದಿಲ್ಲ. ಸದನದಲ್ಲಿಯೂ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಕುರಿತು ದನಿ ಎತ್ತುವುದಾಗಿ ಅವರು ತಿಳಿಸಿದರು.
ತಮ್ಮ ಪತ್ರಕರ್ತ ವೃತ್ತಿ ಜೀವನ ಹಾಗೂ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಣೆಯ ಸಂದರ್ಭಗಳನ್ನು ಮೆಲುಕು ಹಾಕಿದ ಶಿವಕುಮಾರ್‌ ಅವರು ಅಕಾಡೆಮಿಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರು, ಶಿವಕುಮಾರ್‌ ಅವರು ಮೂರು ದಶಕಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದು, ತಮ್ಮ ನಿಷ್ಠುರ ವರದಿಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಇಂದು ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿರುವುದು ಪತ್ರಕರ್ತರಿಗೆಲ್ಲ ಹೆಮ್ಮೆಯ ವಿಷಯ. ಅವರು ಅಕಾಡೆಮಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಅವರ ಬೆಂಬಲ ಪತ್ರಕರ್ತರಿಗೆ ಸದಾ ಇರುವುದೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಸದಸ್ಯರಾದ ಕೆ. ನಿಂಗಜ್ಜ, ಕೆ.ವೆಂಕಟೇಶ್‌, ಶಿವಾನಂದ ತಗಡೂರು, ಅಬ್ಬಾಸ್‌ ಮುಲ್ಲಾ ಮೊದಲಾದವರು ಶಿವಕುಮಾರ್‌ ಅವರ ಕುರಿತು ಮಾತನಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು