12:09 PM Tuesday16 - December 2025
ಬ್ರೇಕಿಂಗ್ ನ್ಯೂಸ್
ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್

ಇತ್ತೀಚಿನ ಸುದ್ದಿ

ತುಳುವರ ಜನಪದ ಕ್ರೀಡೆ ಕಂಬಳಕ್ಕೆ ಆಧುನಿಕ ಸ್ಪರ್ಶ: ನಿಖರ ಮಾಹಿತಿ ಪಡೆಯಲು ಅ್ಯಪ್ ಆಧಾರಿತ ವ್ಯವಸ್ಥೆಗೆ ಸಿದ್ಧತೆ

15/11/2023, 11:57

ಕಾರ್ಕಳ(reporterkarnataka.com): ಕರಾವಳಿಯ ಜನಪದ ಕ್ರೀಡೆಗಳಲ್ಲಿ ಕಂಬಳಕ್ಕೆ ಅಗ್ರಸ್ಥಾನವಿದೆ. ತುಳುವರ ಜಿಡ್ಡುಗಟ್ಟಿದ ಬದುಕಿಗೆ ಪಾಲಿಶ್ ಉಜ್ಜುವ ಕ್ರಿಯೆಯನ್ನು ಕಂಬಳ ಮಾಡುತ್ತದೆ. ಕಂಬಳವು ತುಳುನಾಡಿನ ಹಿರಿಮೆ ಹಾಗೂ ತುಳು ಸಂಸ್ಕೃತಿಯ ಭಾಗವೂ ಹೌದು. ಪ್ರಸಕ್ತ ಕಂಬಳ ಋತುವಿನಲ್ಲಿ ಕಂಬಳ ಸಮಿತಿಯು ಹೊಸತೊಂದು ಪ್ರಯೋಗಕ್ಕೆ ಮುಂದಾಗಿದೆ. ಹಾಗಾದರೆ ಅದೇನು ಹೊಸ ಪ್ರಯೋಗ ನೋಡೋಣ ಬನ್ನಿ.


ಕಂಬಳ ಸಮಿತಿಯ ವತಿಯಿಂದ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದ ಪ್ರಾಯೋಗಿಕ ಕಂಬಳದಲ್ಲಿ ಸ್ಪಷ್ಟ ಹಾಗೂ ನಿಖರ ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ಎಫ್ ಎಟಿ ( ಫುಲ್ಲಿ ಅಟೊಮೊಟಿಕ್ ಟೈಮಿಂಗ್ಸ್) ಅ್ಯಪ್ ಪರಿಚಯಿಸಿದೆ. ಈ ಎಫ್ ಎಟಿ ಸಿಸ್ಟಮ್ ಅ್ಯಪ್ ಆಧಾರಿತ ವ್ಯವಸ್ಥೆಯಾಗಿದ್ದು ನಿಗದಿತ ಅವಧಿಯಲ್ಲಿ ಕೋಣಗಳ ಕ್ರಮಿಸುವಿಕೆ ಹಾಗೂ ವೇಗವನ್ನು ಎಲ್ಲವೂ ಸ್ಪಷ್ಟ ಚಿತ್ರಣ ಕ್ಯಾಮರಾ ಮೂಲಕ ಕ್ರೋಡೀಕರಿಸಿ ಕಾಣಬಹುದಾಗಿದೆ. ಎಲ್ಲವು ಸ್ವಯಂಚಾಲಿತ ವ್ಯವಸ್ಥೆ ಯಾಗಿದ್ದು ಪ್ರಾಯೋಗಿಕ ಹಂತದಲ್ಲಿದೆ. ಶನಿವಾರ ಕಾರ್ಕಳ ಮಿಯ್ಯಾರು ಕಂಬಳದಲ್ಲಿ ಈ ಎಫ್ ಎ ಟಿ ಸಿಸ್ಟಮ್ ಅನ್ನು ಅಳವಡಿಸಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ‌.
ಕಾರ್ಯಚರಣೆ ಹೇಗೆ?: ಕಾರ್ಕಳ ಮೂಲದ ಐಎನ್ ಬಿ ಐ ಸಾಫ್ಟ್‌ವೇರ್ ಕಂಪನಿಯು ಈ ಎಫ್ ಎಟಿ ಸಿಸ್ಟಮ್ ಆಭಿವೃದ್ದಿ ಪಡಿಸಿದೆ‌. ಕಂಬಳದ ಎರಡು ಕರೆಗಳಲ್ಲಿಯು ಮಂಜೊಟ್ಟಿಯ ಕೆಳಗೆ ಹಾಗೂ ಕಂಬಳದ ಓಟ ಅರಂಭವಾಗುವ ಭಾಗದಲ್ಲಿ ಒಟ್ಟು ನಾಲ್ಕು ಆ್ಯಾಪ್ ಆಧಾರಿತ ಕ್ಯಾಮರಾ ಉಪಕರಣಗಳಿವೆ.
ಓಟದ ಆರಂಭಿಕ ಹಂತದಲ್ಲಿ ಹಾಗೂ ಕೊನೆಯ ಹಂತದವರೆಗೂ ಕಂಬಳ ಕೋಣಗಳ ಪ್ರತಿಯೊಂದು ಓಟದ ವೇಗವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಕಂಬಳದ ಕೋಣಗಳ ವೇಗವಾಗವು ಸೆಕೆಂಡುಗಳಲ್ಲಿ ನಿಗದಿಯಾಗಿರುವ ಕಾರಣ, ವೇಗವಾಗಿ ಕ್ರಮಿಸಿದ ಮಂಜೊಟ್ಟಿ ಮುಟ್ಟಿದ ಕೋಣಗಳ ಗೆಲುವಿನ ಮಾಹಿತಿಯನ್ನು ಸೈರನ್ ಮೂಲಕ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ಯಾಮರಾಗಳ ಮೂಲಕ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ಚಿತ್ರಗಳನ್ನು ಸೆರೆಹಿಡಿದು ನಿಖರತೆ ತೋರಿಸಲು ಅನುಕೂಲವಾಗಲಿದೆ‌.
ಪ್ರಸ್ತುತವಿರುವ
ಕಂಬಳದ ಲೇಸರ್ ಬೀಮ್ ವ್ಯವಸ್ಥೆಯನ್ನು ಸಾಯಿ( ಸ್ಫೋರ್ಟ್ಸ್ ಅಕಾಡೆಮಿ ಅಫ್ ಇಂಡಿಯಾ) ಮಾನ್ಯತೆ ಪಡೆದಿದೆ.
ಲೇಸರ್ ಬೀಮ್ ಗಿಂತ ಎಫ್ ಎ ಟಿ ಸಿಸ್ಟಮ್ ಭಿನ್ನ: ಲೇಸರ್ ಬೀಮ್ ವ್ಯವಸ್ಥೆಯಲ್ಲಿ ರಾತ್ರಿ ಯ ವೇಳೆ ಅಳವಡಿಸುವ ಉಪಕರಣಗಳಿಗೆ ಕೀಟಗಳ ಹಾವಳಿ ಹೆಚ್ಚಿರುವ ಕಾರಣ ಫಲಿತಾಂಶ ನೀಡಲು ಸಮಯ ತೆಗೆದುಕೊಳ್ಲುತಿತ್ತು. ಆದರೆ ಈ ಬಾರಿಯ ಎಫ್ ಎಟಿ ಸಿಸ್ಟಮ್ ನಲ್ಲಿ ಯಾವುದೇ ತೊಂದರೆಗಳಿಲ್ಲ. ಎಲ್ಲವು ಚಿತ್ರಗಳ ಮೂಲಕ ದಾಖಲಾಗುತ್ತವೆ. ಸಮಯ ಉಳಿತಾಯವಾಗಲಿದೆ.
ಕಳೆದ ಐದು ವರ್ಷಗಳಿಂದ ಕಂಬಳವು ಲೇಸರ್ ಫಿನಿಷಿಂಗ್ ಸಿಸ್ಟಮ್ ಮೂಲಕ ಕಾರ್ಯಾಚರಿಸುತಿತ್ತು. ಈ ಬಾರಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನ ಆಧುನೀಕರಿಸಿ ಎಫ್ ಎಟಿ ಸಿಸ್ಟಮ್ ಅಳವಡಿಸಲಾಗುತ್ತಿದೆ.
ಕುದುರೆ ರೆಸ್ ಸ್ಪರ್ಧೆ ಯನ್ನು ಅದ್ಯಯನ ಮಾಡಿ ಈ ಎಫ್ ಎ ಟಿ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಈಗ ಪ್ರಾಯೋಗಿಕ ಹಂತದಲ್ಲಿದೆ. ಇನ್ನೂ ಒಂದು ತಿಂಗಳೊಳಗೆ ಈ ಹೊಸ ವ್ಯವಸ್ಥೆ ಅಭಿವೃದ್ಧಿ ಪಡಿಸಿ ಕಂಬಳದಲ್ಲಿ ಅಳವಡಿಸುವ ಯೋಜನೆ ಹಾಕಲಾಗಿದೆ. ನಿಖರತೆ ಜೊತೆ ಸಮಯದ ಉಳಿತಾಯವಾಗಲಿದೆ. ಕಂಬಳ ಸಮಿತಿಯ ಸಲಹೆಯನ್ನು ಪರಿಗಣಿಸಿ ಆಧುನಿಕರಿಸಲಾಗುತ್ತಿದೆ ಎಂದು
ಐ ಎನ್ ಬಿ ಐ ಮುಖ್ಯಸ್ಥ ರತ್ನಾಕರ್ ನಾಯ್ಕ್ ಹೇಳುತ್ತಾರೆ.
ಲೇಸರ್ ಬೀಮ್ ಗಿಂತಲೂ ಹೆಚ್ಚಿನ ಸ್ಪಷ್ಠತೆ ನಿಖರತೆ ಈ ಹೊಸ ತಂತ್ರಜ್ಞಾನ ದಲ್ಲಿದೆ‌.ಈ ಬಾರಿ ನಡೆಯುವ ನಾಲ್ಕು ಕಂಬಳ ದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿವೆ ಎನ್ನುವುದು ಕಂಬಳ ಸಮಿತಿಯ
ಕಾರ್ಯಾಧ್ಯಕ್ಷ ಹಾಗೂ ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಅವರ ಅಭುಪ್ರಾಯವಾಗಿದೆ.
ಕಂಬಳದ ಫಲಿತಾಂಶ ನಿಖರತೆಯನ್ನು ಉನ್ನತೀಕರಿಸುವ ಕೆಲಸ ವಾಗುತ್ತಿದೆ. ಅಧುನಿಕರಿಸುವ ಕಾರ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಿತಿ ಸದಸ್ಯರ ಜೊತೆ ಚರ್ಚಿಸಿ ಸಾಧಕ ಭಾದಕಗಳನ್ನು ಗಮನಹರಿಸುವ ಕಾರ್ಯವಾಗಲಿದೆ. ಬಳಿಕ ಕಂಬಳದಲ್ಲಿ ಅಳವಡಿಸಲಾಗುತ್ತದೆ ಎಂದು
ಬೆಳಪು ಕಂಬಳ ಸಮಿತಿಯ ಅದ್ಯಕ್ಷ ದೇವಿಪ್ರಸಾದ್ ಶೆಟ್ಟಿ ನುಡಿಯುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು