2:07 AM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ತುಳು ನೆಲದ ಝಳಕ್ ತೋರಿಸುವ ‘ಕೊರಮ್ಮ’: ಹಳೆ ತಲೆಮಾರಿನ ಬದುಕಿನ‌ ಕಥಾ ಹಂದರ

13/08/2023, 21:38

ಮಂಗಳೂರು(reporterkarnataka.com): ‘ಕೊರಮ್ಮ …ಎ ಹ್ಯೂಮನ್’ ಎನ್ನುವ ಟೈಟಲ್‌ನೊಂದಿಗೆ ಆರಂಭವಾಗುವ ಸಿನಿಮಾ ಇದು. ತುಳುನಾಡಿನ ಸಂಸ್ಕೃತಿ, ಭಾಷೆ, ಮಾನವೀಯ ಮೌಲ್ಯವನ್ನು ಒಂದು ಫ್ರೇಮ್ ನೊಳಗೆ ಕೊರಮ್ಮದಲ್ಲಿ ಸೆರೆ ಹಿಡಿಯುವ ಪ್ರಯತ್ನ ನಡೆದಿದೆ.
ಕೊರಮ್ಮದಲ್ಲಿ ಹಳೆ ತಲೆಮಾರಿನ ಸುಂದರ ಬದುಕನ್ನು ಅತೀ ಸುಂದರವಾಗಿ ಕಟ್ಟಿಕೊಡಲಾಗಿದೆ. ಇದರಲ್ಲಿ
ಈ ನೆಲದ ಕಥೆ ನೇತ್ರಾವತಿಯಂತೆ, ಕುಮಾರಧಾರೆಯಂತೆ,‌ ಫಲ್ಗುಣಿಯಂತೆ ಸರಾಗವಾಗಿ ಹರಿದು ಬರುತ್ತದೆ. ಮಾನವೀಯ ಮೌಲ್ಯ, ಸಂಬಂಧ, ಬಂಧುತ್ವವನ್ನು ಕಲಿಸಿಕೊಡುತ್ತದೆ. ತುಳುನಾಡಿನ ಜನರ ವಾಸ್ತವ ಜೀವನಕ್ಕೂ ಸಿನಿಮಾಕ್ಕೂ ತುಂಬಾ ನೆಂಟಸ್ತಿಕೆ ಕಂಡು ಬರುತ್ತದೆ.


ಜಾತಿ -ಧರ್ಮದ ಮೇಲಾಟದಲ್ಲಿ ಯುವಜನತೆ ಸಂಬಂಧಗಳನ್ನು ಕಡಿದು ಹೋಗಬಾರದು, ಕೊಂಡಿಯಂತೆ ಬೆಸೆದುಕೊಂಡು ಮುಂದೆ ಸಾಗಬೇಕು ಎಂಬ ಸಂದೇಶವನ್ನು ನಿರ್ದೇಶಕ ಶಿವಧ್ವಜ್ ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾದಂತೆ ಕಾಣುತ್ತದೆ.
ಚಿತ್ರವನ್ನು ವೀಕ್ಷಿಸುವಾಗ ನಮ್ಮದೇ ಹಳ್ಳಿಯ ನಮ್ಮ ಮನೆಯಲ್ಲಿ ಕೂತಿರುವ ಭಾವನೆಯನ್ನು ಹೆಚ್ಚಿನ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಸಾಂಪ್ರದಾಯಿಕ ಪರಿಕರಗಳನ್ನು ಬಳಸಲಾಗಿದೆ.
ಶುದ್ಧ ತುಳು ಭಾಷೆಯ ಪ್ರಯೋಗವಾಗಿದೆ. ಜಂಜಾಟದ ಬದುಕಿನ ಧಾವಂತದಲ್ಲಿ ನಾವೇನೋ ಕಳೆದುಕೊಳ್ಳುತ್ತಿದ್ದೇವೆ, ಹಾಗಾಗಬಾರದು ಎನ್ನುವುದನ್ನು ಸಿನಿಮಾ ಸಾರಿ ಸಾರಿ ಹೇಳುತ್ತದೆ.
ಪಾತ್ರಗಳ ನೂಕು ನುಗ್ಗಲು ಇಲ್ಲದ ಕೂರಮ್ಮದಲ್ಲಿ
ಸುರೇಶ್ ಬೈರಸಂದ್ರ ಅವರ
ಅದ್ಭುತ ಛಾಯಾಗ್ರಹಣವಿದೆ. ಒಳೆಯ ಸಂಗೀತವಿದೆ.
……………..

ಇತ್ತೀಚಿನ ಸುದ್ದಿ

ಜಾಹೀರಾತು