ಇತ್ತೀಚಿನ ಸುದ್ದಿ
ತುಳು ಭಾಷೆಗೆ ಸ್ಥಾನಮಾನ ಸಿಗದಿರುವುದು ಖಂಡನೀಯ: ತುಳುವರ ಪಕ್ಷದ ಅಧ್ಯಕ್ಷ ಶೈಲೇಶ್
21/12/2021, 18:09
ಮಂಗಳೂರು(reporterkarnataka.com): ತುಳುವರ ಶತಮಾನಗಳ ಬೇಡಿಕೆಯಾದ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಲು ಕೇಂದ್ರ ಸರಕಾರ ನಿರಾಕರಿಸಿರುವುದನ್ನು ತುಳುವೆರೆ ಪಕ್ಷ ಖಂಡಿಸಿದೆ.
ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತುಳುನಾಡು ಪ್ರದೇಶವಾದ ಕಾಸರಗೋಡಿನ ಸಂಸದರಾದ ರಾಜ್ ಮೋಹನ್ ಉನ್ನಿತಾನ್ ಅವರು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬೇಡಿಕೆಯ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದರಾಯ್ ಅವರು ಮಾತನಾಡಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ನಿರಾರಿಸಿದ್ದು ಖಂಡನೀಯ. ವಿವಿಧತೆಯಲ್ಲಿ ಏಕತೆ ಎನ್ನುವ ಸಂವಿಧಾನದ ಆಶಯವನ್ನು ಕೇಂದ್ರ ಸರಕಾರವು ಮರೆತಂತೆ ಕಾಣುತ್ತಿದೆ. ಪ್ರಾದೇಶಿಕ ಅಸ್ಮಿತೆ ಮತ್ತು ಭಾಷಾ ಅಸ್ಮಿತೆಯನ್ನು ನಾಶಪಡಿಸುವ ಕೇಂದ್ರ ಸರಕಾರದ ಹನ್ನಾರದ ಭಾಗವೇ ತುಳು ಭಾಷೆಗೆ 8ನೇ ಪರಿಚ್ಛೇದದ ಸ್ಥಾನಮಾನ ನಿರಾಕರಣೆಯ ಹಿಂದಿನ ಕಾರಣವಾಗಿದೆ. ಪ್ರಾದೇಶಿಕ ಅಸ್ಮಿತೆ ಮತ್ತು ಭಾಷಾ ಅಸ್ಮಿತೆಯ ಉಳಿವು, ಬೆಳವಣಿಗೆಗೆ ಸಹಕಾರ,
ಆಶ್ರಯ ನೀಡುವಲ್ಲಿ ಸರಕಾರಗಳು ವಿಫಲವಾದರೆ ಅಥವಾ ನಿರಾಕರಿಸಿದರೆ ಅಸ್ಮಿತೆ ಉಳಿಸಲು ಚಳವಳಿಯು ತನ್ನದೇ ಹಾದಿಯನ್ನು ಹಿಡಿಯುತ್ತದೆ ಎನ್ನುವುದನ್ನು ಇತಿಹಾಸದಿಂದ ಕೇಂದ್ರ ಸರಕಾರವು ತಿಳಿದುಕೊಳ್ಳುವುದು ಒಳಿತು ಎಂದು ಪಕ್ಷದ ಶೈಲೇಶ್ ಆರ್. ಜೆ. ಹೇಳಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಉಡುಪಿ ಪೇಜಾವರ ಮಠದ ಸ್ವಾಮೀಜಿಗಳು ಕೇಂದ್ರ ಸರಕಾರಕ್ಕೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಮನವಿ ಸಲ್ಲಿಸಿದರು ಕೂಡ ಕೇಂದ್ರ ಸರಕಾರ ಈ ಬೇಡಿಕೆ ಈಡೇರಿಸದಿದ್ದದ್ದು ದುರಂತವೇ ಸರಿ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ತುಳು ಭಾಷೆಯು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ
ಹಂಚಿ ಹೋಗಿದ್ದು, ತುಳುವರ ಒಕ್ಕೊಟಗಳ ಬೇಡಿಕೆಯಾದ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಮೀನಮೇಷ ಎಣಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.