ಇತ್ತೀಚಿನ ಸುದ್ದಿ
ತೀರ್ಥಹಳ್ಳಿ: ಟಿಂಬರ್ ಲೋಡ್ ಮಾಡುವಾಗ ತಲೆ ಮೇಲೆ ಬಿದ್ದ ಮರದ ದಿಮ್ಮಿ ಬಿದ್ದು ವ್ಯಕ್ತಿ ಸಾವು
08/07/2025, 19:12

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಟಿಂಬರ್ ಲೋಡ್ ಕೆಲಸಕ್ಕೆಂದು ಹೋಗಿದ್ದ ವೇಳೆಯಲ್ಲಿ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುತ್ತಿರುವಾಗ ಕಾಲು ಜಾರಿ ಬಿದ್ದ ಕಾರಣದಿಂದ ಮರದ ದಿಮ್ಮಿ ಮೈಮೇಲೆ ಮೇಲೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಸವಾನಿಯಲ್ಲಿ ನಡೆದಿದೆ.
ಯೋಗೇಂದ್ರ (52 ) ಮೃತಪಟ್ಟ ದುರ್ದೈವಿ. ದೇವಂಗಿ ಗ್ರಾಮದ ವ್ಯಕ್ತಿ ಯೊಬ್ಬರು ಟಿಂಬರ್ ಲೋಡ್ ಮಾಡಲು ಹೇಳಿದ್ದ ಕಾರಣದಿಂದ ಬಸವಾನಿ ಗ್ರಾಮದ ಜ್ಯೋತಿಸರ ಎಂಬಲ್ಲಿಗೆ ಯೋಗೇದ್ರ ಸೇರಿ ನಾಲ್ವರು ಕೆಲಸಕ್ಕಾಗಿ ಹೋಗಿದ್ದರು. ಈ ವೇಳೆ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುತ್ತಿರುವಾಗ ಕಾಲು ಜಾರಿ ಬಿದ್ದು ಮರದ ದಿಮ್ಮಿ ಯೋಗೇಂದ್ರ ಎಂಬುವರ ತಲೆಗೆ ಹಾಗೂ ಮೂಗಿಗೆ ಬಲವಾಗಿ ಬಡಿದು ರಕ್ತ ಸ್ರಾವವಾಗಿರುತ್ತದೆ.
ತಕ್ಷಣವೇ ಅವರ ಸ್ನೇಹಿತರು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆ ವೇಳೆಗೆ ಯೋಗೇದ್ರ ಎಂಬುವರು ಮೃತಪಟ್ಟಿರುತ್ತಾರೆ. ಕೂಲಿ ಕೆಲಸಕ್ಕೆಂದು ಪರಸ್ಥಳದಿಂದ ಕರೆಸಿ ಅತೀ ಭಾರವಾದಂತಹ ಮರದ ದಿಮ್ಮಿಗಳನ್ನು ಮೇಲಿನಿಂದ ತಂದು ಕೆಳಗೆ ಹಾಕಲು ಒತ್ತಾಯ ಪಡಿಸಿದ್ದು ಯಾವುದೇ ಮುಂಜಾಗ್ರತೆ ಕ್ರಮವನ್ನು ಕೆಲಸಗಾರರಿಗೆ ಕೆಲಸ ಮಾಡಲು ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿ ನನ್ನ ತಮ್ಮ ಯೋಗೇಂದ್ರ ರವರ ಸಾವಿಗೆ ಕಾರಣನಾದ ಟಿಂಬರ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯೋಗೇದ್ರ ಅವರ ಸಹೋದರ ದೂರು ನೀಡಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.