2:34 AM Saturday27 - December 2025
ಬ್ರೇಕಿಂಗ್ ನ್ಯೂಸ್
ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ ಭಾರತ ರತ್ನ ವಾಜಪೇಯಿ ಗ್ರಂಥಾಲಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟನೆ ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆಗೆ ಒತ್ತು: ಕೆಡಿಇಎಂ ಮತ್ತು ಎಫ್‌ಕೆಸಿಸಿಐ… ಪ್ರೀತಿಯ ಸಂಸ್ಕೃತಿ ಬೆಳೆಸಿ: ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ. ಸಲ್ಡಾನರಿಂದ ಕ್ರಿಸ್ಮಸ್ ಸಂದೇಶ ಕಲಬುರ್ಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ | ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ:…

ಇತ್ತೀಚಿನ ಸುದ್ದಿ

ಥೇಟ್ ಮಹಾತ್ಮ ಗಾಂಧೀಜಿಯಂತೆ ಇವರ ವೇಷ!: ರಾಷ್ಟ್ರಪಿತ ಪುತ್ಥಳಿಯಂತೆ ತಾಸುಗಟ್ಟಲೆ ಕದಲದೆ ನಿಲ್ಲುತ್ತಾರೆ!!

25/11/2023, 19:33

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಮನುಷ್ಯ ತನ್ನ ಜೀವನೋಪಾಯ ಹಾಗೂ ಹೊಟ್ಟೆಪಾಡಿಗಾಗಿ ಏನೆಲ್ಲಾ ಮಾಡುತ್ತಾನೆ ನೀವೇ ನೋಡಿ.
ಇಲ್ಲೊಬ್ಬ ವ್ಯಕ್ತಿ ತನ್ನ ಹೊಟ್ಟೆಪಾಡಿಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನೆ ನಾಚಿಸುವಂತಹ ವೇಷದಾರಿಯಾಗಿ ನಿಂತಿದ್ದಾನೆ.
ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗ ದಿಢೀರ್ ಪ್ರತ್ಯಕ್ಷವಾದ ಈ ಮಹಾತ್ಮ ನೋಡುವುದಕ್ಕೆ ಥೇಟ್ ಮಹಾತ್ಮ ಗಾಂಧಿಯಂತೆಯೇ ಕಾಣುತ್ತಿದ್ದಾನೆ. ಇವನು ನಿಂತಿರುವ ಭಂಗಿ ಯಾವುದೇ ಮಹಾತ್ಮ ಗಾಂಧೀಜಿಯವರ ಚಿತ್ರ ಹಾಗೂ ಪುತ್ತಳಿಗಿಂತ ಕಮ್ಮಿ ಇಲ್ಲ. ತಲೆಯಿಂದ ಉಂಗುಷ್ಟದವರೆಗೂ ಒಂದು ರೀತಿ ಸಿಲ್ವರ್ ಬಣ್ಣ ಹಚ್ಚಿಕೊಂಡು ಕಣ್ಣಿಗೆ ಕನ್ನಡಕ ಕೈಯಲ್ಲಿ ಕೋಲು ಹಿಡಿದು ಕೊಂಡು ನಿಂತಿರುವ ದೃಶ್ಯ ಗಾಂಧೀಜಿ ಅವರ ಪುತ್ಥಳಿ ಯಂತೆ ಭಾಸವಾಗುತ್ತಿದೆ.


ಸುಡು ಬಿಸಿಲಿನಲ್ಲಿಯೇ ಯಾವುದೇ ಚಲನವಲನವಿಲ್ಲದೆ, ಕಣ್ಣು ಸಹ ಮಿಟುಕಿಸದೆ, ಮಾತನ್ನು ಸಹ ಆಡದೇ ನಿರ್ಜೀವ ಶಿಲೆಯಂತೆಯೇ ನಿಂತಿರುವ ಈತನ ಭಂಗಿ ನಿಜಕ್ಕೂ ಮೆಚ್ಚುವಂಥದ್ದೆ ಆಗಿದೆ.
ದೇವಾಲಯಕ್ಕೆ ಬರುವ ಭಕ್ತರು ಇದನ್ನು ನೋಡಿ ಇದೊಂದು ಪುತ್ತಳಿಯೇ ಇರಬೇಕು ಎಂದು ಭಾವಿಸಿದರೆ ಮತ್ತೆ ಕೆಲವರು ಆತನ ಮೈ ಕೈ ಹಾಗೂ ಕೋಲನ್ನು ಮುಟ್ಟಿ ಇದು ಪುತ್ಥಳಿಯೋ ಅಥವಾ ಮನುಷ್ಯನೋ ಎಂದು ಖಾತರಿಪಡಿಸಿಕೊಳ್ಳುತ್ತಿದ್ದರು.
ಕೆಲವು ಭಕ್ತರು ಭಕ್ತಿಯಿಂದ ಮುಟ್ಟಿ ನಮಸ್ಕರಿಸಿದರೆ ಮತ್ತೆ ಕೆಲವರು ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಂಡು ಖುಷಿಪಟ್ಟು ತಮ್ಮ ಕೈಲಾದ ಹಣ ಸಹಾಯ ಮಾಡುತ್ತಿದ್ದರು.
ಒಟ್ಟಾರೆ ಯಾರೇ ಮುಟ್ಟಿದರು ಏನೇ ಮಾತನಾಡಿದರು ತಾನು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಜೀವ ವಸ್ತುವಿನಂತೆ ನಿಂತುಕೊಂಡೇ ಎಲ್ಲಾ ಸಾರ್ವಜನಿಕರ ಗಮನ ಸೆಳೆದ ಮಹಾತ್ಮ ಗಾಂಧಿ ವೇಷದಾರಿ.

ಇತ್ತೀಚಿನ ಸುದ್ದಿ

ಜಾಹೀರಾತು