ಇತ್ತೀಚಿನ ಸುದ್ದಿ
Terror Attack | ಕಾಶ್ಮೀರ: ಭಾರತೀಯ ಸೇನಾ ಕಾರ್ಯಾಚರಣೆಗೆ ಹತರಾದ ಉಗ್ರಗಾಮಿಗಳು: ಕಣಿವೆಯಲ್ಲಿ ಮುಂದುವರಿದ ಶೋಧ
23/04/2025, 12:10

ಶ್ರೀನಗರ(reporterkarnataka.com)
ಕಾಶ್ಮೀರದಲ್ಲಿ ಮತ್ತೊಮ್ಮೆ ಉಗ್ರರ ಅಟ್ಟಹಾಸ ಆರಂಭಗೊಂಡಿದ್ದು, ಪ್ರತಿಯಾಗಿ ಭಾರತೀಯ ಸೇನೆ ಕ್ಷಿಪ್ರ ಕಾರ್ಯಾಚರಣೆ ಮುಂದುವರಿಸಿದೆ.
ಮಂಗಳವಾರ ಮಧ್ಯಾಹ್ನ ಅನಂತ್‌ನಾಗ್ ಜಿಲ್ಲೆಯ ಪಹಲ್‌ಗಾಂನಲ್ಲಿ ಬೈಸಾರನ್ ಕಾಡು ಪ್ರದೇಶದ ಟ್ರಕಿಂಗ್‌ನಲ್ಲಿ ನಿರತ ಸುಮಾರು 500ಕ್ಕೂ ಅಧಿಕ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರ ತಂಡ ದಾಳಿ ಮಾಡಿದ್ದು, 26ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ.
ಪ್ರತಿಯಾಗಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ಬೈಸರನ್‌ನಿಂದ ದೂರ ಬಾರಮುಲ್ಲ ಜಿಲ್ಲೆಯ ಉರಿ ನಾಳದ ಸರ್ಜೀವನ್ ಪ್ರದೇಶದಲ್ಲಿ ನಡೆದ ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಎರಡು AK 47 ಗನ್, ಒಂದು ಪಿಸ್ತೂಲ್, ಐಇಡಿ ಸ್ಪೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಉಗ್ರರ ವಿವಿರ ಸೇರಿದಂತೆ ಇನ್ನಷ್ಟು ನಿಖರ ಮಾಹಿತಿಗಳ ನಿರೀಕ್ಷೆ ಇದೆ.