9:07 PM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್ ಬೆಟ್ಟಗೆರೆ

18/11/2024, 09:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಪೂರ್ಣಚಂದ್ರ ತೇಜಸ್ವಿಯವರು ನಡೆ ನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರಾಗಿದ್ದಾರೆ ಎಂದು ಸಾಹಿತಿ ಡಾ.ಸಂಪತ್ ಬೆಟ್ಟಗೆರೆ ಹೇಳಿದರು.
ಅವರು ಕೊಟ್ಟಿಗೆಹಾರ ತೇಜಸ್ವಿ ಪ್ರತಿಷ್ಠಾನದಲ್ಲಿ ಬಣಕಲ್ ಕಸಾಪ ವತಿಯಿಂದ ನಡೆದ ಕನ್ನಡ ಸಂಸ್ಕೃತಿ, ವಿಚಾರ ಗೋಷ್ಠಿ ಹಾಗೂ ಕಾವ್ಯ ಸ್ಪಂದನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ‘ಅವರು ತಮ್ಮ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಕೃತಿಯಲ್ಲಿ ಪ್ರತಿಪಾದಿಸುವ ಮೂಲಕ ಅದರಂತೆ ತಮ್ಮ ಬರವಣಿಗೆಯನ್ನು ಮಾಡಿಕೊಂಡು ಬಂದವರು. ಮುಂದುವರೆದಂತೆ ಅಬಚೂರಿನ ಪೋಸ್ಟ್ ಆಫೀಸ್ ಕಥಾಸಂಕಲನದ ಮುನ್ನುಡಿ, ಮಾಯಾಲೋಕ ಕಾದಂಬರಿಯ ಪ್ರವೇಶ ನುಡಿಯಲ್ಲಿ ಹೊಸ ಚಿಂತನೆಗಳನ್ನು ಸೂಚಿಸುವ ಮೂಲಕ ತನ್ನದೇ ರಚನೆಯ ಸಾಹಿತ್ಯವನ್ನು ಆತ್ಮಾವಲೋಕನ ಮಾಡಿಕೊಳ್ಳುವ ಮುಖೇನ ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ ಸಾಂಸ್ಕೃತಿಕ ಮುಖಾಮುಖಿಯಾಗಿ ಬರೆದವರು ತೇಜಸ್ವಿ.ಬರಹಗಾರನಾದವನು ಸಾಹಿತಿಯಾಗಬೇಕೆಂಬ ಪ್ರಚಾರದ ಹುಚ್ಚಿಗೆ ಬಿದ್ದರೆ ಅವನ ವಿಚಾರಧಾರೆ ಓದುಗನಿಗೆ ತಲುಪುವ ಬದಲಿಗೆ ಅವನು ವ್ಯಕ್ತಿ ಪೂಜನೀಯವಾಗಿ ಹೋದರೆ ತುಂಬಾ ಅಪಾಯಕಾರಿ ಎಂಬ ಅರಿವು ತೇಜಸ್ವಿ ಅವರಿಗಿತ್ತು. ಆದ್ದರಿಂದ ಅವರು ಸಾಹಿತ್ಯ ಬರವಣಿಗೆಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಷ್ಟು ಸಭೆ ಸಮಾರಂಭಗಳಲ್ಲಿ ಭಾಗವಹಿಸದೇ ದೂರವಾಗಿಯೆ ಉಳಿದಿದ್ದರು.
ಇಂದು ತೇಜಸ್ವಿ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ತುಂಬಾ ಲಘುವಾಗಿ ಚಿತ್ರಿಸುವ ಪ್ರಯತ್ನಗಳು ಆಗುತ್ತಿರುವುದು ತುಂಬಾ ವಿಷಾದಕರ. ತೇಜಸ್ವಿ ಅವರು ಜಾತ್ಯಾತೀತವಾದಿ ನಿಲುವಿನ ಚಿಂತಕ. ಅವರು ಎಂದಿಗೂ ಜಾತಿವಾದಿಯಲ್ಲ, ಪ್ರೀತಿಯ ಸಂತನಂತೆ ಬದುಕಿದವರು. ಆದರೆ ಇಂದು ಸುಳ್ಳಾದ ಪ್ರಕ್ಷಿಪ್ತಗಳನ್ನು ಸೃಷ್ಟಿಸಿದ ಬರವಣಿ ಮತ್ತು ಭಾಷಣಗಳಿಂದ ಅವರ ವಿಚಾರಗಳನ್ನು ತಪ್ಪಾಗಿ ಅರ್ಥೈಸಿ ವ್ಯಾಖ್ಯಾನಿಸಲು ಕೆಲವು ಸ್ವಹಿತಾಸಕ್ತಿ ಚಿಂತನೆಯವರು ಮಾಡುತ್ತಿರುವುದನ್ನು ನಾವು ಖಂಡಿಸುವ ಪ್ರಯತ್ನ ಮಾಡಬೇಕು ಎಂದರು.
ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಮಾತನಾಡಿ’ ಕಸಾಪದಿಂದ ಹೊರಹೊಮ್ಮಿದ ಯುವ ಕವಿಗಳು ಕೇವಲ ಕವಿಗೋಷ್ಠಿಗೆ ಮಾತ್ರ ಸೀಮಿತವಾಗಿರದೆ ತಮ್ಮ ಬರಹಗಳನ್ನು ಮುಂದುವರೆಸಿ ಸಮಾಜಕ್ಕೆ ತಮ್ಮ ಬರಹಗಳಿಂದ ಉತ್ತಮ ಕೊಡುಗೆ ನೀಡಬೇಕು’ಎಂದು ನುಡಿದರು.
ಮೂಡಿಗೆರೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ’ ಬಣಕಲ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ.ಲೋಕೇಶ್ ಅವರು ಉತ್ಸಾಹಿ ಯುವಕರಾಗಿದ್ದು ಇನ್ನಷ್ಟು ಕಾರ್ಯಕ್ರಮಗಳ ಮೂಲಕ ಕನ್ನಡದ ಮನಸುಗಳನ್ನು ಕಟ್ಟುವ ಬೆಳೆಸುವ ಕೆಲಸವಾಗಬೇಕು’ಎಂದರು.
ನಿವೃತ್ತ ಉಪನ್ಯಾಸಕ ಬಿ.ಇ.ಬಿಳಿಯಪ್ಪ ಮಾತನಾಡಿ’ನಿಸ್ವಾರ್ಥ ಮನೋಭಾವ ಬೆಳೆಸಿಕೊಂಡು ಕನ್ನಡ ಭಾಷಾಭಿಮಾನ ಬೆಳೆಸಿ ಕನ್ನಡ ಸಂಸ್ಕೃತಿಯನ್ನು ಉಳಿಸಬೇಕು’ಎಂದರು.ಬಣಕಲ್ ಕಸಾಪ ಅಧ್ಯಕ್ಷ ಬಿ.ಕೆ.ಲೋಕೇಶ್ ಮಾತನಾಡಿ’ಕಾವ್ಯ ಸ್ಪಂದನದಲ್ಲಿ ಭಾಗವಹಿಸಿದ ಯುವ ಕವಿಗಳು ತಮ್ಮ ಕವನಗಳನ್ನು ಸೋಲು ಗೆಲವು ಎಂಬ ರೀತಿಯಲ್ಲಿ ಕಾಣಬಾರದು.ಯುವ ಬರಹಗಾರರ ಕವನಗಳು ಮತ್ತಷ್ಟು ಹೆಚ್ಚಾಗಿ ಹೊಸ ಪ್ರತಿಭಾವಂತ ಕವಿಗಳನ್ನು ಹುಟ್ಟು ಹಾಕುವ ಕಾರ್ಯ ಕಸಾಪದಿಂದ ನಿತ್ಯ ಸಾಗುತ್ತದೆ’ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತಿಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯಗೌಡ,ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆಯ ರಾಜ್ಯ ಅಧ್ಯಕ್ಷ ಎಂ.ಎಸ್.ನಾಗರಾಜ್,ಪೂರ್ಣೇಶ್ ಹೆಬ್ಬರಿಗೆ,ಸುಪ್ರೀತ್ ಬೆಟ್ಟಗೆರೆ ರಾಮಚಂದ್ರ,ಸಂಜಯಗೌಡ,ಪ್ರಕಾಶ್ ಬಕ್ಕಿ, ನಂದೀಶ್ ಬಂಕೇನಹಳ್ಳಿ ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು