ಇತ್ತೀಚಿನ ಸುದ್ದಿ
ತೀರ್ಥಹಳ್ಳಿ: ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಛತ್ರಕೇರಿ ಗಣೇಶೋತ್ಸವ ಶೋಭಾಯಾತ್ರೆ
20/09/2024, 15:17
ರಶ್ಮಿ ಶ್ರೀಕಾಂತ್ ನಾಯಕ್ ಶಿವಮೊಗ್ಗ
info.reporterkarnataka@gmail.com
ಶಾಂತಿ, ಸುವ್ಯವಸ್ಥೆಗೆ ಹೆಸರಾದ ತೀರ್ಥಹಳ್ಳಿಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು.ಸೌಹಾರ್ದತೆ ಮೆರೆದಿದ್ದಾರೆ.
ಹೌದು.ಗುರುವಾರ ತೀರ್ಥಹಳ್ಳಿಯ ಛತ್ರಕೇರಿ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸೀಬಿನಕೆರೆ ಸರ್ಕಲ್ ನಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಅಂಗವಾಗಿ ಉಪಹಾರ ಹಾಗೂ ಬಾದಾಮಿ ಹಾಲಿನ ವ್ಯವಸ್ಥೆ ಮಾಡಿದ್ದು, ಎಲ್ಲರೂ ಸೌಹಾರ್ದಯುತವಾಗಿ ಪಾಲ್ಗೊಂಡರು.
ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅನ್ನು ಸಂಭ್ರಮದಿಂದ ಆಚರಿಸುವ ಮೂಲಕ ತೀರ್ಥಹಳ್ಳಿಯ ಹಿಂದೂ ಮುಸ್ಲಿಂ ಬಾಂಧವರು
ಸೌಹಾರ್ದತೆ ಮೆರೆದಿದ್ದಾರೆ. ತೀರ್ಥಹಳ್ಳಿಯ ಮೆರವಣಿಗೆಯಲ್ಲಿ ಪಾಲ್ಗೊಂಡವರು ಧನ್ಯವಾದ ಅರ್ಪಿಸಿದ್ದಾರೆ.
ಶ್ರೀ ಸಿದ್ದಿ ವಿನಾಯಕ ಯುವಕ ಸಂಘದ 41ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ರಾಜಬೀದಿ ಉತ್ಸವದ ಸಮಯದಲ್ಲಿ
ಮೆರವಣಿಗೆಯಲ್ಲಿ ಪಾಲ್ಗೊಂಡು ಎಲ್ಲಾ ಕಲಾತಂಡ ಹಾಗೂ ಸಂಘದ ಸದಸ್ಯರುಗಳಿಗೆ ಸೀಬಿನಕೆರೆ ಮೊಹರಂ ಕಮಿಟಿ, ಉಪಹಾರ ಹಾಗೂ ಬಾದಾಮಿ ಹಾಲು ವ್ಯವಸ್ಥೆಯನ್ನು ಮಾಡಿದ್ದರು.
ಈ ಸಂದರ್ಭದಲ್ಲಿ ಆ ವಾರ್ಡ್ ಸದಸ್ಯರಾದ ರತ್ನಾಕರ್ ಶೆಟ್ಟಿ ಇದ್ದರು.