ಇತ್ತೀಚಿನ ಸುದ್ದಿ
ತೀರ್ಥಹಳ್ಳಿಯಲ್ಲಿ ಯುವ ಹೋಟೆಲ್ ಉದ್ಯಮಿ ನೇಣಿಗೆ ಶರಣು
17/01/2025, 07:23
ರಶ್ಮಿ ಶ್ರೀಕಾಂತ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnata@gmail.com
ಹೋಟೆಲ್ ಉದ್ಯಮಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ತೀರ್ಥಹಳ್ಳಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಬಳಿ ಹೋಟೆಲ್ ನಡೆಸುತ್ತಿದ್ದ ಬಾಳೇಬೈಲಿನ ಮಿಥುನ್ (34) ಅವರು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ತಾಲೂಕಿನ ಹಂಡಿಗೆ ಮೂಲದ ಇವರು ಹೋಟೆಲ್ ಉದ್ಯಮವನ್ನು ಆರಂಭ ಮಾಡಿದ್ದರು.
ಪತ್ನಿ ಮತ್ತು 8 ತಿಂಗಳ ಮಗು ಜತೆ ಬಾಳೆಬೈಲಿನಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.