7:51 AM Sunday22 - December 2024
ಬ್ರೇಕಿಂಗ್ ನ್ಯೂಸ್
ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು… ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ 16,665 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಣೆ: ಸದನದಲ್ಲಿ ಸಿಎಂ…

ಇತ್ತೀಚಿನ ಸುದ್ದಿ

TECH KNOWLEDGE | ನಿಮ್ಮ ಮೊಬೈಲ್ ಮಾರಲು ಹೊಟ್ಟಿದ್ದೀರ ? ಮಾರುವ ಮೊದಲು ಈ ಕೆಲಸಗಳನ್ನು ತಪ್ಪದೆ ಮಾಡಿ

08/08/2021, 22:07

info.reporterkarnataka@gmail.com

ಹೊಸ ಮೊಂಬೈಲ್ ಕೊಂಡಾಗ ಅಥವಾ ಇರುವ ಮೊಬೈಲನ್ನು ಮಾರಬೇಕು ಎನ್ನುವಾಗ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮಾರಲು ಮುಂದಾಗುತ್ತೇವೆ.
ಆದರೆ ಈ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮೊಬೈಲ್ ಮಾರಿದರೆ ಅನೇಕ ಅನಾಹುತಗಳಿಗೆ ಎಡೆ ಮಾಡಿಕೊಟ್ಟ ಹಾಗೆ ಆಗುತ್ತದೆ.
ಮೊಬೈಲ್ ಮಾರುವ ಮುನ್ನ ಅಥವಾ ಇನ್ನೊಬ್ಬರಿಗೆ ಬಳಕೆಗೆ ನೀಡುವಾಗ ಯಾವೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿದೆ

Photos: ನಿಮ್ಮ ಫೋನಿನಲ್ಲಿರುವ ಫೋಟೊ ವಿಡಿಯೋಗಳ ಬಗ್ಗೆ ಗಮನ ಇರಲಿ. ನಿಮ್ಮ ಖಾಸಗಿ ಫೋಟೊ ಅಥವಾ ಡಾಕ್ಯುಮೆಂಟ್‌ಗಳ ಫೋಟೊಗಳನ್ನು ಡಿಲೀಟ್ ಮಾಡದೆ ಹಾಗೆ ಇನ್ನೊಬ್ಬರಿಗೆ ಕೊಟ್ಟರೆ ಸಮಸ್ಯೆಗಳು ಎದುರಾಗಬಹುದು ಹಾಗಾಗಿ ಫೋಟೊಗಳನ್ನು ಗೂಗಲ್ ಡ್ರೈವ್ ಅಥವಾ ಗೂಗಲ್ ಫೊಟೊಸ್‌ಗೆ ಅಪ್ಲೋಡ್ ಮಾಡಿಕೊಳ್ಳಿ ಆಮೇಲೆ ಫೋನ್‌ನಿಂದ ಡಿಲೀಟ್ ಮಾಡಬಹುದು.

Contacts: ನೀವು ಮಾರಲು ಹೊರಟ ಮೊಬೈಲ್‌ನಲ್ಲಿರುವ ಕಾಂಟ್ಯಾಕ್ಟ್‌ಗಳನ್ನು ಕಡ್ಡಾಯವಾಗಿ ಡಿಲೀಟ್ ಮಾಡಲು ಮರೆಯದಿರಿ. ಮೊಬೈಲ್‌ನಲ್ಲಿ ಕಾಂಟ್ಯಾಕ್ಟ್‌ಗಳು ಉಳಿದರೆ ಮೊಬೈಲ್ ತಗೊಂಡವರು ಅದರ ದುರುಪಯೋಗ ಮಾಡಿಕೊಳ್ಳಬಹುದು ಅದನ್ನು ಇನ್ನೊಂದು ಫೋನಿಗೆ ಟ್ರಾನ್ಸಫರ್ ಅಥವಾ ಜಿಮೇಲ್‌ಗೆ ಸಿಂಕ್ ಮಾಡಿ ಕಾಂಟ್ಯಾಕ್ಟ್ ಡಿಲೀಟ್ ಮಾಡಿ.

Log out: ನಿಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್, ಇನ್ಸ್ಟಾಗ್ರಾಂ, ಗೂಗಲ್ ಹಾಗೂ ಇತರ ಕಡೆಗಳಲ್ಲಿ ಲಾಗ್ ಇನ್ ಆಗಿರ್ತೀರ ಅಲ್ಲಿಂದ ಲಾಗ್ ಔಟ್ ಆಗಲು ಮರೆಯಬೇಡಿ. ಇಲ್ಲದಿದ್ದಲ್ಲಿ ನಿಮ್ಮ ಅಕೌಂಟ್‌ಗಳು ಹ್ಯಾಕ್ ಕೂಡ ಆಗಬಹುದು ಜಾಗ್ರತೆ.

SIM, Memory Card: ತಪ್ಪದೇ ನಿಮ್ಮ ಮೊಬೈಲ್ ನಲ್ಲಿರುವ ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಗಳನ್ನು ತೆಗೆದು ನಂತರ ಸೇಲ್ ಮಾಡಿ.

Whatsapp: ನಿಮ್ಮ ವಾಟ್ಸ್ ಆಪ್ ಬ್ಯಾಕ್ ಅಪ್ ಮಾಡಿಕೊಳ್ಳುವುದನ್ನು ಮರಿಯಬೇಡಿ. ಇದರಲ್ಲಿ ನಿಮ್ಮ ಕಾಂಟ್ಯಾಕ್ಟ್ಸ್, ಫೈಲ್ಸ್ ಗಳೂ ಸೇವ್ ಆಗಿರುತ್ತದೆ.

Reset: ನೀವು ಎಲ್ಲಾ ಫೈಲ್ಸ್ ಗಳನ್ನು ಬ್ಯಾಕ್ ಅಪ್ ಮಾಡಿಕೊಂಡ ಬಳಿಕ ನಿಮ್ಮ ಹಳೇ ಮೊಬೈಲ್ ಅನ್ನು ಒಮ್ಮೆ ರೀಸೆಟ್ ಮಾಡುವದರಿಂದ ಹಳೆಯ ಎಲ್ಲಾ ಡೇಟಾಗಳು ಡಿಲೀಟ್ ಆಗುತ್ತವೆ.

ಇತ್ತೀಚಿನ ಸುದ್ದಿ

ಜಾಹೀರಾತು