ಇತ್ತೀಚಿನ ಸುದ್ದಿ
ತರೀಕೆರೆ ಮಾಜಿ ಶಾಸಕನ ಮೇಲೆ ಹಲ್ಲೆ ನಡೆಸಿ ಮನೆ ದರೋಡೆ: 1 ಕೆಜಿ ಚಿನ್ನಾಭರಣ, ನಗದು ಲೂಟಿ
11/05/2023, 11:32
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತರೀಕೆರೆಯ ಮಾಜಿ ಶಾಸಕರೊಬ್ಬರಿಗೆ ಹಲ್ಲೆ ನಡೆಸಿ
ಮನೆ ದರೋಡೆ ಮಾಡಿದ ಘಟನೆ ನಡೆದಿದೆ. ಬಂದೂಕು, ಮಚ್ಚುನೊಂದಿಗೆ ಬಂದಿದ್ದ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿದೆ.
15 ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ದರೋಡೆ ನಡೆದಿದೆ ಎಂದು ಶಂಕಿಸಲಾಗಿದೆ.
ತರೀಕೆರೆ ಮಾಜಿ ಶಾಸಕ ಎಸ್ ಎಂ ನಾಗರಾಜ್ ಅವರ ಅಜ್ಜಂಪುರ ತಾಲೂಕಿನ ಗಡಿಹಳ್ಳಿಯ ತೋಟದ ಮನೆಯ ಬಾಗಿಲು ಮುರಿದು ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.1 ಕೆಜಿಗೂ ಅಧಿಕ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಲೂಟಿ ಮಾಡಿದ್ದಾರೆ.
ಚುನಾವಣೆ ಸಮಯದಲ್ಲಿ ನಡೆದ ಈ ಘಟನೆ
ಹಲವು ಅನುಮಾನಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಎಸ್ಪಿ ಉಮ ಪ್ರಶಾಂತ್ ಭೇಟಿ ನೀಡಿದ್ದಾರೆ.




ದುಷ್ಕರ್ಮಿಗಳ ಶೋಧಕ್ಕೆ ಬಲೆ ಬೀಸಲಾಗಿದೆ.
ಚುನಾವಣೆಯ ದ್ವೇಷವೋ? ಹಣಕ್ಕಾಗಿ ದರೋಡೆ ಕೃತ್ಯವೋ ಎಂಬ ಶಂಕೆ ? ಉಂಟಾಗಿದೆ.














