ಇತ್ತೀಚಿನ ಸುದ್ದಿ
ತರೀಕೆರೆ: ಭೀಕರ ರಸ್ತೆ ಅಪಘಾತಕ್ಕೆ ಯುವತಿ ಸೇರಿ ಇಬ್ಬರ ದಾರುಣ ಸಾವು; ಲಾರಿ- ಬೈಕ್ ಮುಖಾಮುಖಿ ಡಿಕ್ಕಿಯಿಂದ ದುರಂತ
21/06/2023, 18:13
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತರೀಕೆರೆ ತಾಲೂಕಿನ ಕಟ್ಟೆಹೊಳೆ ಗೇಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ವಿಶ್ವಾಸ್( 24) ಹಾಗೂ ದೀಪಿಕಾ (22) ಎಂದು ಗುರುತಿಸಲಾಗಿದೆ.
ವಿಶ್ವಾಸ್ ತರೀಕೆರೆ ತಾಲೂಕಿನ ಬೇಲೇನಹಳ್ಳಿ ನಿವಾಸಿ ಹಾಗೂ
ದೀಪಿಕಾ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ಎಂದು ತಿಳಿದು ಬಂದಿದೆ.
ತರೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.