ಇತ್ತೀಚಿನ ಸುದ್ದಿ
ತಾಂತ್ರಿಕ ದೋಷ: ಮಂಗಳೂರು- ದುಬೈ ಏರ್ ಇಂಡಿಯಾ ವಿಮಾನ 12 ತಾಸು ವಿಳಂಬ ಯಾನ
11/07/2023, 17:46
ಮಂಗಳೂರು(reporterkarnataka.com): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ರಾತ್ರಿ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ಇಂದು ಮಧ್ಯಾಹ್ನ 12.10ಕ್ಕೆ ತೆರಳಿತು.
ಏರ್ ಇಂಡಿಯಾ ವಿಮಾನ(IX 813)ದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ರಾತ್ರಿ 11.15 ಯಾನ ಸಾಧ್ಯವಾಗಲಿಲ್ಲ. ತಾಂತ್ರಿಕ ದೋಷದಿಂದಾಗಿ, ವಿಮಾನವು 12 ತಾಸಿಗೂ ಹೆಚ್ಚು ಕಾಲ ವಿಳಂಬವಾಗಿ ಇಂದು ಮಧ್ಯಾಹ್ನ 12.10 ಗಂಟೆಗೆ ಟೇಕ್ ಆಫ್ ಆಗಿಯಿತು. ಪರ್ಯಾಯ ವಿಮಾನದ ಮೂಲಕ ಸುಮಾರು 180 ಮಂದಿ ಪ್ರಯಾಣಿಕರನ್ನು ಕಳುಹಿಸಲಾಯಿತು.