ಇತ್ತೀಚಿನ ಸುದ್ದಿ
ಟ್ಯಾಂಕರ್ ಲಾರಿ- ಬೈಕ್ ನಡುವೆ ಭೀಕರ ಅಘಪಾತ: ಇಬ್ಬರ ಬಲಿ; ಸಾವಿನಲ್ಲೂ ಒಂದಾದ ಕುಚುಕು ಗೆಳೆಯರು!
20/12/2023, 18:24

ಮೋಹನ್ ನಂಜನಗೂಡು ಮೈಸೂರು
info.reporterarnataka@gmail.com
ನಂಜನಗೂಡು ತಾಲೂಕು ಮಲ್ಲೂಪುರ ಗ್ರಾಮದಲ್ಲಿ ನಡೆದ
ದ್ವಿಚಕ್ರ ವಾಹನ ಮತ್ತು ಟ್ಯಾಂಕರ್ ಲಾರಿ ನಡುವೆ ಅಪಘಾತದಲ್ಲಿ ಇಬ್ಬರು ಪ್ರಾಣ ಸ್ನೇಹಿತರು ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ.
ಸಕ್ಕರೆ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರಾಗಿದ್ದ ತಗಡೂರು ಗ್ರಾಮದ ಶಿವಮಲ್ಲೆಗೌಡ ಎಂಬುವರ ಪುತ್ರ ಮಹೇಶ್ (24) ಹಾಗೂ ಅದೇ ಗ್ರಾಮದ ನಾಗರಾಜು ಎಂಬುವವರ ಪುತ್ರ ಮಹೇಶ್ (23) ಮೃತ ಗೆಳೆಯರು. ಇವರು
ನಂಜನಗೂಡು ತಾಲ್ಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ. ಮಲ್ಲೂಪುರ ಬಳಿ ಟ್ಯಾಂಕರ್ ಲಾರಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಮತ್ತೊರ್ವ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ತೆರಳುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಇಬ್ಬರೂ ಚಿಕ್ಕ ವಯಸ್ಸಿನಿಂದಲೂ ಗೆಳಯರಾಗಿದ್ದರು.
ಬಿಳಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಟ್ಯಾಂಕರ್ ಲಾರಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟ್ಯಾಂಕರ್ ಲಾರಿಯ ಚಾಲಕ ಸ್ಥಳದಿಂದ ನಾಪತ್ತೆ.
ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.