3:15 AM Tuesday1 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

ತಮ್ಮಣ್ಣನ ಅಜ್ಜಿಮನೆ; ಶಶಿಕುಮಾರ್ ಬೆತ್ತದಕೊಳಲು ಅವರ ಕಥೆ ಓದಿ

08/07/2022, 14:28

ತಮ್ಮಣ್ಣ ಆಗ ತಾನೆ ಒಂದನೇ ತರಗತಿ ಮುಗಿಸಿ ಬೇಸಿಗೆ ರಜೆ ಕಳೆಯಲು ಅಮ್ಮನೊಂದಿಗೆ ಅಜ್ಜಿಯ ಮನೆಗೆ ಬಂದಿದ್ದ. ನಮ್ ತಮ್ಮಣ್ಣನಿಗೋ ಅಜ್ಜಿ ಅಂದ್ರೆ ಪ್ರಾಣ, ಅಜ್ಜಿ ಯಾವಾಗ್ಲು ಪೋನ್ ಮಾಡಿದಾಗೆಲ್ಲ ಅಜ್ಜಿಯ ಮನೆಗೆ ಈಗ್ಲೆ ಹೋಗಣ ಅಂತ ಅಳೋಕೆ ಶುರು ಮಾಡ್ತಿದ್ದ..

ತಮ್ಮಣ್ಣನ ಅಜ್ಜಿಯ ಮನೆ ಬಹಳ ದೊಡ್ಡದಾಗಿತ್ತು. ಹತ್ತು ಹನ್ನೆರಡು ರೂಮು, ಮನೆ ಸುತ್ತ ದೊಡ್ಡ ಅಂಗಳ,ಕೊಟ್ಟಿಗೆ, ದನದಕೊಟ್ಟಿಗೆ, ಮನೆ ಸುತ್ತ ಬಗೆಬಗೆ ಹಣ್ಣಿನ ಗಿಡಗಳು, ಹೂವಿನ ಗಿಡಗಳಂತೂ ಒಂದು ರಾಶಿ, ಕಾಫಿ,ಅಡ್ಕೆ,ತೋಟಗಳು

ಅದ್ರಲ್ಲೂ ಬೇಸಿಗೆ ರಜೆಯ ಸಮಯದಲ್ಲಿ ತೋಟದಲ್ಲಿ ಮಾಡ್ತಿದ್ದ ಹರ್ಕೆ. ಆ ಹಿಂದ್ಗಡೆ ಹಿತ್ಲಲಿದ್ದ ನೆಕ್ಕರೆಮಾವು  ಅಂದ್ರೆ ತಮ್ಮಣ್ಣನಿಗೆ ಪ್ರಾಣ.

ಅಜ್ಜನೊಂದಿಗೆ ಬೆಳ್ಗೆ ದನ ಮೇಯಿಸೋದು ಗುಡ್ದಲ್ಲಿ ಸಿಗೋ ಕಾಡುಹಣ್ಣು ಜೇಬು ತುಂಬುಸ್ಕೊಂಡು ಬಂದು ಮನೇಲಿ ಎಲ್ಲರಿಗೂ ತೋರ್ಸ್ಕೊಂಡು ತಿನ್ನೋ ಮಜಾನೇ ಬೇರೆಯಿತ್ತು.

ತಮ್ಮಣ್ಣನಿಗೆ ಬಾಲ್ಯದಲ್ಲೆ ಅದು ಅಜ್ಜಿಮನೆಗೆ ಹೋದ್ರಂತೂ ಅವನಿಗೆ ಯಾವುದೇ ಕೊರತೆ ಇರ್ಲಿಲ್ಲ ಮೊಮ್ಮಗನನ್ನ ಕೂರೂಕು ನಿಲ್ಲೋಕು ಬಿಡ್ದೆ ಮುದ್ದಾಡುತಿದ್ರು ಅಜ್ಜ,ಅಜ್ಜಿ ಅತ್ತೆ ಮಾವ.

ತಮ್ಮಣ್ಣನ ಮಾವನಿಗೆ ಇಬ್ರು ಮಕ್ಳು ಅವ್ರು ಇವನಿಗಿಂತ ತುಂಬಾ ದೊಡ್ಡವರು ತಮ್ಮಣ್ಣ ಅಂತೂ ಮಾವನ ಮಕ್ಕಳ ಬಾಲನೇ…

ಮಾವ ಅಂತೂ ಪ್ರತಿದಿನ ಶಿಕಾರಿಗೆ ಹೋಗೋರು ಸಾಮಾನ್ಯವಾಗಿ ದಿನನೂ ಕಾಡಿನಮಾಂಸದ್ದೆ ಸಾರು ಹಾಗೇನಾದ್ರು ಬೇರೆ ಸಾಂಬಾರು ಮಾಡಿದ್ದಾರೆ ಅಂತಂದ್ರೆ ಹಿಂದಿನ ದಿನ ಶಿಕಾರಿಗೆ ಹೋಗಿಲ್ಲ ಅಂತರ್ಥ.

ಬೆಳ್ಗೆ ಈಡೀ ಕುಣಿಯೋದು ರಾತ್ರಿ ಆಗ್ತಾ ಹಠ ಹಿಡಿಯೋದು ಅಮ್ಮನ ಕೈಲಿ ಒದೆ ತಿನ್ನೋದು ಅಜ್ಜಿ ಅಜ್ಜಿ ಸಮಾಧಾನ ಮಾಡೋದು.

ಕೊನೆಗೆ ಅಜ್ಜನ ಕಥೆ ಕೇಳಿ ಅಜ್ಜನ ಎದೆಮೇಲೆ ನಿದ್ರೆ ಮಾಡೋದು.

ತಮ್ಮಣ್ಣನಿಗೆ ಸಂತೋಷ ಅಂದ್ರೆ ಅಜ್ಜಿಮನೆಯಲ್ಲಿದೆ ಅಂತಿದ್ದ ಸಂತೋಷ ಹೇಗೆ ಸಿಗುತ್ತೆ ಅಂದ್ರೆ ಅಜ್ಜಾಜ್ಜಿಯಿಂದ ಸಿಗುತ್ತೆ ಅಂತಿದ್ದ.

ಅಜ್ಜಿಮನೆಯ ತೋಟದ ಬದಿಯಲ್ಲೊಂದು ಹೊಳೆಯಿತ್ತು ಅದರಲ್ಲಿ ಮಾವನ ಮಕ್ಕಳೊಂದಿಗೆ ಹೋಗಿ ಸ್ನಾನ ಮಾಡೋದು, ಅಜ್ಜಿಮನೆ ನಾಯಿಯ ಹಿಡ್ದು ಹೊಳೆಗೆ ಹಾಕೋದು ಅದು ಈಜಿಬರೋದು ನೋಡಿ ಜೋರು ನಗೋದು, ಸಣ್ಣಪುಟ್ಟ ಕಾರ್ಯಕ್ರಮ ಮನೇಲಿ ನಡೆದರಂತೂ ಬಟ್ಟೆ ಒಗಿಯೋದು,ಸ್ನಾನ ಮಾಡೋದೆಲ್ಲ ಹೊಳೆಯಲ್ಲೆ. ವರ್ಷಕ್ಕೊಮ್ಮೆ ಹೊಳೆಯ ಗುಂಡಿಯ ನೀರು ಖಾಲಿಮಾಡಿ ಮೀನು ಹಿಡಿತಿದ್ರು, ಬಲೆಹಾಕಿ ಮೀನು ಹಿಡಿಯೋದು ಮಾಮೂಲಿಯಾಗಿತ್ತು..

ಮಾವ ತಮ್ಮಣ್ಣನಿಗಾಗಿ ಹೊಸ ಸೈಕಲ್ ತಂದು ಕೊಟ್ಟಿದ್ರು, ಮಾವನ ಮಗ ಪೋಂಗಾರಿನ ಮರದ ಗಾಡಿ ಮಾಡಿಕೊಟ್ಟಿದ್ದ, ಮಾವನ ಮಗಳಿಗಂತೂ ತಮ್ಮಣ್ಣನನ್ನ ಹಾಳೆಯಲ್ಲಿ ಕೂರಿಸಿ ಎಳೆಯೋದೆ ಒಂದು ಕೆಲ್ಸ.

ಅತ್ತೆಗಂತೂ ತಮ್ಮಣ್ಣನಿಗೆ ಬೇಕಾದ ತಿಂಡಿ ಮಾಡೋ ಕೆಲ್ಸ..

ಬೆಳ್ಗೆದ್ದು ಅಂಗಳದಲ್ಲಿ ಆಡೋದು, ಅಜ್ಜನೊಂದಿಗೆ ಗುಡ್ಡಗಾಡು ತಿರ್ಗೋದು, ಮಾವನೊಂದಿಗೆ ಗಾಡಿಲಿ ಪ್ಯಾಟೆಗೆ ಹೋಗೋದು ಅಂತೂ ಖುಷಿಯಲ್ಲಿ ಬೇಸಿಗೆ ರಜೆ ಮುಗಿಸಿದ್ದ ತಮ್ಮಣ್ಣ..

ರಜೆ ಮಗಿಸಿ ಮನೆಗೆ ವಾಪಾಸಾದ ತಮ್ಮಣ್ಣ ಆದರೆ ಆತನ ಮನಸ್ಸು ಅಜ್ಜಿಯಮನೆಯಲ್ಲೆ ಇತ್ತು, ಒಂದೆರಡು ದಿನ ಸಪ್ಪೆಯಾಗಿಯೇ ಇದ್ದ ನಂತರ ಶಾಲೆಗೆ ಹೋಗ್ತಾ ಹೋಗ್ತಾ ಸರಿಯಾದ.ಶಾಲೆಯಲ್ಲಂತೂ ಅಜ್ಜಿಯಮನೆಯದ್ದೆ ಸುದ್ದಿಯಾಗಿತ್ತು.

ಅದಾಗಿ ವರುಷದೊಳಗೆ ಅಜ್ಜಾಜ್ಜಿ ತೀರಿಹೋಗುತ್ತಾರೆ.ತೀರಿ ಹೋಗಿ ಕೆಲತಿಂಗಳ ನಂತರ ತಮ್ಮಣ್ಣನ ಮಾವ ಪೇಟೆಯಲ್ಲಿ ಹೊಸ ಮನೆ ಖರೀದಿಸಿ ಹಳ್ಳಿಯ ತಮ್ಮಣ್ಣನ ಅಜ್ಜಿಮನೆ ಮಾರುತ್ತಾರೆ..

ಆದರೆ ತಮ್ಮಣ್ಣ ಮಾತ್ರ ಅಜ್ಜಿಮನೆ ಎಂದರೆ ಅವನ ಕಣ್ಣೆದುರು ಇದ್ದಿದ್ದು ಅದೆ ದೊಡ್ಡಮನೆ.

ಮಾವ ಕರೆಮಾಡಿ ಹೊಸಮನೆಯನ್ನು ನೋಡಲು ಬರೋಕೆ ಹೇಳುತ್ತಾರೆ ದಸರ ರಜೆಗೆ ಬರೋದಾಗಿ ಹೇಳಿರುತ್ತಾರೆ.

ಅಂತೂ ದಸರ ರಜೆ ಬಂತು ತಮ್ಮಣ್ಣನ ಕಾಲುಗಳು ಅಜ್ಜಿಯ ಮನೆಗೆ ಓಡಲು ಸಿದ್ದವಾಗಿತ್ತು ಆದರೆ ಆತನಿಗೆ ಪೇಟೆಯ ಬಗ್ಗೆ ಗೊತ್ತಿರಲಿಲ್ಲ.

ಹೊಸಮನೆಗೆ ಹೋದವನು ಸುತ್ತ ನೋಡುತ್ತಾನೆ ಅಜ್ಜಾಜ್ಜಿಯ ಹುಡುಕುತ್ತಾನೆ ಯಾರಿಲ್ಲ, ಮಾವನ ಮಕ್ಕಳು ಇಲ್ಲ ಇರುವುದು ಅತ್ತೆ ಮಾವ ಮಾತ್ರ.

ಹಾಕಿಕೊಂಡಿದ್ದ ಬಟ್ಟೆ ತೆಗೆದು ಬೇರೆ ಬಟ್ಟೆ ಹಾಕಿ ನಿಧಾನ ಹೊರ ಬರುತ್ತಾನೆ ಗಾಡಿಯ ಸದ್ದು ಅತ್ತೆ ಒಳಗಿಂದ ಹೋಯ್ ಬಾಲೆ ಹೊರಗೆ ರಸ್ತೆ  ಹೋದ್ರೆ ಕಷ್ಟ ಗೇಟ್ ಹಾಕಿ ಅಂದ್ರು, ಮಾವ ಗೇಟುಹಾಕಿ ನಕ್ಕು ತಮ್ಮಣ್ಣನನ್ನ ಎತ್ತಿಕೊಂಡರು ಆಗ ತಮ್ಮಣ್ಣನಿಗೆ ಕಂಡಿದ್ದು ರಾಶಿ ರಾಶಿ ಮನೆಗಳು, ಗಾಡಿಗಳು ಅಷ್ಟೇ.

ತಮ್ಮಣ್ಣ ಮನೆಯ ಹಿಂದೆ ಹೋಗುತ್ತಾನೆ  ಕಾಪೌಂಡ್ ಬಿಟ್ಟು ಬೇರೇನಿಲ್ಲ, ಸುತ್ತಲೂ ಕಾಪೌಂಡ್ ಮಾತ್ರ ಇದೆ.

ನಾಯಿಯಿಲ್ಲ, ಹಣ್ಣುಗಳಿಲ್ಲ, ಅಜ್ಜಾಜ್ಜಿಯಿಲ್ಲ,ದನಗಳಿಲ್ಲ, ಹೂವಿನಗಿಡಗಳಿಲ್ಲ ಯಾವುದು ಇಲ್ಲ.

ಹೊರಗೆ ಕಾಲಿಟ್ಟರೆ ಸಾಕು ಅಮ್ಮ ಎಳೆದುಕೊಂಡು ಬರುತಿದ್ದರು ಹೊರಗಡೆಯ ಆಟಗಳು ಇಲ್ಲವಾದವು ತಮ್ಮಣ್ಣನಿಗೆ.

ಸುಮ್ಮನೆ ಟೇಬಲಿನ ಮೇಲೆ ತಲೆಯಿಟ್ಟು ಹಳೆಯ ಮನೆಯ ಬಗ್ಗೆ ಯೋಚಿಸಲು ಶುರುಮಾಡುತ್ತಾನೆ.

ಆತನ ಮನಸ್ಸಿಗೆ ಬಂದಿದ್ದಿಷ್ಟೇ.ಅಜ್ಜಾಜ್ಜಿ ಎಂದರೆ ಸಂತೋಷ, ಅಜ್ಜಾಜ್ಜಿ ಆ ಹಳೆಯ ಮನೆಯಲ್ಲೆ ಇದ್ದಾರೆ ಅವರನ್ನು ಇಲ್ಲಿಗೆ ಕರೆದು ತರಲಿಲ್ಲ ಅವರಿನ್ನು ಅಲ್ಲೆ ಇದ್ದಾರೆ ಅಜ್ಜಿಯ ಮನೆಯಲ್ಲೆ.

ನಾನು ಆ ಮನೆಗೆ ಹೋಗ್ಬೇಕಿತ್ತು ಅಂತ ಕಣ್ಣಲ್ಲಿ ನೀರು ತುಂಬಿಸಿಕೊಂಡ..

ಇತ್ತೀಚಿನ ಸುದ್ದಿ

ಜಾಹೀರಾತು