10:05 PM Wednesday24 - December 2025
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ | ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ:… ಮೂಡಿಗೆರೆ ತಾಪಂ ಇಒ ದರ್ಬಾರ್‌: ಸರ್ಕಾರಿ ಜೀಪ್‌ ಖಾಸಗಿಯಾಗಿ ದುರ್ಬಳಕೆ; ನಿತ್ಯ 60… ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು

ಇತ್ತೀಚಿನ ಸುದ್ದಿ

ತಮಿಳುನಾಡು:10 ರೂ.ಗಳ ನಾಣ್ಯ ಕೊಟ್ಟು 6 ಲಕ್ಷ ಮೌಲ್ಯದ ಕಾರು ಖರೀದಿಸಿದ ಅಂಗಡಿ ಮಾಲೀಕ!

21/06/2022, 17:51

ಚೆನ್ನೈ(reporterkarnataka.com): ಜನರು 10 ರೂ. ನಾಣ್ಯವನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದರಿಂದ ಬೇಸತ್ತ ತಮಿಳುನಾಡಿನ ವ್ಯಕ್ತಿಯೊಬ್ಬರು 10 ರೂ. ನಾಣ್ಯಗಳನ್ನು ಸಂಗ್ರಹಿಸಿ ಅದರಿಂದಲೇ 6 ಲಕ್ಷ ರೂ.ಮೌಲ್ಯದ ಕಾರು ಖರೀದಿಸಿದ್ದಾರೆ.

ಅರೂರು ನಿವಾಸಿಯಾದ ವೆಟ್ರಿವೇಲ್‌ ಎಂಬವರು ತಾಯಿಯ ಅಂಗಡಿಯನ್ನು ನಡೆಸುತ್ತಿದ್ದರು. ಗ್ರಾಹಕರು 10 ರೂ. ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ ಅಂಗಡಿಯಲ್ಲಿ 10 ರೂ. ನಾಣ್ಯಗಳು ದೊಡ್ಡ ಮಟ್ಟದಲ್ಲಿ ಸಂಗ್ರಹವಾಗಿದ್ದವು. 10 ರೂ. ನಾಣ್ಯಗಳು ಇನ್ನೂ ಬಳಕೆಗೆ ಯೋಗ್ಯವಾಗಿವೆ ಎಂದು ಅರಿವು ಮೂಡಿಸಲು ಸುಮಾರು 6 ಲಕ್ಷ ರೂ. ಮೌಲ್ಯದ ನಾಣ್ಯಗಳನ್ನು ಸಂಗ್ರಹಿಸಿ ಅದರಿಂದ ವೆಟ್ರಿವೇಲ ಕಾರನ್ನು ಖರೀದಿಸಿದ್ದಾರೆ.

ದೊಡ್ಡ ಚೀಲದಲ್ಲಿ ನಾಣ್ಯಗಳೊಂದಿಗೆ ಧರ್ಮಪುರಿಯ ಕಾರು ಶೋ ರೂಮಿಗೆ ಕಾರು ಖರೀದಿಸಲು ಬಂದಾಗ ಮೊದಲು ಅಲ್ಲಿನ ಸಿಬ್ಬಂದಿಗಳಿಗೆ ಆಶ್ಚರ್ಯವಾಯಿತು. ನಂತರ ವೆಟ್ರಿವೇಲ್‌ ದೃಢ ನಿರ್ಣಯ ನೋಡಿ ಕಾರು ಮಾರಾಟ ಮಾಡಲು ಒಪ್ಪಿಕೊಂಡರು. ಚೀಲಗಟ್ಟಲೆ ನಾಣ್ಯಗಳನ್ನು ಎಣಿಸಿದ ನಂತರ ಕೊನೆಗೂ ಮಾರುತಿ ಸುಜುಕಿ ಇಕೋ ಕಾರನ್ನು ವೆಟ್ರಿವೇಲನಿಗೆ ಹಸ್ತಾಂತರಿಸಲಾಗಿದೆ’ ಎಂದು ಶೋ ರೂಂನವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು